ಫೋಟೋ: ಅಶೋಕ್ ಬೆಳ್ಮಣ್
ವರದಿ: ಗಣೇಶ್ ರೈ – ಯು.ಎ.ಇ.
ಕೊಲ್ಲಿನಾಡಿನ ತುಳುವರ ಬಹುದಿನದ ನಿರೀಕ್ಷೆಯ ಬಲೆ ತೆಲಿಪಾಲೆ ಕಿರು ಹಾಸ್ಯ ನಾಟಕ ಪ್ರಹಸನ 2014 ಡಿಸೆಂಬರ್ 12ನೇ ತಾರೀಕು ಶುಕ್ರವಾರ ಅಪರಾಹ್ನ 2.30 ಕ್ಕೆ ಕಿಕ್ಕಿರಿದು ತುಂಬಿದ್ದ ದುಬಾಯಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣ ನಗುವಿನ ಅಲೆಯ ಹರ್ಷೋದ್ಘಾರದ ಚಿತ್ರಣ ಐತಿಹಾಸಿಕ ಸಾಕ್ಷಿಯಾಯಿತು.
ತುಂಬೆ ಗ್ರೂಪ್ ಮತ್ತು ತುಂಬೆ ಹಾಸ್ಪಿಟಲ್ ಅಜ್ಮಾನ್ ಆಶ್ರಯದಲ್ಲಿ, ನಮ್ಮ ಟಿ. ವಿ. ಮುಖ್ಯಸ್ಥರಾದ ಡಾ. ಶಿವಶರಣ್ ಶೆಟ್ಟಿ ಮತ್ತು ಮಂಗಳೂರಿನ ಬಡಗ ಯಡ ಪದವು ಮಿಜಾರು, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರು ಶ್ರೀ ವಿಜಯ ವಿಠಲನಾಥ ಶೆಟ್ಟಿಯವರ ಸಹಯೋಗದೊಂದಿಗೆ ‘ಕನ್ನಡಿಗ ವರ್ಲ್ಡ್’ ವೆಬ್ಸೈಟ್ನ ಸಹಕಾರದೊಂದಿಗೆ ಅದ್ಭುತ ಪರಿಕಲ್ಪನೆಯಲ್ಲಿ ಮೂಡಿಬಂದ ಬಲೆ ತೆಲಿಪಾಲೆ ದುಬಾಯಿ – 2014 ಸಮಾರಂಭವನ್ನು ನಮ್ಮ ಟಿ.ವಿ. ಕಾರ್ಯಕ್ರಮ ನಿರೂಪಕರಾದ ನವೀನ್ ಶೆಟ್ಟಿ ತಮ್ಮ ಅಪೂರ್ವ ವಾಕ್ ಶೈಲಿಯಲ್ಲಿ ಸರ್ವರನ್ನು ಸ್ವಾಗತಿಸಿ ಚಾಲನೆ ನೀಡಿದರು.
ಬಲೆ ತೆಲಿಪಾಲೆ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ ತುಂಬೆ ಗ್ರೂಪ್ ಮುಖ್ಯಸ್ಥರಾದ ಶ್ರೀ ತುಂಬೆ ಮೊಯಿದ್ದೀನ್ ಮತ್ತು ಯು. ಎ. ಇ. ಯ ಪ್ರಮುಖ ಉಧ್ಯಮಿ ಡಾ. ಬಿ. ಆರ್. ಶೆಟ್ಟಿಯವರು ಜ್ಯೋತಿ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ದುಬೈ ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ನ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್, ಶ್ರೀ ವಿಜಯ ವಿಠಲನಾಥ ಶೆಟ್ಟಿ, ಡಾ. ಶಿವಶರಣ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಎನ್. ಎಂ. ಸಿ. ಹೆಲ್ತ್ ಕೇರ್ ಗ್ರೂಪ್ ನಿರ್ದೇಶಕರಾದ ಶ್ರೀ ಬಿನಯ್ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಫೋರ್ಚುನ್ ಫ್ಲಾಝಾ ಗ್ರೂಪ್ ಆಫ್ ಹೊಟೇಲ್ಸ್ನ ಪ್ರವೀಣ್ ಶೆಟ್ಟಿ, ಚಿಲಿವಿಲಿ ಸತೀಶ್ ವೆಂಕಟರಮಣ, ಹಿಟ್ಶೀಲ್ಡ್ನ ಪ್ರೇಮನಾಥ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಲೆತೆಲಿಪಾಲೆ ಪ್ರದರ್ಶನದ ಬಹುಮಾನದ ಪ್ರಾಯೋಜಕತ್ವವನ್ನು ‘ಕನ್ನಡಿಗ ವರ್ಲ್ಡ್’ ವೆಬ್ಸೈಟ್ ಹಾಗೂ ದುಬೈ ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ನ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ವಹಿಸಿದ್ದರು.
