ರಾಷ್ಟ್ರೀಯ

ಬಾಡಿಗೆ ಮನೆ ಕೊಡಿಸುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ ಬ್ರೋಕರ್

Pinterest LinkedIn Tumblr

Rape

ನವದೆಹಲಿ: ಎರಡು ವರ್ಷಗಳ ಹಿಂದೆ ರಾಜಧಾನಿ ನವದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ರಾಷ್ಟ್ರದಾದ್ಯಂತ ಭಾರೀ ಸುದ್ದಿ ಮಾಡಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದ್ದರೂ ಅತ್ಯಾಚಾರ ಪ್ರಕರಣಗಳೇನು ಕಡಿಮೆಯಾಗಿಲ್ಲ.

ನೋಯ್ಡಾದಲ್ಲಿ ನೂತನ ಕಛೇರಿ ಆರಂಭಿಸಿದ್ದ 21 ವರ್ಷದ ಯುವತಿಯೊಬ್ಬರು ತಮಗೆ ಬಾಡಿಗೆಗೆ ಮನೆ ಬೇಕೆಂದು ಬ್ರೋಕರ್ ಒಬ್ಬನ ಬಳಿ ಹೇಳಿದ್ದು ಮನೆ ತೋರಿಸುವುದಾಗಿ ಆಕೆಯನ್ನು ತನ್ನ ಕಛೇರಿಗೆ ಕರೆಸಿಕೊಂಡ ಆತ ಕಛೇರಿಯಲ್ಲೇ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

ಮೋಹನ್ ಎಂಬಾತನೇ ಅತ್ಯಾಚಾರವೆಸಗಿರುವ ಆರೋಪಿಯಾಗಿದ್ದು ಈ ಯುವತಿಗೆ ಮನೆ ತೋರಿಸುವುದಾಗಿ ಮಾರ್ಕೆಟ್ ಏರಿಯಾ ಪ್ರದೇಶಕ್ಕೆ ಭಾನುವಾರ ಕರೆಸಿಕೊಂಡಿದ್ದಾನೆ. ನಂತರ ಕಛೇರಿಯಲ್ಲಿ ಕುಳಿತು ಮಾತನಾಡೋಣ ಎಂದು ಆಕೆಯನ್ನು ಕರೆದುಕೊಂಡು ಹೋಗಿ ಈ ಕೃತ್ಯವೆಸಗಿದ್ದಾನೆ.

ಈ ಸಂಬಂಧ ಯುವತಿ ನೋಯ್ಡಾದ ಸೆಕ್ಟರ್ 20 ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ನಾಪತ್ತೆಯಾಗಿರುವ ಬ್ರೋಕರ್ ಮೋಹನ್ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Write A Comment