ಕನ್ನಡ ವಾರ್ತೆಗಳು

ತುಳು ಭಾಷೆ ಸಾಹಿತ್ಯ ಯಕ್ಷಗಾನಕ್ಕೆ ಕಲಾವಿದರ ಕೊಡುಗೆ ಅನನ್ಯ: ಜಾನಕಿ ಎಂ.ಬ್ರಹ್ಮಾವರ

Pinterest LinkedIn Tumblr

janaki_bramavara_photo

ಮಂಗಳೂರು,ಡಿ.13 : ”ಅಖಿಲ ಭಾರತ ತುಳು ಒಕ್ಕೂಟ (ರಿ)ದ ರಜತ ಮಹೋತ್ಸವ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಬೋಳೂರು ದೋಗ್ರಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರವು ತುಳು ತಾಳ ಮದ್ದಳೆ ಸಪ್ತಾಹವನ್ನು ನಡೆಸಿಕೊಂಡು ಬಂದಿದೆ.’ಕರ್ನಾಟಕ ಸರಕಾರದ ಆಶ್ರಯದಲ್ಲಿ ತುಳು ಸಾಹಿತ್ಯ ಅಕಾಡೆಮಿ ಕಾರ್ಯಾಚರಿಸುತ್ತಿದ್ದು, ಇಂತಹಾ ಕಾರ್ಯಕ್ರಮಗಳಿಗೆ ಕೂಡಾ ಸಹಯೋಗವನ್ನು ನೀಡುತ್ತಾ ಬರುತ್ತಿದೆ.

ತುಳು ಭಾಷೆಯಲ್ಲಿ ತಾಳ ಮದ್ದಳೆ ನಡೆಸುವುದರಿಂದ ಅನೇಕ ಜಾನಪದ, ಐತಿಹಾಸಿಕ ಕಥನಗಳ ಪರಿಚಯ ಜನ ಸಾಮಾನ್ಯರಿಗೆ ವ್ಯಾಪಕವಾಗಿ ತಿಳಿಯುವಂತಾಗಿದೆ. ಆ ಪ್ರಯುಕ್ತ ತಾಳಮದ್ದಲೆ ಹಬ್ಬದಲ್ಲಿ ಭಾಗವಹಿಸಲು ಹೆಮ್ಮೆ ಪಡುತ್ತೇನೆ. ತುಳುವಿನ ಏಳ್ಗೆಯ ನೆಪದಲ್ಲಿ ಸಾರ್ವಜನಿಕರು ನಮ್ಮ ಅಕಾಡೆಮಿಯನ್ನು ಸಂಪರ್ಕಿಸಬಹದು.” ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಎಂ. ಬ್ರಹ್ಮಾವರ ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲ್ ಈ ತಾಳಮದ್ದಲೆ ಸಪ್ತಾಹಕ್ಕೆ ಶುಭವನ್ನು ಕೋರಿದರು.

ಅರುಣ್ ಕುಮಾರ್ ವಕೀಲ, ದೇವರಾಜ್ ಇಂಜಿನಿಯರ್, ಕೆ.ಉಮೇಶ ಸಾಲ್ಯಾನ್, ಎ.ಸಿ.ಭಂಡಾರಿ ಉಪಸ್ಥಿತರಿದ್ದ ಈ ಸಭೆಯಲ್ಲಿ ಸಜಿಪ ಸುಂದರ ಪೂಜಾರಿಯವರ ಸಂಸ್ಮರಣೆಯನ್ನು ಜರ್ನಾಧನ ಅಮ್ಮುಂಜೆ ನಡೆಸಿದರು. ಖ್ಯಾತ ಪೀಠಿಕೆ ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟರನ್ನು ಸನ್ಮಾನಿಸಲಾಯಿತು. ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಬಿ.ದಾಮೋದರ ನಿಸರ್ಗರವರು ಎಲ್ಲರನ್ನು ಸ್ವಾಗತಿಸಿದರೆ, ಹೇಮಂತ್ ಗರೋಡಿಯವರು ಧನ್ಯವಾದವಿತ್ತರು. ಪಾವೂರು ದಯಾನಂದ ಪೂಜಾರಿಯವರ ಭಾಗವತಿಕೆಯಲಿ ‘ಬೀರೆ ದೇವುಪೂಂಜೆ’ ತಾಳಮದ್ದಳೆ ತುಳುವಿನಲ್ಲಿ ಜರಗಿತು.

Write A Comment