ಮುಂಬಯಿ : “ಅನ್ಯಾಯದ ವಿರುದ್ದ ಹೋರಾಟ ನಡೆಸುರೊಂದಿಗೆ ಮುಖ್ಯವಾಗಿ ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸುವ ಉದ್ದೇಶದಿಂದ ಮುಂಬಯಿಯಲ್ಲಿ ಮಾತ್ರವಲ್ಲದೆ, ಕರ್ನಾಟಕ ಹಾಗೂ ದೇಶದ ಇತರೆಡೆ ರಾಷ್ಟ್ರೀಯ ಮಾನವ ಹಕ್ಕು ಕೇಂದ್ರವನ್ನು ಸ್ಥಾಪಿಸಲಾಯಿತು.” ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ರಾಷ್ಟ್ರೀಯ ಅಧ್ಯಕ್ಷ ಶಂಕರ ವಿ. ಶೆಟ್ಟಿ ನುಡಿದರು.
ರಾಷ್ಟ್ರೀಯ ಮಾನವ ಹಕ್ಕು ಆಯೋಗದ 14 ನೇ ವಾರ್ಷಿಕೋತ್ಸವ, ಹ್ಯೂಮನ್ ರಾಯ್ಟ್ಸ್ ರಾಷ್ಟೀಯ ಪ್ರಶಸ್ತಿ 2014 ವಿತರಣಾ ಸಮಾರಂಭವು ಡಿ. 14 ರಂದು ಬೊರಿವಲಿ ಪೂರ್ವದ ದೌಲತ್ ನಗರದಲ್ಲಿರುವ ಆಧಾರ್ ಸಭಾಂಗಣದಲ್ಲಿ “ದಿ ಗ್ರೇಟರ್ ಮುಂಬಯಿ”, ಹಿಂದಿ ಪತ್ರಿಕೆಯ ಜಂಟಿ ಆಶ್ರಯದಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಾ ಮುಂಬಯಿಯಲ್ಲಿ ಮೊದಲು ಈ ಸಂಘಟನೆಯನ್ನು ಸ್ಥಾಪಿಸಲು ರಾಜಕೀಯ ಧುರೀಣರ ಸಹಕಾರ ಸಿಗದಿದ್ದರೂ, ದೆಹಲಿಯ ಗಣ್ಯರ ಪ್ರೋತ್ಸಾಹವನ್ನು ಸ್ಮರಿಸಿಕೊಂಡರು.
ಉಪಾಧ್ಯಕ್ಷ ಬಿ. ನಾರಾಯಣ ಎಮ್. ಶೆಟ್ಟಿ ಅವರು ಮಾತನಾಡುತ್ತಾ ನ್ಯಾಯಕ್ಕಾಗಿ ಹೋರಾಟ ನಡೆಸುವ ಈ ಸಂಘಟನೆಯಲ್ಲಿ ಪ್ರತಿಯೊಬ್ಬ ಸದಸ್ಯರು ಕ್ರೀಯಾಶೀಲರಾಗಬೇಕೆಂದರು. ಪ್ರಾಧ್ಯಾಪಕ ಅವಕಾಶ್ ಜಾಧವ್ ಅವರು ಈ ಸಂಘಟನೆಯ ಉದ್ದೇಶ ಹಾಗೂ ಪ್ರಯೋಜನದ ಬಗ್ಗೆ ತಿಳಿಸುತ್ತಾ ಕೆಲವು ಘಟನೆಗಳನ್ನು ನೆನಪಿಸಿಕೊಂಡರು. ಜನಸಾಮಾನ್ಯರ ಸಮಸ್ಯೆ ನಿವಾರಣೆಗೆ ಇಂತಹ ಸಂಘಟನೆ ಅತೀ ಅಗತ್ಯ ಎಂದರು.
ಮಾನವ ಅಧಿಕಾರ ಕೇಂದ್ರ ಮುಂಬಯಿಯ ಕ್ರೆಂ ವಿಭಾಗದ ಅಧ್ಯಕ್ಷ, ಪ್ರಭಾಕರ ಬಿ. ಶೆಟ್ಟಿ, ಕರ್ನಾಟಕದ ಅಧ್ಯಕ್ಷ ಹಾಗೂ ದಕ್ಷಿಣ ಭಾರತದ ಸಾರ್ವಜನಿಕ ಸಂಪರ್ಕಾಧಿಕಾರಿ ದಯಾನಂದ ಶೆಟ್ಟಿ, ಚಾರ್ಕೋಪ್ ವಿಭಾಗದ ಪಿ. ಆರ್. ಓ. ಭಾಸ್ಕರ ಶೆಟ್ಟಿ, ಮಾಧ್ಯಮ ವಿಭಾಗ (ಮಹಾರಾಷ್ಟ್ರ ) ದ ಅಧ್ಯಕ್ಷ, ಪತ್ರಕರ್ತ ಪ್ರೇಮನಾಥ ಶೆಟ್ಟಿ ಮುಂಡ್ಕೂರು, ನ್ಯಾ. ರಾಮ್ ಜಾಧವ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ ಈ ಸಂಘಟನೆಯ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ಮಾಹಿತಿಯಿತ್ತರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೇಶದ ವಿವಿದೆಡೆಯಿಂದ ಆಗಮಿಸಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ 50 ಕ್ಕೂ ಮಿಕ್ಕಿ ಕಾರ್ಯಕರ್ತರಿಗೆ ಹ್ಯೂಮನ್ ರಾಯ್ಟ್ಸ್ ನೇಷನಲ್ ಆವಾರ್ಡ್ 2014 ವಿತರಿಸಿ ಗೌರವಿಸಿದರು.
“ದಿ ಗ್ರೇಟರ್ ಮುಂಬಯಿ” ಪತ್ರಿಕೆಯ ಸಂಪಾದಕ ಹಾಗೂ ಸಂಸ್ಥೆಯ ರಾಷ್ಟೀಯ ಕಾರ್ಯದರ್ಶಿ ನವೀನ್ ಎಸ್. ಪಾಂಡೆ, ದಿಲೀಪ್ ಯಾದವ್, ಸುಜಿತ್ ಯಾದವ್ ಮತ್ತಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ವರದಿ : ಈಶ್ವರ ಎಂ. ಐಲ್