ಮನೋರಂಜನೆ

ಅಂಬರೀಶ್ ಮುತ್ತಿನ ಹಿಂದೆ ರಾಜಕೀಯ: ಅಭಿಮಾನಿಗಳ ಆಕ್ರೋಶ

Pinterest LinkedIn Tumblr

ambarish-kissing

ಬೆಂಗಳೂರು: ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಯುವತಿಯನ್ನು ಚುಂಬಿಸುತ್ತಿರುವ ಚಿತ್ರ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಇದು ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಅಂಬರೀಷ್ ಅಭಿಮಾನಿಗಳು ಹೇಳಿದ್ದಾರೆ.

ಅಂಬಿ ಚುಂಬಿಸುತ್ತಿರುವ ಯುವತಿ ಜೈಜಗದೀಶ್, ವಿಜಯಲಕ್ಷ್ಮಿ ಪುತ್ರಿ. ಚಿಕ್ಕ ಮಗು ಇದ್ದಾಗನಿಂದಲೂ ಆಕೆಯನ್ನು ಆಡಿಸುತ್ತಿರುವ ಅಂಬಿ, ಆಕೆ ಅಂಬಿಗೆ ಮೊಮ್ಮಗಳಿದ್ದ ಹಾಗೆ, ಅದು ಪ್ರೀತಿಯ ಮುತ್ತು: ಅಭಿಮಾನಿಗಳ ಸ್ಪಷ್ಟನೆ.

ಏಕೆಂದರೆ ಈ ಚಿತ್ರದಲ್ಲಿರವ ಯುವತಿ ಹಿರಿಯ ನಟಿ ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ. ಅಂಬರೀಶ್ ಅವರ ಮೊಮ್ಮಗಳ ರೀತಿಯಲ್ಲಿರುವ ಈ ಯುವತಿ ಅಂಬಿಯನ್ನು ಚುಂಬಿಸಿರುವುದು ವಾತ್ಸಲ್ಯದ ಕುರುಹು. ಅಂಬರೀಶ್ ಈ ಯುವತಿ ಮಗುವಾಗಿದ್ದಾಗಿನಿಂದಲೂ ಎತ್ತಿ ಆಡಿಸಿದ್ದಾರೆ. ತಂದೆ ಮಗಳಿಗೆ, ತಾತಾ ಮೊಮ್ಮಗಳಿಗೆ ನೀಡುವ ವಾತ್ಸಲ್ಯದ ಮುತ್ತು ಇದು.

ಇದರಲ್ಲಿ ಯಾವುದೇ ಅಶ್ಲೀಲ ಇಪಲ್ಲ. ಇಂತಹ ವಾತ್ಸಲ್ಯದ ಮುತ್ತು ನೀಡಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಷ್ಟೇ ಅಲ್ಲದೆ, ಇದನ್ನು ಅಂಬರೀಶ್ ವಿರುದ್ದವಾಗಿ ಬಳಸಿಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ರಾಜಕೀಯವಾಗಿ ಈ ಚಿತ್ರವನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಇದೊಂದು ದುರುದ್ದೇಶದ ಪ್ರಕರಣ. ಇದನ್ನು ಯಾರೂ ನಂಬಬಾರದು. ಈ ರೀತಿ ಅಪಪ್ರಚಾರ ಮಾಡುವವರನ್ನು ಶಿಕ್ಷಿಸಬೇಕು ಎಂದು ಅಂಬಿ ಅಭಿಮಾನಿಗಳು ಆಗ್ರಹಿಸಿದ್ದಾರೆ.

Write A Comment