ಮನೋರಂಜನೆ

ರಜನಿಕಾಂತ್ ಮುಂದಿನ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ !

Pinterest LinkedIn Tumblr

rajinikanth-sudeep

ಶುಕ್ರವಾರ ಸೂಪರ್ ಸ್ಟಾರ್ ರಜನಿಯವರ ಪಾಲಿಗೆ ವಿಶೇಷ ದಿನವಾಗಿತ್ತು. ಮೊದಲನೇಯದು ಅಂದು ಅವರ ಹುಟ್ಟು ಹಬ್ಬ. ಮತ್ತೊಂದು ಕಾರಣವೆಂದರೆ ಅವರ ‘ಲಿಂಗಾ’ ಚಿತ್ರ ಅಂದೇ ಬಿಡುಗಡೆಯಾಗುವುದಿತ್ತು. ಅಂದು ಬೆಳಗಿನಿಂದಲೂ ರಜನಿಯವರ ಅತ್ಮೀಯರು, ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಿದ್ದು ರಜನಿಯವರನ್ನು ಬಿಡುವಿಲ್ಲದಂತೆ ಮಾಡಿತ್ತು.

ರಜನಿಯವರ ಫೋನಂತೂ ಒಂದು ಕ್ಷಣವೂ ಅವರನ್ನು ಪುರುಸೊತ್ತಿಲ್ಲದಂತೆ ಮಾಡಿದ್ದು ದೇಶ- ವಿದೇಶಗಳಲ್ಲಿರುವ ಅವರ ಸ್ನೇಹಿತರು ಹುಟ್ಟು ಹಬ್ಬದ ವಿಷ್ ಮಾಡುತ್ತಿದ್ದರು. ಆ ವಿಶೇಷ ದಿನದಂದೇ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪರಿಗೆ ಅಪರಿಚಿತ ನಂಬರಿನಿಂದ ಕಾಲ್ ಬಂದಿದೆ. ಯಾರು ಕರೆ ಮಾಡಿರಬಹುದು ಎಂದು ಸುದೀಪ್ ರಿಸೀವ್ ಮಾಡಿದರೆ ಅತ್ತ ಕಡೆಯಿಂದ ಖುದ್ದು ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡುತ್ತಿದ್ದಾರೆ. ಇದರಿಂದ ಸುದೀಪ್ ಒಂದು ಕ್ಷಣ ಅಶ್ಚರ್ಯಚಕಿತರಾಗಿದ್ದಾರೆ.

ಏಕೆಂದರೆ ಅಂದು ರಜನಿಯವರು ಎಷ್ಟು ಬ್ಯುಸಿಯಿದ್ದರೆಂಬುದನ್ನು ಬಲ್ಲ ಸುದೀಪರಿಗೆ ಆ ಸಮಯದಲ್ಲಿ ಅವರಿಂದ ಕರೆ ಬಂದರೆ ಅಶ್ಚರ್ಯವಾಗದಿರುವುದೇ. ಇದನ್ನು ಖುದ್ದು ಸುದೀಪ್ ಟ್ವೀಟ್ ಮೂಲಕ ತಿಳಿಸಿದ್ದು ಅತ್ತ ಕಡೆಯಿಂದ ರಜನಿ ಏನು ಮಾತನಾಡಿದರೆಂಬುದನ್ನು ಹೇಳಿಲ್ಲ. ಆದರೆ ಮೂಲಗಳ ಪ್ರಕಾರ ರಜನಿಕಾಂತ್ ಅವರ ಮುಂದಿನ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆಂಬ ಮಾತು ಕೇಳಿ ಬರುತ್ತಿದ್ದು ಈ ವಿಷಯವನ್ನು ತಿಳಿಸಲಿಕ್ಕಾಗಿಯೇ ರಜನಿ ಫೋನ್ ಮಾಡಿದ್ದರೆಂದು ಹೇಳಲಾಗಿದೆ.

ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಇಲ್ಲಿದೆ ನೋಡಿ. “Thr ws a surprise for me yday,My phone rang,,was an unknown num n i answrd,,It was th SuperStar hmslf on line..Well,,,nice things in store”

Write A Comment