ಸುರತ್ಕಲ್,ಡಿ.13: ಕಾಟಿಪಳ್ಳ ಗಣೇಶಪುರ ಮಹಾಗಣಪತಿ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಜಳಕ ನಡೆಯುವ ಪುಳಿತ್ತೂರು ಬಾಳಿಕೆ ಮೂಲನಾಗಬ್ರಹ್ಮಸ್ಥಾನದ ಕೆರೆಯಲ್ಲಿ ಜಳಕದ ಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ವೇದಮೂರ್ತಿ ದೇರೇಬೈಲು ಶಿವಪ್ರಸಾದ್ ತಂತ್ರಿಯವರು ಶಿಲಾನ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ದೇವಳದ ಅರ್ಚಕ ಕಾರ್ತಿಕ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವಿಚಂದ್ರ ಪಂಡಿತ್, ಸದಸ್ಯರಾದ ಪ್ರಪುಲ್ಲಚಂದ್ರ ರೈ, ಕುಸುಮಾ ರಾವ್, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಜಿ.ಕೆ. ಸುಂದರ್, ವೆಂಕಟೇಶ ಶೆಟ್ಟಿಗಾರ್, ಪೆರ್ಮುದೆ ಗ್ರಾ.ಪಂ. ಸದಸ್ಯ ಶ್ರೀಧರ ಶೆಟ್ಟಿ ಕಣಿ, ಹರೀಶ ಶೆಟ್ಟಿ ಪುಳಿತ್ತೂರು, ಭಾಸ್ಕರ ಶೆಟ್ಟಿ ಪುಳಿತ್ತೂರು, ಜಲಜ ವಿ. ಭಂಡಾರಿ ಪುಳಿತ್ತೂರು ಮೊದಲಾದವರು ಉಪಸ್ಥಿತರಿದ್ದರು.