ಕರ್ನಾಟಕ

ಪ್ರಿಯತಮೆಯ ಜೊತೆ ಪರಾರಿಯಾದ ಪೇದೆ: ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥ

Pinterest LinkedIn Tumblr

LOVERS CELEBRATE VALENTINES DAY IN BHOPAL.

ಕೃಷ್ಣರಾಜಪೇಟೆ, ಡಿ.15: ತಾಲೂಕಿನ ಕಿಕ್ಕೇರಿ ಹೋಬಳಿಯ ವಡಕಹಳ್ಳಿ ಗ್ರಾಮದ ಪೋಲಿಸ್ ಪೇದೆ ವೈರಮುಡಿ (26) ಮತ್ತು ಯಶೋದಾ(22) ಪರಸ್ಪರ ಪ್ರೇಮಿಸುತ್ತಿದ್ದು ತಮ್ಮ ಮದುವೆಗೆ ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಮನೆಬಿಟ್ಟು ಪರಾರಿಯಾಗಿದ್ದರು ನಂತರ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಾನದಲ್ಲಿ ವಿವಾಹ ಮಾಡಿಕೊಂಡು ಬಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರ ಮುಂದೆ ರಕ್ಷಣೆ ನೀಡುವಂತೆ ಕೋರಿದ್ದಾರೆ.

ಶ್ರೀರಂಗಪಟ್ಟಣ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಡಕಹಳ್ಳಿ ಗ್ರಾಮದ ಚಿಕ್ಕೇಗೌಡರ ಮಗ ವೈರಮುಡಿ ಮತ್ತು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ಅದೇ ಗ್ರಾಮದ ನಾರಾಯಣ ಅವರ ಮಗಳು ಯಶೋಧಾ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೇಮಿಸುತ್ತಿದ್ದರು. ಆದರೆ ಇಬ್ಬರೂ ಪ್ರೇಮಿಗಳ ವಿವಾಹಕ್ಕೆ ಎರಡೂ ಮನೆಯವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರಿಂದಾಗಿ ಮನೆಬಿಟ್ಟು ಓಡಿಹೋಗಿ ಮದುವೆಯಾಗಲು ನಿರ್ಧರಿಸಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು.

ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಾನದಲ್ಲಿ ಮದುವೆಯಾದ ಪ್ರೇಮಿಗಳು ತಮ್ಮ ಪೋಷಕರಿಂದ ರಕ್ಷಣೆ ನೀಡುವಂತೆ ಹಾಗೂ ತಾವು ಒಂದಾಗಿ ಬಾಳಲು ಅನುವು ಮಾಡಿಕೊಡುವಂತೆ ಕೋರಿ ಇಂದು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಟಿ.ಎಂ.ಪುನೀತ್ ಅವರ ಮುಂದೆ ಹಾಜರಾದರು. ಕೂಡಲೇ ಎರಡೂ ಕುಂಟುಂಬಗಳ ಮುಖ್ಯಸ್ಥರು ಹಾಗೂ ಗ್ರಾಮದ ಮುಖಂಡರಿಗೆ ಸುದ್ದಿಯನ್ನು ಮುಟ್ಟಿಸಿದ ಗ್ರಾಮಾಂತರ ಪೊಲೀಸರು ವಧು-ವರನ ತಂದೆ-ತಾಯಿಗಳು, ಪೋಷಕರು ಹಾಗೂ ಗ್ರಾಮಸ್ಥರ ಮನವೊಲಿಸಿ ಎಲ್ಲರ ಮುಂದೆ ಹೂಮಾಲೆಯನ್ನು ಹಾಕಿಸಿ ಆಶೀರ್ವದಿಸಿ ಕಳುಹಿಸಿಕೊಟ್ಟರು.

ವಧೂ-ವರನ ಕುಟುಂಬಗಳ ಮಧ್ಯೆ ನಡೆದ ರಾಜಿ ಸಂಧಾನದಲ್ಲಿ ಮುಖಂಡರಾದ ಎಲ್.ಪಿ.ನಂಜಪ್ಪ, ಕೋಡಿಮಾರನಹಳ್ಳಿ ದೇವರಾಜು, ಜಾನೇಗೌಡ, ಡಾ.ಎಸ್.ಕೃಷ್ಣಮೂರ್ತಿ, ಭಾಗವಹಿಸಿ ವಧು ವರರನ್ನು ಹರಸಿ ಆಶೀರ್ವದಿಸಿ ಬೀಳ್ಕೊಟ್ಟರು.

Write A Comment