ಮನೋರಂಜನೆ

ಆನಂದ್ ಲಂಡನ್ ಚಾಂಪಿಯನ್ ಮೊದಲ ಬಾರಿ ಪ್ರಶಸ್ತಿ ಎತ್ತಿದ ಭಾರತದ ಗ್ರಾಂಡ್ ಮಾಸ್ಟರ್

Pinterest LinkedIn Tumblr

vishy_2245147f

ಲಂಡನ್, ಡಿ.15: ಮಾಜಿ ವಿಶ್ವ ಚೆಸ್ ಚಾಂಪಿಯನ್ ಭಾರತದ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಬ್ರಿಟಿಷ್ ಗ್ರಾಂಡ್ ಮಾಸ್ಟರ್ ಮೈಕಲ್ ಆ್ಯಡಮ್ಸ್‌ರನ್ನು ಸೋಲಿಸಿ ಮೊದಲ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸೋಮವಾರ ಐದನೆ ಹಾಗೂ ಅಂತಿಮ ಸುತ್ತಿನಲ್ಲಿ ಆನಂದ್ ಅವರು ಇಂಗ್ಲೆಂಡ್‌ನ ಆ್ಯಡಮ್ಸ್ ವಿರುದ್ಧ ಗೆಲುವಿನ ನಗೆ ಬೀರಿದರು. 6 ಆಟಗಾರರು ಪಾಲ್ಗೊಂಡಿದ್ದ ಈ ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆದಿತ್ತು. ಮೊದಲ ನಾಲ್ಕು ಸುತ್ತುಗಳಲ್ಲಿಡ್ರಾ ಸಾಸಿದ್ದ ಆನಂದ್ ಐದನೆ ಸುತ್ತಿನಲ್ಲಿ ಗೆಲುವು ಸಾಸಿ ಪ್ರಶಸ್ತಿ ಬಾಚಿಕೊಂಡರು. ಆನಂದ್ ವಿರುದ್ಧ ಸೋತ ಆ್ಯಡಮ್ಸ್ 4 ಅಂಕ ಪಡೆದು ಅಭಿಯಾನ ಕೊನೆಗೊಳಿಸಿದರು. ನಾಲ್ಕು ಸುತ್ತುಗಳಲ್ಲಿ 4 ಅಂಕಗಳನ್ನು ಪಡೆದಿದ್ದ ಆನಂದ್ ಐದನೆ ಸುತ್ತಿನಲ್ಲಿ ಗೆಲುವಿನೊಂದಿಗೆ 3 ಅಂಕಗಳನ್ನು ಪಡೆದರು. ಇದರೊಂದಿಗೆ 7 ಅಂಕಗಳೊಂದಿಗೆ ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ (7 ಅಂಕ) ಮತ್ತು ಹಾಲೆಂಡ್‌ನ ಅನಿಶ್ ಗಿರಿ (7 ಅಂಕ) ಅವರೊಂದಿಗೆ ಸಮಬಲ ಸಾಸಿದರು. ಆದರೆ ಟೈ-ಬ್ರೇಕ್ ಮೂಲಕ ಆನಂದ್ ಜಯ ಸಾಸಿದರು.

ಅಮೆರಿಕದ ಹಿಕಾರು ನಕಾಮುರಾ (6 ಅಂಕ) ಮತ್ತು ನಂ.2 ಇಟಲಿಯ ೆಬಿಯಾನೊ ಕೆರುವಾನ (4 ಅಂಕ) ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರು. ಆನಂದ್ ಮುಂದೆ ಅವರ ಆಟ ನಡೆಯಲಿಲ್ಲ.

ಅನೀಶ್ ಗಿರಿ -ವ್ಲಾದಿಮಿರ್ ಮತ್ತು ಕ್ರಾಮ್ನಿಕ್ – ನಕಾಮುರಾ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಹೀಗಾಗಿ ಆನಂದ್‌ಗೆ ಅದೃಷ್ಟ ಖುಲಾಯಿಸಿತು.

ಕಳೆದ ಎರಡು ವಾರಗಳ ಹಿಂದೆ ಸೋಚಿಯಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತು ಆರು ಬಾರಿ ಪ್ರಶಸ್ತಿ ಜಯಿಸುವ ಯತ್ನದಲ್ಲಿ ಸತತ ಎರಡನೆ ಬಾರಿ ಮುಗ್ಗರಿಸಿದ್ದ ಆನಂದ್ ಬಳಿಕ ಬೇಗನೆ ಚೇತರಿಸಿಕೊಂಡು ಲಂಡನ್ ಕ್ಲಾಸಿಕ್ ಪಂದ್ಯಾವಳಿಯಲ್ಲಿ ಚೆನ್ನಾಗಿ ಆಡಿ ಪ್ರಶಸ್ತಿ ಎತ್ತಿದ್ದಾರೆ.

Write A Comment