ಮನೋರಂಜನೆ

ಸಲ್ಮಾನ್‍ಖಾನ್‍ ರ ಈ ವರ್ಷದ ಆದಾಯ ಎಷ್ಟು ಗೊತ್ತಾ …?

Pinterest LinkedIn Tumblr

sallu

ಹಲವು ವಿವಾದದಲ್ಲಿಯೇ ಸುದ್ದಿಯಾಗುತ್ತಿರುವ ಸಲ್ಮಾನ್‍ಖಾನ್‍ ಫೋರ್ಬ್ಸ್ ಇಂಡಿಯಾ 2014ರ ದೇಶದ ಟಾಪ್ – 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ.

ಈ ಹಿಂದೆ ಶಾರುಖ್ ಖಾನ್ ಅಲಂಕರಿಸುತ್ತಿದ್ದ ಈ ಸ್ಥಾನವನ್ನು ಈ ಬಾರಿ ಸಲ್ಮಾನ್‍ಖಾನ್‍ ಅಲಂಕರಿಸಿದ್ದು ಶಾರೂಖ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.2013 ಅಕ್ಟೋಬರ್ 1 ರಿಂದ 2014 ಸೆಪ್ಟೆಂಬರ್ 30ರ ಒಳಗಡೆ ನಡೆಸಿದ ಈ ಸಮೀಕ್ಷೆಯಲ್ಲಿ ಸಲ್ಮಾನ್ ಖಾನ್ 244.50 ಕೋಟಿ ರೂ.ಆದಾಯ ಪಡೆದಿದ್ದು ದಾಖಲೆ ನಿರ್ಮಿಸಿದ್ದಾರೆ.

ಹಲವು ವಿವಾದ, ನ್ಯಾಯಾಲಯದ ಪ್ರಕರಣಗಳ ನಡುವೆ ಸಲ್ಮಾನ್ ಖಾನ್ ಅಗ್ರಸ್ಥಾನಕ್ಕೆ ಏರಿದ್ದು ಅಚ್ಚರಿ ತರಿಸಿದ್ದು ಅವರ ಟಿ.ವಿ ಶೋಗಳು, ಸಿನಿಮಾ. ಹಾಗೂ ಇತರ ವ್ಯವಹಾರಗಳಲ್ಲಿ ಯಶಸ್ಸು ಗಳಿಸಿದ್ದು ಈ ಸ್ಥಾನಕ್ಕೇರಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಭಾರತದ ಟಾಪ್ ಟೆನ್ ಸೆಲೆಬ್ರಿಟಿಗಳ ಸಂಭಾವನೆ

ಸಲ್ಮಾನ್ ಖಾನ್ – 244.50 ಕೋಟಿ ರೂ, ಅಮಿತಾಬ್ ಬಚ್ಚನ್ – 196.75 ಕೋಟಿ ರೂ,ಶಾರೂಕ್ ಖಾನ್ – 202.40 ಕೋಟಿ ರೂ,ಎಂ.ಎಸ್.ಧೋನಿ – 141.80 ಕೋಟಿ ರೂ, ಅಕ್ಷಯ್ ಕುಮಾರ್ – 172 ಕೋಟಿ ರೂ, ವಿರಾಟ್ ಕೊಹ್ಲಿ – 58.43 ಕೋಟಿ ರೂ, ಅಮೀರ್ ಖಾನ್ – 80.47 ಕೋಟಿ ರೂ, ದಿಪೀಕಾ ಪಡುಕೋಣೆ – 76.20 ಕೋಟಿ ರೂ,ಹೃತಿಕ್ ರೋಷನ್ – 85 ಕೋಟಿ ರೂ ಹಾಗೂ ಸಚಿನ್ ತೆಂಡೂಲ್ಕರ್ – 59.54 ಕೋಟಿ ರೂಪಾಯಿ ಆದಾಯ ಪಡೆಯುವ ಮೂಲಕ ಫೋರ್ಬ್ಸ್ ಇಂಡಿಯಾ 2014ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Write A Comment