ಅಂತರಾಷ್ಟ್ರೀಯ

18 ವರ್ಷಗಳ ಹಿಂದೆ ಗಲ್ಲಿಗೇರಿದಾತ ಈಗ ನಿರಪರಾಧಿ

Pinterest LinkedIn Tumblr

hang

ಬೀಜಿಂಗ್, ಡಿ. 15: ಹದಿನೆಂಟು ವರ್ಷಗಳ ಹಿಂದೆ ಚೀನಾದ ಹದಿಹರೆಯದ ತರುಣನೊಬ್ಬನನ್ನು ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಗಲ್ಲಿಗೇರಿಸಲಾಗಿತ್ತು. ಸೋಮವಾರ ಆತನನ್ನು ಇಲ್ಲಿನ ನ್ಯಾಯಾಲಯವೊಂದು ನಿರಪರಾಧಿ ಎಂಬುದಾಗಿ ಘೋಷಿಸಿದ್ದು, ಆತ ದೋಷಿ ಎಂಬ ನ್ಯಾಯಾಲಯವೊಂದರ ತೀರ್ಪನ್ನು ರದ್ದುಪಡಿಸಿದೆ.

18 ವರ್ಷ ಪ್ರಾಯದ ಹುಗ್ಜಿಲ್ಟು ಎಂಬಾತ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ದೋಷಿ ಎಂಬುದಾಗಿ 1996ರಲ್ಲಿ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಆದರೆ, ಈ ಅಪರಾಧವನ್ನು ತಾನು ಮಾಡಿರುವುದಾಗಿ ಇನ್ನೋರ್ವ ವ್ಯಕ್ತಿ 2005ರಲ್ಲಿ ತಪ್ಪೊಪ್ಪಿಕೊಂಡಾಗ ಹಿಂದಿನ ಪ್ರಕರಣದ ತೀರ್ಪಿನ ಬಗ್ಗೆ ಶಂಕೆಗಳು ಎದ್ದವು.

‘‘ಇನ್ನರ್ ಮಂಗೋಲಿಯ ಹೈಯರ್ ಪೀಪಲ್ಸ್ ನ್ಯಾಯಾಲಯ ಹುಗ್ಜಿಲ್ಟುರನ್ನು ದೋಷಿ ಎಂಬುದಾಗಿ ತೀರ್ಮಾನಿಸಿತ್ತು. ಆದರೆ, ಆ ತೀರ್ಪು ವಾಸ್ತವಾಂಶಗಳಿಗೆ ಅನುಗುಣವಾಗಿ ಇಲ್ಲ ಹಾಗೂ ಸಾಕಷ್ಟು ಪುರಾವೆಯಿಲ್ಲ’’ ಎಂದು ಹಾನ್‌ಹಾಟ್‌ನಲ್ಲಿನ ನ್ಯಾಯಾಲಯವೊಂದು ತನ್ನ ತೀರ್ಪಿನಲ್ಲಿ ಹೇಳಿದೆ. ಹುಗ್ಜಿಲ್ಟುವಿನ ಹೆತ್ತವರಿಗೆ ನ್ಯಾಯಾಲಯ 30,000 ಯುವಾನ್ (ಸುಮಾರು 3 ಲಕ್ಷ ರೂ.) ಪರಿಹಾರ ಘೋಷಿಸಿದೆ.

Write A Comment