ಮನೋರಂಜನೆ

ಹೃತಿಕ್ ರೋಷನ್ ಈಗ ಕಂಗನಾ ರಣಾವತ್ ಜೊತೆ ರೋಮ್ಯಾನ್ಸ್ ?

Pinterest LinkedIn Tumblr

rithik-kangana

ಇಂತದೊಂದು ಪ್ರಶ್ನೆ ಈಗ ಬಾಲಿವುಡ್ಡಿನಲ್ಲಿ ಮೂಡಿದೆ. ಪತ್ನಿ ಸೂಸಾನ್ ರಿಂದ ವಿಚ್ಚೇದನ ಪಡೆದು ಸ್ವಲ್ಪ ಕಾಲ ಒಂಟಿಯಾಗಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಈಗ ಕಂಗನಾ ರಣಾವತ್ ಜೊತೆ ರೋಮ್ಯಾನ್ಸ್ ಆರಂಭಿಸಿದ್ದಾರೆಯೇ? ಅವರಿಬ್ಬರು ವಿವಾಹ ಬಂಧನಕ್ಕೊಳಗಾಗಲಿದ್ದಾರೆಯೋ ಎಂಬುದರ ಸುತ್ತಲೇ ಚಿತ್ರ ಜಗತ್ತಿನ ಪಂಡಿತರು ಗಿರಕಿ ಹೊಡೆಯುತ್ತಿದ್ದಾರೆ.

ಇದಕ್ಕೆ ಕಾರಣವಾಗಿರುವುದು ಕಂಗನಾ ರಣಾವತ್ ಆಡಿರುವ ಮಾತುಗಳು. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಂಗನಾ, ನನ್ನ ಹೃದಯದಲ್ಲಿ ವ್ಯಕ್ತಿಯೊಬ್ಬರಿದ್ದಾರೆ. ತಾವು ಅದನ್ನು ಇದುವರೆಗೂ ಮುಚ್ಚಿಟ್ಟಿದ್ದು ಈಗ ಬಹಿರಂಗವಾಗಿ ಹೇಳುವ ಕಾಲ ಸನಿಹದಲ್ಲಿದೆ ಎಂದು ಹೇಳಿರುವುದು ಅದು ಹೃತಿಕ್ ರೋಷನ್ ಕುರಿತಾಗಿಯೇ ಇರಬಹುದೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕ್ರಿಶ್ 3 ಚಿತ್ರದ ಸಂದರ್ಭದಲ್ಲಿ ಹೃತಿಕ್ ಹಾಗೂ ಕಂಗನಾ ರಣಾವತ್ ಪರಸ್ಪರ ನಿಕಟವಾಗಿದ್ದನ್ನು ನೋಡಿದ್ದ ಬಾಲಿವುಡ್ ಮಂದಿ ಇವರಿಬ್ಬರ ನಡುವೆ ಕುಛ್ ಕುಛ್ ಇದೆ ಎಂದು ಅಂದುಕೊಂಡಿದ್ದರು. ಈಗ ಕಂಗನಾ ಆಡಿರುವ ಮಾತುಗಳಿಂದಾಗಿ ಆಕೆ ಹೃತಿಕ್ ರೋಷನ್ ತನ್ನ ಪತ್ನಿ ಸೂಸನ್ ರಿಂದ ವಿಚ್ಚೇದನ ಪಡೆಯುವ ಸಮಯಕ್ಕಾಗಿ ಕಾದು ಈಗ ಬಹಿರಂಗಪಡಿಸಲು ಮುಂದಾಗಿರಬಹುದಾ ಎಂದು ಭಾವಿಸುತ್ತಿದ್ದಾರೆ.

ಆದರೆ ಹೃತಿಕ್ ಮಾತ್ರ ಇದೆಲ್ಲವೂ ಕಪೋಲಕಲ್ಪಿತ ವರದಿಗಳು. ಆಕೆ ನನ್ನ ಒಳ್ಳೆಯ ಗೆಳತಿಯಷ್ಟೇ ಎಂದು ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಆದರೆ ಇಂತದ್ದನ್ನು ಬಹಳ ನೋಡಿರುವ ಬಾಲಿವುಡ್ ಮಂದಿ ಮಾತ್ರ ಹೃತಿಕ್ ಮಾತನ್ನು ನಂಬಲು ತಯಾರಿಲ್ಲ.

Write A Comment