ಮನೋರಂಜನೆ

ಫೋರ್ಬ್ಲ್ ಪಟ್ಟಿ: ಶಾರೂಖ್ ಹಿಂದಿಕ್ಕಿದ ಸಲ್ಮಾನ್

Pinterest LinkedIn Tumblr

Salman-Khan

ಮುಂಬೈ: ದೇಶದ ಟಾಪ್ ನೂರು ಸೆಲೆಬ್ರಿಟಿಗಳ ಪಟ್ಟಿಯನ್ನು ಫೋಬ್ಸ್ ಇಂಡಿಯಾ ಬಿಡುಗಡೆ ಮಾಡಿದ್ದು, ಬಾಲಿವುಡ್ ಬಾದ್‌ ಶಾ ಶಾರೂಖ್ ಖಾನ್‌ರನ್ನು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಿಂದಿಕ್ಕಿದ್ದಾರೆ.

ಫೋರ್ಬ್ಸ್ ಇಂಡಿಯಾ 2014ರ ಪಟ್ಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಶಾರೂಖ್ ಖಾನ್ ಪ್ರಥಮ ಸ್ಥಾನ ಪಡೆಯುತ್ತಿದ್ದರು. ಆದರೆ ಈ ಬಾರಿ ಶಾರೂಖ್‌ರನ್ನು ಸಲ್ಮಾನ್ ಖಾನ್ ಹಿಂದಿಕ್ಕಿದ್ದು, ಶಾರೂಖ್ ಈ ವರ್ಷ ಮೂರನೇ ಸ್ಥಾನಕ್ಕೆ ಕುಸಿದ್ದಾರೆ.

2013ರ ಅಕ್ಟೋಬರ್ 1 ರಿಂದ 2014ರ ಸೆಪ್ಟೆಂಬರ್ 30ರೊಳಗೆ ಶಾರೂಖ್ ಅಭಿನಯದ ಹ್ಯಾಪಿ ನ್ಯೂಯರ್ ಒಂದೇ ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಖ್ಯಾತಿ ಮತ್ತು ಆದಾಯ ಎರಡೂ ಕ್ಷೇತ್ರದಲ್ಲೂ ಸಲ್ಮಾನ್ ಖಾನ್ ಅಗ್ರ ಸ್ಥಾನಕ್ಕೇರಿದ್ದಾರೆ. ವಿವಾದ ಮತ್ತು ಕೋರ್ಟ್ ಕೇಸ್‌ಗಳಿದ್ದರು, ತನ್ನ ಸಕ್ಸಸ್ ಮತ್ತು ಬಾಕ್ಸ್ ಆಫೀಸ್ ಹಿಟ್ಸ್, ಟಿವಿ ಶೋ ಮತ್ತು ತನ್ನ ಚಾರಿಟೇಬಲ್ ಟ್ರಸ್ಟ್ ಕೆಲಸದಿಂದಾಗಿ ಫೋರ್ಬ್ಸ್ ಮೊದಲ ಸ್ಥಾನ ನೀಡಿದೆ.

ಎರಡನೇ ಸ್ಥಾನವನ್ನು ಬಿಗ್ ಬೀ ಅಮಿತಾಬ್ ಬಚ್ಚನ್ ಅಲಂಕರಿಸಿದ್ದಾರೆ. ಬಾಲಿವುಡ್ ಮಂದಿಯಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವುದರಿಂದ ಅಮಿತಾಬ್ ಬಚ್ಚನ್‌ಗೆ 2ನೇ ಸ್ಥಾನ ಸಿಕ್ಕಿದೆ. ಪ್ರಸ್ತುತ ಅಮಿತಾಬ್ ಬಚ್ಚನ್ ಅವರನ್ನು 1.19 ಕೋಟಿ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ.

ಟಾಪ್‌ಟೆನ್ ಸೆಲೆಬ್ರಿಟಿಗಳ ಸಂಭಾವನೆ

ಸಲ್ಮಾನ್ ಖಾನ್ – 244.50 ಕೋಟಿ ರು.

ಅಮಿತಾಬ್ ಬಚ್ಚನ್ – 196.75 ಕೋಟಿ ರು.

ಶಾರೂಕ್ ಖಾನ್ – 202.40 ಕೋಟಿ ರು.

ಎಂ.ಎಸ್.ಧೋನಿ – 141.80 ಕೋಟಿ ರು.

ಅಕ್ಷಯ್ ಕುಮಾರ್ – 172 ಕೋಟಿ ರು.

ವಿರಾಟ್ ಕೊಹ್ಲಿ – 58.43 ಕೋಟಿ ರು.

ಅಮೀರ್ ಖಾನ್ – 80.47 ಕೋಟಿ ರು.

ದಿಪೀಕಾ ಪಡುಕೋಣೆ – 76.20 ಕೋಟಿ ರು.

ಹೃತಿಕ್ ರೋಷನ್ – 85 ಕೋಟಿ ರು.

ಸಚಿನ್ ತೆಂಡೂಲ್ಕರ್ – 59.54 ಕೋಟಿ ರು.

Write A Comment