ಕನ್ನಡ ವಾರ್ತೆಗಳು

ಹುತಾತ್ಮರ ವಿಜಯ ದಿವಸ್ ಆಚರಣೆ

Pinterest LinkedIn Tumblr

kargil_day_photo_1

ಮಂಗಳೂರು, ಡಿಸೆಂಬರ್ 16: ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ 317D , ದ.ಕ ಜಿಲ್ಲಾ ಮಾಜಿ ಸೈನಿಕ ಸಂಘ ಹಾಗೂ ಶಾಸ್ತನು ಶ್ರೀ ಭೂತನಾಥೇಶ್ವರ ಇವರ ಅಶ್ರಯದಲ್ಲಿ ನಗರದ ಕದ್ರಿ ಬಳಿ ಇರುವ ಯುದ್ದ ಸ್ಮಾರಕ ಉದ್ಯಾವನದಲ್ಲಿ ಮಂಗಳವಾರ “ಹುತಾತ್ಮರ ವಿಜಯ ದಿನ” ವನ್ನು ಆಚರಿಸಲಾಯಿತು.

ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಸಭೆಯನ್ನುದ್ದೇಶಿಸಿ ಅನೇಕ ವೀರ ಯೋಧರು ತಮ್ಮ ದೇಶಕ್ಕಾಗಿ ಮಾಡಿದ ಅಪಾರ ತ್ಯಾಗವನ್ನು ನಾಗರಿಕರು ನೆನಪಿಡಬೇಕು ಎಂದು ಹೇಳಿದರು. ಮಾಜಿ ಸೇವಾ ಸಂಘದ ಅಧ್ಯಕ್ಷ, ಕರ್ನಲ್ ಎನ್, ಶರತ್ ಭಂಡಾರಿ,ವಿಜಯ್ ದಿವಸ್ ಇದರ ಮಹತ್ವ ಬಗ್ಗೆ ಮಾತನಾಡಿದರು.

kargil_day_photo_2 kargil_day_photo_3 kargil_day_photo_4 kargil_day_photo_5 kargil_day_photo_6 kargil_day_photo_7 kargil_day_photo_8

ಸಂಜೆ ವಿಜಯ ದಿವಸ್ ಪ್ರಯುಕ್ತ ನೃತ್ಯ, ಮನೋರಂಜನೆ 1971 ಯುದ್ಧದ ತುಣುಕು, ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಹಾಗೂ ನೌಕಾಪಡೆಯ ವಿಶಿಷ್ಟ ಸೇವಾ ಕಮಾಂಡರ್ ಜೆರೋಮ್ ಕ್ಯಾಸ್ಟಲಿನೊ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಬ್ರಿಗೇಡಿಯರ್ ಸದಾಶಿವ ಪ್ರಭು, ,ಶಿವಸೇನೆ ಪದಕ ಪುರಸ್ಕೃತ, ವಿನೋದ್ ಅಡಪ್ಪ, ಇವರನ್ನು ಸನ್ಮಾನಿಸಲಾಗುವುದು.

ಪಶ್ಚಿಮ ವ್ಯಾಪ್ತಿ, ಐಜಿಪಿ ಅಮೃತ್ ಪಾಲ್ , ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟೀ ವಿಶಾಲ್ ಹೆಗ್ಡೆ, ಜಿಲಾಧಿಕಾರಿ ಎ.ಬಿ. ಇಬ್ರಾಹಿಂ ಮತ್ತು ಇತರರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ

kargil_day_photo_9 kargil_day_photo_10 kargil_day_photo_11 kargil_day_photo_12 kargil_day_photo_13 kargil_day_photo_14 kargil_day_photo_15

ನಗರ ಪೊಲೀಸ್ ಆಯುಕ್ತ, ಆರ್.ಹೀತೇಂದ್ರ , ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉಮಾ ಎಂ.ಜಿ., ಜಿಲ್ಲಾ ಪಂಚಾಯತ್ ಸಿಇಒ ತುಳಸಿ ಮದ್ದಿನೇನಿ, ಎಸ್ಪಿ, ಡಾ ಶರಣ್ಣಪ್ಪ, ನಿಟ್ಟೆ ವಿಶ್ವವಿದ್ಯಾಲಯ,ಕುಲಪತಿ ಎನ್ ವಿನಯ್ ಹೆಗ್ಡೆ, ಶಾಸ್ತನು ಶ್ರೀ ಭೂತನಾಥೇಶ್ವರ ದೇವಸ್ಥಾನದ ಟ್ರಸ್ಟಿ ವಿಜಯನಾಥ್ ವಿಠಲ ಶೆಟ್ಟಿ ,ಜಿಲ್ಲಾ ಲಯನ್ಸ್ ಗವರ್ನರ್ ಮಂಜುನಾಥ್ ಭಂಡಾರಿ, ಮೊದಲಾದವರು ಉಪಸ್ಥಿತರಿದ್ದರು.

Write A Comment