ಮನೋರಂಜನೆ

ಬ್ರೂಸ್ಲಿ ಬದುಕಿದ್ದಾನೆ ! ಮತ್ತವನು ಅಫ್ಘಾನಿಸ್ತಾನದಲ್ಲಿದ್ದಾನೆ !!

Pinterest LinkedIn Tumblr

Bruce Lee

ಹಾಲಿವುಡ್ ದಂತ ಕಥೆ, ಕುಂಗ್ ಫೂ ಮಾಸ್ಟರ್ ಬ್ರೂಸ್ಲಿ ಯಾರಿಗೆ ಗೊತ್ತಿಲ್ಲ ಹೇಳಿ. ಇಂದು ವಿವಿಧ ಸ್ಟಂಟ್ ಗಳನ್ನು ಮಾಡುತ್ತಿರುವ ಮತ್ತು ಅದರಿಂದಲೇ ಇಂದು ವಿಶ್ವ ವಿಖ್ಯಾತನಾಗಿರುವ ಜಾಕಿ ಚಾನ್ ಇದೇ ಬ್ರೂಸ್ಲಿಯ ಸಿನಿಮಾಗಳನ್ನು ನೋಡುತ್ತಲೇ ಇಂದು ಬಿಡುವಿಲ್ಲದ ಹಾಲಿವುಡ್ ನಟನಾಗಿದ್ದಾನೆ.

ಬ್ರೂಸ್ಲಿಯ ‘ಎಂಟರ್ ದಿ ಡ್ರ್ಯಾಗನ್’ ‘ರಿಟರ್ನ್ ಆಫ್ ದಿ ಡ್ರ್ಯಾಗನ್, ‘ಫಿಸ್ಟ್ ಆಫ್ ಪ್ಯೂರಿ’ ಯನ್ನು ಆಗಿನ ಕಾಲದಲ್ಲಿ ನೋಡಿದ ಎಷ್ಟೋ ಮಂದಿ ತಾವೂ ಅವನಂತಾಗಬೇಕೆಂದು ಕನಸು ಕಾಣುತ್ತಿದ್ದುದು ಸುಳ್ಳಲ್ಲ. ಇಂತಹ ಬ್ರೂಸ್ಲಿಯ ಸಾವಿನ ಕುರಿತು ಇಂದಿಗೂ ಆನೇಕ ಕಥೆಗಳು. ಚಾಲ್ತಿಯಲ್ಲಿವೆ. ಈಗ ಬಂದಿರುವ ಸುದ್ದಿ ಏನೆಂದರೆ ಬ್ರೂಸ್ಲಿ ಬದುಕಿದ್ದಾನೆ. ಮತ್ತು ಆತ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾನೆ.

ಇದೇನಾಪ್ಪ ಬ್ರೂಸ್ಲಿ ತಾಲಿಬಾನ್ ಪ್ರಾಬಲ್ಯವಿರುವ ಅಫ್ಘಾನಿಸ್ತಾನದಂತಹ ರಾಷ್ಟ್ರದಲ್ಲಿ ಏನು ಮಾಡುತ್ತಿದ್ದಾನೆಂದು ಹುಬ್ಬೇರಿಸಬೇಡಿ. ಈತ ನೂರಕ್ಕೆ ನೂರು ಬ್ರೂಸ್ಲಿಯಂತೆ ಕಾಣುವ ಅಬ್ಬಾಸ್ ಆಲಿಜಾದಾ. ಕೇವಲ ಕಾಣುವುದು ಮಾತ್ರವಲ್ಲ ಬ್ರೂಸ್ಲಿಯಂತೆ ಕುಂಗ್ ಫೂ ಪಟ್ಟುಗಳನ್ನೂ ಬಲ್ಲ. ಈತನನ್ನು ಸ್ನೇಹಿತರು ಅಫ್ಘಾನ್ ಬ್ರೂಸ್ಲಿ ಎಂದೇ ಕರೆಯುತ್ತಾರೆ.

ಬ್ರೂಸ್ಲಿಯಂತೆ ಕಾಣುತ್ತಿದ್ದ ಈತ ಟಿವಿಯಲ್ಲಿ ಬ್ರೂಸ್ಲಿಯ ಸಿನಿಮಾಗಳನ್ನು ನೋಡಿ ನೋಡಿಯೇ ಅವನಂತೆ ಕುಂಗ್ ಫೂ ಸ್ಟಂಟ್ ಮಾಡುವುದನ್ನು ಕಲಿತ. ಯಾವಾಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾಯಿತೋ ಟಿವಿ, ಇಂಟರ್ ನೆಟ್ ಎಲ್ಲವೂ ಬಂದ್ ಆದ ಕಾರಣ ಅಬ್ಬಾಸ್ ನ ಬ್ರೂಸ್ಲಿ ಕನಸು ಕಮರಿ ಹೋಗಿತ್ತು.

ಸೆಪ್ಟೆಂಬರ್ 11 ರ ಅಮೆರಿಕ ದಾಳಿ ನಂತರ ಅಫ್ಘಾನಿಸ್ತಾನದ ಮೇಲೆ ಮುಗಿ ಬಿದ್ದ ಅಮೆರಿಕ ಪಡೆಗಳು ತಾಲಿಬಾನಿಗಳನ್ನು ಸದೆ ಬಡಿದು ಮತ್ತೆ ಅಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸಿದ ನಂತರ ಅಬ್ಬಾಸನ ಕನಸುಗಳಿಗೆ ಜೀವ ಬಂದಿದೆ. ಈಗ ಪ್ರತಿ ನಿತ್ಯ ಟಿವಿ ನೋಡುತ್ತಾ ಬ್ರೂಸ್ಲಿ ತರಹದ ಸ್ಟಂಟ್ ಗಳನ್ನು ಪುನಃ ಆರಂಭಿಸಿದ್ದಾನೆ.

ಅತ್ಯಂತ ಬಡ ಕುಟುಂಬದ 10 ಮಂದಿ ಸದಸ್ಯರಲ್ಲಿ ಒಬ್ಬನಾಗಿರುವ ಅಬ್ಬಾಸ್ ಗೆ ತಾನೂ ಹಾಲಿವುಡ್ ನಟನಾಗಿ ಮಿಂಚಬೇಕೆಂಬ ಆಸೆಯಿದೆ. ಆದರೆ ತಾನಿರುವ ದೇಶದಲ್ಲಿ ಪ್ರತಿ ನಿತ್ಯವೂ ಸಾವಿನ ಜೊತೆ ಸೆಣಸಾಡುತ್ತಾ ಬದುಕಬೇಕಾದ ಅನಿವಾರ್ಯತೆಯಿರುವುದರಿಂದ ಸಾಯುವುದರೊಳಗಾಗಿ ತನ್ನ ಕನಸು ಈಡೇರುವುದೇ ಎಂದು ಕಾದು ಕುಳಿತಿದ್ದಾನೆ.

Write A Comment