ಮನೋರಂಜನೆ

‘ಲೀಲೆ’ ಮಾಡಲು ಹೊರಟಿದ್ದ ‘ಸನ್ನಿ’ ಮೇಲೆ ಕಪಾಳ ಕ್ಕೆ ಬಾರಿಸಲು ಹೋದ ಯುವಕ

Pinterest LinkedIn Tumblr

Sunny-leone

ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ನೀಲಿ ಚಿತ್ರದ ರಾಣಿ ಸನ್ನಿ ಲಿಯೋನ್ ಗೆ ಸರಿಯಾಗಿ ಬಟ್ಟೆ ತೊಡಲಿಲ್ಲ ಎಂಬ ಕಾರಣಕ್ಕೆ ಆಗಂತುಕ ವ್ಯಕ್ತಿಯೋರ್ವ ಕಪಾಳ ಕ್ಕೆ ಬಾರಿಸಲು ಹೋದ ಘಟನೆ ನಡೆದಿದೆ.

ನಡೆದಿದ್ದೇನು..?

‘ಲೀಲಾ’ ಚಿತ್ರದಲ್ಲಿ ನಟಿಸುತ್ತಿರುವ ‘ನಗ್ನ ಬೆಡಗಿ’ ಸನ್ನಿ ಲಿಯೋನ್ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಲೀಲಾ ಚಿತ್ರದಲ್ಲಿ ತನ್ನ ‘ಲೀಲೆ’ ತೋರಿಸಲೆಂದೇ ಆಕರ್ಷಕ ತುಂಡುಡುಗೆ ತೊಟ್ಟಿದ್ದಳು ಎನ್ನಲಾಗಿದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಸೆಟ್ ಗೆ ಬಂದ ಆಗಂತುಕ ಯುವಕನೊಬ್ಬ ಸನ್ನಿ ಲಿಯೋನ್ ಜೊತೆ ವಾಗ್ವಾದಕ್ಕೆ ಇಳಿದು ಕಪಾಳ ಮೋಕ್ಷ ಮಾಡಲು ಮುಂದಾದ ಎನ್ನಲಾಗಿದೆ. ತಕ್ಷಣ ಮುಂದಾಗಬಹುದಾದ ಅಪಾಯ ಅರಿತ ಸಹ ನಟ ಮೋಹಿತ್ ಮಧ್ಯೆ ಪ್ರವೇಶಿಸಿ ಆಗುಂತಕನನ್ನು ನೂಕಿ ಹೊರ ಕಳುಹಿಸಿದ್ದಾನೆ.

ಇದರಿಂದ ಆತಂಕಗೊಂಡ ಸನ್ನಿ ಲಿಯೋನ್ ಶೂಟಿಂಗ್ ಸ್ಪಾಟ್ ನಲ್ಲಿ ಸೂಕ್ತ ಭದ್ರತೆ ಸಿಗುವವರೆಗೂ ಶೂಟಿಂಗ್ ಗೆ ಹಾಜರಾಗುವುದಿಲ್ಲ ಎಂದು ಕೋಪಗೊಂಡು ಸಹಾಯಕಿ ಜತೆ ಹೊರನಡೆದಿದ್ದಾರೆ ಎನ್ನಲಾಗಿದ್ದು, ತಕ್ಷಣ ಚಿತ್ರದ ನಿರ್ದೇಶಕರು ಅವಳ ಸಿಟ್ಟನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ತುಂಡು ಬಟ್ಟೆ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಗೌಹರ್ ಖಾನ್ ಮೇಲೆ ಆಗಂತುಕನೊಬ್ಬ ಹಲ್ಲೆ ನಡೆಸಿ ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೆ ಸನ್ನಿ ಲಿಯೋನ್ ಮೇಲೆ ಹಲ್ಲೆ ಯತ್ನ ನಡೆಸುವ ಯತ್ನದಿಂದ ಇಂತಹ ನಟಿಯರಿಗೆ ಭಯದ ವಾತಾವರಣ ಶುರುವಾಗಿದೆ. ಸಿನಿಮಾ ಹೊರಬಂದ ಮೇಲೆ ಚಿತ್ರ ನೋಡಿ ಹುಚ್ಚೆದ್ದು ಕುಣಿಯುವ ಈ ಪುಂಡ ಹುಡುಗರು ಮೊದಲ್ಯಾಕೆ ಈ ರೀತಿ ವರ್ತಿಸುತ್ತಾರೆ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆ.!

Write A Comment