ಕರ್ನಾಟಕ

ಪತ್ನಿಯೊಂದಿಗಿನ ‘ಹಾಸಿಗೆ ಸುಖ’ವನ್ನು ಸ್ನೇಹಿತರಿಗೆ ವಾಟ್ಸ್ ಅಫ್ ನಲ್ಲಿ ಹಂಚಿದ ವಿಕೃತ ಕಾಮಿ

Pinterest LinkedIn Tumblr

sex

ಹೆಂಡತಿಯ ಜತೆ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಭೂಪನೊಬ್ಬ ತನ್ನ ಸ್ನೇಹಿತರಿಗೆ ವಾಟ್ಸ್ ಅಫ್ ನಲ್ಲಿ ಕಳುಹಿಸುತ್ತಿದ್ದ ವಿಲಕ್ಷಣ ಘಟನೆ ನಡೆದಿದ್ದು, ಈ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಡೆದಿದ್ದೇನು ..?

ಮೈಸೂರಿನ ನಿವಾಸಿಯಾದ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು ಪತ್ನಿಯೊಂದಿಗೆ ವಾಸಮಾಡುತ್ತಿದ್ದ. ತನ್ನ ಪತ್ನಿಯ ಜತೆಗೆ ನಡೆಸಿದ ಕಾಮ ಚೇಷ್ಟೆಗಳನ್ನು ವಾಟ್ಸ್ ಅಫ್ ನಲ್ಲಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.

ಅಲ್ಲದೇ ತನ್ನ ಚಿಕ್ಕಮ್ಮನ ಮಗಳು ಹಾಗೂ ಹೆಂಡತಿಯ ತಂಗಿಯ ಜತೆಗೂ ಈತ ಅಕ್ರಮ ಸಂಬಂಧ ಹೊಂದಿದ್ದು ಅವರ ಜತೆ ನಡೆಸಿದ ಸರಸ ಸಲ್ಲಾಪವನ್ನೂ ಸ್ನೇಹಿತರ ಜತೆ ವಾಟ್ಸ್ ಅಫ್ ನಲ್ಲಿ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ. ತನ್ನ ಬಾವನ ಘನಕಾರ್ಯ ತಿಳಿದ ನಾದಿನಿ ಈ ಬಗೆಗೆ ಪೊಲೀಸರಿಗೆ ದೂರು ನೀಡಿದ್ದು ಮೈಸೂರಿನ ಪೊಲೀಸರು ಆರೋಪಿ ಕಾಮುಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Write A Comment