ಕನ್ನಡ ಚಲನ ಚಿತ್ರ ರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರು ಗುರು ಕಿರಣ್ ರವರ ಕಂಠ ಸಿರಿಯಲ್ಲಿ ಜನಮಾನಸದಲ್ಲಿ ಸದಾ ನೆನಪಿನಲ್ಲಿ ಉಳಿದಿರುವ ಸುಮಧುರ ತುಳು ಚಲನಚಿತ್ರ ಗೀತೆಗಳು ನವ್ಯ ನೃತ್ಯ ಸಂಯೋಜನೆಯಂದಿಗೆ ತುಳು ಅಭಿಮಾನಿಗಳ ಮನಸೆಳೆಯಿತು. ಗಾಯಕಿ ಅನುರಾಧ ಭಟ್ ತಮ್ಮ ಸುಮಧುರ ಕಂಠದಿಂದ ಪ್ರೇಕ್ಷಕರ ಗಮನ ಸೆಳೆದರು. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಪ್ರಖ್ಯಾತ ಕಿಶೋರ್ ಅಮ್ಮಾನ್ ರವರ್ ತಮ್ಮ ತಂಡದೊಂದಿಗೆ ಅದ್ಭುತ ನೃತ್ಯ ಸಂಯೋಜನೆಯ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಕೊಲ್ಲಿ ನಾಡಿನ ಜನರಿಗೆ ನೀಡಿ ಮನ ಗೆದ್ದರು.
ಜನ ಮನ ಸೆಳೆದ ಪ್ರಶಂಸ – ಕಾಪು ತಂಡ
“ಬಲೆ ತೆಲಿಪಾಲೆ” ಸೀಸನ್ 1 ಮತ್ತು ಸೀಸನ್ 2 ಪ್ರಥಮ ಬಹುಮಾನ ಪುರಸ್ಕೃತ ಪ್ರಸಂಸ-ಕಾಪು ತಂಡ ಕಾರ್ಯಕ್ರಮ ನೀಡಲು ಊರಿನಿಂದ ಆಗಮಿಸಿ, ದುಬಾಯಿ ಬಲೆ ತೆಲಿಪಾಲೆ ಕಾರ್ಯಕ್ರಮಕ್ಕೆ ವಿಶೇಷವಾಗಿ ಸಿದ್ದ ಪಡಿಸಲಾದ ಎರಡು ಕಿರು ಹಾಸ್ಯ ನಾಟಕ ಪ್ರದರ್ಶಿಸಿದರು. ಪ್ರಸಂಸ-ಕಾಪು ತಂಡದ ಪ್ರಖ್ಯಾತ ಕಲಾವಿದರಾದ ಸಂದೀಪ್ ಶೆಟ್ಟಿ ಮಾಣಿ ಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಮರ್ವಿನ್ ಲೋಬೊ, ಸಂಗೀತ ಸಂಯೋಜಕ ಶರತ್ ಉಚ್ಚಿಲ ಕೊಲ್ಲಿನಾಡಿನ ಸಮಸ್ಥ ತುಳು ಭಾಷಾ ಅಭಿಮಾನಿಗಳನ್ನು ನಗೆ ಗಡಲಲ್ಲಿ ತೇಲಾಡಿಸಿ ಸರ್ವರ ಪ್ರಶಂಸೆಗೆ ಪಾತ್ರರಾದರು.
