ಕರ್ನಾಟಕ

ಟ್ವಿಟರ್ ಉಗ್ರ ಮೆಹದಿ ಬೆಂಗಳೂರಿನ ಸಿಸಿಬಿ ಪೊಲೀಸರ ವಶಕ್ಕೆ

Pinterest LinkedIn Tumblr

mehdi-masroor-

ಇಸಿಸ್ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ತನಿಖೆ ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೆಹದಿ ಮಸ್ರೂರ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇಸಿಸ್ ಉಗ್ರ ಸಂಘಟನೆಗೆ ಸಂಬಂಧಿಸಿದ @shamiwitness ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಎಂಬುದನ್ನು ಬ್ರಿಟನ್ ಮೂಲದ ಸುದ್ದಿವಾಹಿನಿಯೊಂದು ಸುದ್ದಿ ಬಿತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಾತ್ರವಲ್ಲ ದೇಶಾದ್ಯಂತ ತಲ್ಲಣ ಮೂಡಿಸಿತ್ತು.

ಅಲ್ಲದೇ ಮೆಹದಿ ಬಿಸ್ವಾಸ್ ಟ್ವಿಟರ್ ನಲ್ಲಿ ಪ್ರಸಾರ ಮಾಡುತ್ತಿದ್ದ ಸಂದೇಶಗಳೆಲ್ಲ ಬ್ರಿಟನ್, ಇರಾಕ್ ಅಥವಾ ಸಿರಿಯಾಕ್ಕೆ ಸಂಬಂಧಿಸಿದ್ದು ಪಟ್ಟಿದ್ದು ಭಾರೀ ಪ್ರಭಾವಿಯಾಗಿದ್ದು ಮುಸ್ಲಿಂ ಯುವಕರನ್ನು ಆಕರ್ಷಿಸುತ್ತಿದ್ದವು ಎನ್ನಲಾಗಿದೆ. ಅಲ್ಲದೇ ಭಾರತದಲ್ಲಿ ಉಗ್ರರ ನೇಮಕಾತಿಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂಬ ಸುದ್ದಿಯೂ ಕೇಳಿ ಬಂದಿತ್ತು. ಈ ನಡುವೆ ಸುದ್ದಿವಾಹಿನಿಯ ವರದಿ ಪ್ರಸಾರವಾದ ನಂತರ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿದ ಮೆಹದಿ ಪರಾರಿಯಾಗಿದ್ದ ಎಂಬ ಮಾತು ಕೇಳಿ ಬಂದಿತ್ತು.

ಇದೀಗ ಹಗಲಿರುಳು ಉಗ್ರನ ಪತ್ತೆಗೆ ಶ್ರಮಿಸಿದ ಸಿಸಿಬಿ ಪೊಲೀಸರು ಅಂತೂ ಉಗ್ರರನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಉಗ್ರ ಕೃತ್ಯದ ಬಗೆಗೆ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ . ಸಂಪೂರ್ಣ ತನಿಖೆಯ ನಂತರವಷ್ಟೇ ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಿದೆ.

Write A Comment