ಮನೋರಂಜನೆ

ಅಖಿಲ್ ಅಕ್ಕಿನೆನಿಯನ್ನು ರಿಜೆಕ್ಟ್ ಮಾಡಿದ ಆಲಿಯಾ ಭಟ್ !

Pinterest LinkedIn Tumblr

alia

ಮುಂಬೈ:ಟಾಲಿವುಡ್‍ನಿಂದ ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ ದಿ ಮೋಸ್ಟ್ ಹ್ಯಾಪನಿಂಗ್ ಯಂಗ್ ಹಿರೋ ಅಖಿಲ್ ಅಕ್ಕಿನೆನಿ ಜೊತೆಗೆ ಅಭಿನಯಿಸಲು ಆಲಿಯಾ ಭಟ್ ನಿರಾಕರಿಸಿದ್ದಾರಂತೆ. ಮಾಹಿತಿಯ ಪ್ರಕಾರ ಟಾಲಿವುಡ್‍ನಲ್ಲಿ ಅಭಿನಯಿಸೋಕೆ ಇದು ಸರಿಯಾದ ಸಮಯವಲ್ಲ ಎಂದು ಆಲಿಯಾ ಚಿಂತಿಸುತ್ತಿದ್ದಾರೆ.

ಸದ್ಯಕ್ಕೆ ಆಲಿಯಾ ಬಾಲಿವುಡ್‍ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ಬೇರೆ ಇಂಡಸ್ಟ್ರಿಯಲ್ಲಿ ಅಭಿನಯಿಸುವ ಸಮಯವು ಇಲ್ಲ. ಜೊತೆಗೆ ಆಲಿಯಾ ಸ್ಟಾರ್‍ಗಿರಿಯ ನಿರೀಕ್ಷೆಯಲ್ಲೂ ಇರಬಹುದು. ಅಖಿಲ್ ಪ್ರಸ್ತುತ ಸ್ಟಾರ್‍ಗಿರಿ ಹೊಂದಿಲ್ಲವಾದರಿಂದ ಟಾಲಿವುಡ್‍ನ ಚೊಚ್ಚಲ ಚಿತ್ರ ಹಿಟ್ ನೀಡದ್ದಿದ್ದರೆ ಎನ್ನುವ ಸಂಶಯದಿಂದಾಗಿ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್‍ನಲ್ಲಿ ತೆರೆಕಂಡ ತನ್ನ ಮೊದಲ ಚಿತ್ರ ಸ್ಟುಡೆಂಟ್ ಆಫ್ ದಿ ಇಯರ್ ಮತ್ತು ಹೈವೆ ಸಕ್ಸಸ್‍ನಿಂದ ಬೀಗುತ್ತಿರೋ ಈ ಸೆನ್ಸೆಷನಲ್ ನಟಿ ಸದ್ಯಕ್ಕೆ ಸಿದ್ಧಾರ್ಥ ಮಲ್ಹೋತ್ರ ಜೊತೆಗೆ ಅಭಿನಯಿಸುವ ಉದ್ದೇಶದಲ್ಲಿದ್ದಾರೆ.

ಎಲ್ಲವೂ ಸರಿ ಹೋದರೆ ಅಖಿಲ್‍ನ ಚಿತ್ರ ಶೀಘ್ರವೆ ಆರಂಭವಾಗಲಿದ್ದು, ಅಕ್ಕಿನೆನಿ ಅಭಿಮಾನಿಗಳ ಮುಂದೆ ಬರಲಿದೆ. ಆಲಿಯಾ ಮತ್ತು ಅಖಿಲ್ ಬಗ್ಗೆ ನಿಮ್ಮ ಅಭಿಪ್ರಾಯ?

Write A Comment