ಮನೋರಂಜನೆ

ಅಜರುದ್ದೀನ್ ಪಾತ್ರಕ್ಕೆ ಇಮ್ರಾನ್ ಹಶ್ಮಿ ಬ್ಯಾಟಿಂಗ್

Pinterest LinkedIn Tumblr

Azharrudin and Sangta Bijlani.JPG

ಮಿಲ್ಕಾ ಸಿಂಗ್ ಜೀವನವನ್ನಾಧರಿಸಿದ ‘ಭಾಗ್ ಮಿಲ್ಕಾ ಭಾಗ್’, ಭಾರತದ ಮಹಿಳಾ ಬಾಕ್ಸರ್ ಮೇರಿಕೋಮ್ ಅವರ ಜೀವನ ಕಥೆ ಕುರಿತ ‘ಮೇರಿ ಕೋಮ್’ ಚಿತ್ರಗಳು ಮೂಡಿಬಂದಿದ್ದು ಗೊತ್ತೇ ಇದೆ. ಇದಾದ ನಂತರ ಭಾರತೀಯ ಹಾಕಿ ಮಾಂತ್ರಿಕ ಧ್ಯಾನ್‌ಚಂದ್, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕುರಿತ ಚಿತ್ರಗಳನ್ನು ತೆರೆಯ ಮೇಲೆ ತರಲು ನಿರ್ದೇಶಕರು ರೆಡಿಯಾಗುತ್ತಿದ್ದಾರೆ. ಈ ಸಾಲಿಗೆ ಅಜರುದ್ದೀನ್ ಅವರ ಬಯೋಪಿಕ್ ಕೂಡ ಸೇರಿದ್ದು, ಚಿತ್ರದ ರೂಪುರೇಷೆಗಳು ಸಿದ್ಧವಾಗುತ್ತಿವೆ.

ಇಮ್ರಾನ್ ಹಶ್ಮಿ, ಕರೀನಾ ನಟನೆ
ಅಂದಹಾಗೆ ಕ್ರಿಕೆಟಿಗ ಅಜರುದ್ದೀನ್ ಕುರಿತಾದ ಈ ಬಯೋಪಿಕ್ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಅಜರ್ ಪಾತ್ರವನ್ನು ಬಾಲಿವುಡ್‌ನ ಕಿಸ್ಸರ್ ಬಾಯ್ ಎಂದೇ ಗುರುತಿಸಿಕೊಂಡ ಇಮ್ರಾನ್ ಹಶ್ಮಿ ಮಾಡಲಿದ್ದಾರೆ. ಅಜರ್ ಪ್ರೇಯಸಿ ಕಂ ಪತ್ನಿ ಸಂಗೀತಾ ಬಿಜಲಾನಿ ಪಾತ್ರಕ್ಕೆ ಕರೀನಾ ಕಪೂರ್ ಅವರ ಹೆಸರು ಕೇಳಿಬರುತ್ತಿದೆ. ಈಗಾಗಲೇ ಬೆಬೋ ಕರೀನಾ ಅವರಿಗೆ ಆಫರ್ ಬಂದಿದ್ದು, ಅವರು ಇನ್ನೂ ಅಂತಿಮ ನಿರ್ಧಾರವನ್ನು ತಿಳಿಸಿಲ್ಲ.

ಚಾಲೆಂಜಿಂಗ್ ರೋಲ್:
ಅಜರುದ್ದೀನ್ ಅವರ ಪಾತ್ರ ನನ್ನ ಪಾಲಿಗೆ ಸವಾಲು. ಅವರ ಕೆರಿಯರ್ ಆ ರೀತಿಯಲ್ಲಿದೆ. ಒಬ್ಬ ಯಶಸ್ವಿ ಕ್ರಿಕೆಟರ್. ಜತೆಗೆ ವಿವಾದಗಳು, ವೃತ್ತಿಯಲ್ಲಿನ ಏರಿಳಿತಗಳು, ಮ್ಯಾಚ್ ಫಿಕ್ಸಿಂಗ್ ಆರೋಪ, ಬಿರುಕುಗಳಿಂದ ಕೂಡಿದೆ, ಹಳಿ ತಪ್ಪಿದ ವೈವಾಹಿಕ ಜೀವನ, ಹಿರಿಯ ಮಗನ ಆಕಸ್ಮಿಕ ಸಾವು, ರಾಜಕೀಯ ಕ್ಷೇತ್ರ…ಹೀಗೆ ಅಜರುದ್ದೀನ್ ಬದುಕಿನ ಎಲ್ಲ ಮುಖವನ್ನು ಕಂಡವರು. ಇವುಗಳನ್ನೆಲ್ಲ ತೆರೆಯ ಮೇಲೆ ತೋರಿಸುವುದು ನನಗೆ ಸವಾಲಿನ ಸಂಗತಿ. ಈ ಬಗ್ಗೆ ಅಜರುದ್ದೀನ್ ಅವರ ಬಳಿ ಚರ್ಚಿಸಿದ್ದೇನೆ ಎಂದು ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.

ಅಜರುದ್ದೀನ್ ಅವರ ಜೀವನಚರಿತ್ರೆಯನ್ನು ಎರಡೂವರೆ ಗಂಟೆಗಳಲ್ಲಿ ಕವರೇಜ್ ಮಾಡುವುದು ತುಂಬಾನೇ ಕಷ್ಟ. ಆದರೂ ಎಲ್ಲ ವಿಷಯವನ್ನೂ ಟಚ್ ಮಾಡಬೇಕೆಂಬ ಉದ್ದೇಶದಿಂದ ಸೂಕ್ತ ಪ್ಲ್ಯಾನ್ ಹಾಕಿಕೊಳ್ಳ್ಳುತ್ತಿದ್ದೇವೆ ಎನ್ನುತ್ತಾರೆ ಹಶ್ಮಿ.

ಸದ್ಯ ಹಶ್ಮಿ ಕೂಡ ಬಾಲಿವುಡ್‌ನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಿದ್ದಾರೆ. ಅವರಿಗೆ ಕೂಡ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಉತ್ತಮ ಚಿತ್ರದ ಅಗತ್ಯವಿದೆ. ಆದರೆ ಹಶ್ಮಿ ಮಾತ್ರ ಬಾಕ್ಸಾಫೀಸ್ ಹಿಟ್ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಒಂದು ವೇಳೆ ನಟಿಸಿದ ಚಿತ್ರ ಫ್ಲಾಪ್ ಆದರೂ ಆ ಬಗ್ಗೆ ಬೇಸರ ವ್ಯಕ್ತಪಡಿಸಿದವರಲ್ಲ. ಚಿತ್ರದಲ್ಲಿ ನಾಯಕ ನಟನಾಗಿ ಏನು ಮಾಡಬೇಕೋ ಅದನ್ನು ಮಾತ್ರ ಅಚ್ಚುಕಟ್ಟಾಗಿ ಮಾಡುತ್ತಾರೆ. ಅದೇನೇ ಇರಲಿ, ಈ ಚಿತ್ರದಿಂದ ಹಶ್ಮಿಗೆ ಬೂಸ್ಟ್‌ಅಪ್ ಸಿಗಬಹುದಾ ಅಂತ ಕಾದುನೋಡಬೇಕಿದೆ.

Write A Comment