ಬಲೆ ತೆಲಿಪಾಲೆ ಕಾರ್ಯಕ್ರಮಕ್ಕೆ ತಮ್ಮ ಅಪೂರ್ವ ಕೊಡುಗೆ ನೀಡಿದ ಸ್ಥಳಿಯ ಕಲಾ ತಂಡಗಳು
ಕೊಲ್ಲಿನಾಡಿನ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಅವಿಶ್ರಾಂತ ದುಡಿತದ ನಡುವಿನಲ್ಲಿ ಸಿಗುವ ವಿರಾಮ ಸಮಯವನ್ನು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವ ಕಲಾವಿದರ ತಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಗಳಾಗುತ್ತಾರೆ. ದುಬಾಯಿಯಲ್ಲಿ ನಡೆದ ಬಲೆ ತೆಲಿಪಾಲೆ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಗೆ ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು.
ಬಲೆ ತೆಲಿಪಾಲೆ ದುಬಾಯಿ ಸ್ಪರ್ಧೆಯ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡ – ತಮಸೆ ಫ್ರೆಂಡ್ಸ್ ದುಬಾಯಿ
ತಮಸೆ ಫ್ರೆಂಡ್ಸ್ ದುಬಾಯಿ ಕಲಾವಿದರಾದ ಅಲ್ಫೋನ್ಸ್ ಮೂಡು ಬೆಳ್ಳೆ, ದೀಪಕ್ ಪಲಡ್ಕ, ಗಾಡ್ವಿನ್ ಅತ್ತೂರ್, ಪ್ರದೀಪ್ ಬಾರ್ಬೋಝಾ. ತಮ್ಮ ಅದ್ಭುತ ಪರಿಕಲ್ಪನೆಯ ಹಾಸ್ಯವನ್ನು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರ ಮೂಲಕ ಜನ ಮೆಚ್ಚುಗೆಯೊಂದಿಗೆ ಪ್ರಥಮ ಸ್ಥಾನ – ನಗದು ಹಣ Dhs. 6666.00 ತಮ್ಮದಾಗಿಸಿಕೊಂಡರು.
ದ್ವಿತೀಯ ಸ್ಥಾನ ನಗದು ಹಣ Dhs. 3333.00 – ತೆಲಿಕೆದಾ ಪುಳಿಮುಂಚಿ ತಂಡ ಪಡೆದುಕೊಂಡರು ಕಲಾವಿದರಾದ ಚಿದಾನಂದಾ ಪೂಜಾರಿ, ಗಿರೀಶ್ ಕುಮಾರ್, ಸಂದೀಪ್ ಬರ್ಕೆ, ವಿಶ್ವನಾಥ್ ಶೆಟ್ಟಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು.
ತೃತಿಯ ಸ್ಥಾನ ನಗದು ಹಣ Dhs. 2222.00 – ಮೊಗಾಚಿ ಲಾಹರನ್ ತಂಡ ಪಡೆದುಕೊಂಡರು. ಕಲಾವಿದರಾದ ಅಲ್ವಿನ್ ಪಿಂಟೊ, ವಿನ್ಸೆಂಟ್ ಫೆರ್ನಾಂಡಿಸ್, ಪ್ರಿಮಾ ಲಾರೆನ್, ಪ್ರಮೀಳಾ, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಭಾಗವಹಿಸಿದ ಇನ್ನಿತರ ತಂಡಗಳು :
ಗಮ್ಮತ್ ಜವಣೆರ್ ಯು.ಎ.ಇ.- ರಾಜೇಶ್ ಕುತ್ತಾರ್, ಸುನಿಲ್ ಕುಮಾರ್, ಜೇಶ್ ಬಾಯರ್, ಪ್ರಕಾಶ್.
ಸ್ಮೈಲ್ ಕ್ರೀಯೆಶನ್ – ಅಭಿಶೇಕ್, ಅನಿಲ್, ರಾಜ್ ಪಾಲ್, ವಿಕ್ರಮ್ ಶೆಟ್ಟಿ.
ತುಳುವೆರ್ ನಮ – ದೀಪಕ್ ಎಸ್.ಎ., ಹರಿ ಮಾಲೂರು, ಸಮಂತಾ.
ಫಿನಿಕ್ಸ್ ದುಬಾಯಿ – ಮನೋಜ್ ಕುಮಾರ್, ನವೀನ್, ಸುಜಿತ್.
ತುಳುವೆರ್ ಬಹರೆನ್ – ಹೇಮಂತ್ ಸಾಲಿಯಾನ್, ಕರುಣಾಕರ್ ಶೆಟ್ಟಿಗಾರ್, ಪ್ರವೀಣ್ ಶೆಟ್ಟಿ, ವರುಣಾ ಹೆಗ್ಡೆ.
ತುಳುಕೂಟ ಕುವೈತ್ – ಲಯನಲ್, ಲೂಸಿ ಅರಾನಾ, ಮನೋಜ್.
ತುಳುನಾಡ ಸಿರಿ – ದಿವ್ಯಾ, ಜಸ್ಮಿತಾ, ಲತಾ ಬಂಗೇರಾ, ಉಷಾ ವಿಶ್ವನಾಥ್ ಶೆಟ್ಟಿ.
ಬಲೆ ನೀರ್ ಪರ್ಕಾ ಕಲಾವಿದರು – ಬಾಲ್ ರಾಜ್ ಶೆಟ್ಟಿ, ಪ್ರಜ್ವಲ್, ರವಿಚಂದ್ರ ಶೆಟ್ಟಿ, ಸಂತೋಷ್ ರೈ.
ಸ್ಥಳಿಯ ಕಲಾ ತಂಡಗಳು ಬಹು ದಿನದ ಪೂರ್ವತಯಾರಿಯಲ್ಲಿ ತಾಲಿಮು ನಡೆಸಿ ವೇದಿಕೆಯಲ್ಲಿ ತಮ್ಮ ವಾಕ್ ಚಾತುರ್ಯದ ಮೂಲಕ ತಮ್ಮ ತಮ್ಮ ಹಾಸ್ಯವನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವ
ವೇದಿಕೆಯಲ್ಲಿ ಡಾ. ಬಿ. ಆರ್. ಶೆಟ್ಟಿ, ಶ್ರೀ ತುಂಬೆ ಮೊಯಿದ್ದೀನ್, ಶ್ರೀ ವಿಜಯ ವಿಠಲನಾಥ ಶೆಟ್ಟಿ ಮತ್ತು ಡಾ. ಶರಣ್ ಶೆಟ್ಟಿಯವರ ಸಮ್ಮುಖದಲ್ಲಿ ಎಲ್ಲಾ ಪ್ರಾಯೋಜಕರನ್ನು ಬರಮಾಡಿಕೊಂಡು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶ್ರೀ ಸರ್ವೋತ್ತಮ ಶೆಟ್ಟಿವರು ಬಲೆ ತೆಲಿಪಾಲೆ ಕಾರ್ಯಕ್ರಮ ತೆರೆಯ ಹಿಂದಿರುವ ಕಾರ್ಯಕರ್ತರನ್ನು ಮತ್ತು ಮಾಧ್ಯಮ ಪ್ರತಿನಿದಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಮ್ಮ ಟಿ. ವಿ. ದುಬಾಯಿ ಪ್ರತಿನಿಧಿ ಶ್ರೀ ವಿನಯ ಕುಮಾರ್ ನಾಯಕ್ ರವರನ್ನು ವೇದಿಕೆಗೆ ಬರಮಾಡಿಕೊಂಡು ಅಭಿನಂದಿಸಲಾಯಿತು. . ಶ್ರೀ ಸಂಪತ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ವಿನಯ ಕುಮಾರ್ ನಾಯಕ್ ರವರ ಹಲವು ದಿನಗಳ ಪೂರ್ವ ತಯಾರಿಯಲ್ಲಿ ಹಲವಾರು ಸ್ನೇಹಿತ ಮಿತ್ರರ ಬೆಂಬಲದೊಂದಿಗೆ ಬಲೆ ತೆಲಿಪಾಲೆ 2014 ದುಬಾಯಿಯಲ್ಲಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣ ಮೂರು ಸಾವಿರ ಕಿಂತಲೂ ಹೆಚ್ಚು ತುಳು ಅಭಿಮಾನಿಗಳು ಜಾತಿ ಮತ ಧರ್ಮ ಬೇಧ ಭಾವ ವಿಲ್ಲದೆ ತುಳು ಭಾಷೆಯ ಮೇಲಿನ ಅಭಿಮಾನದಿಂದ ಸಮಾವೇಶಗೊಂಡ ಫಲವಾಗಿ ದಾಖಲೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
2 Comments
Raghavendra G
Great job….
Prashant S.Rao
Congratulations to all the winning team. Nice coverage…..