ಮನೋರಂಜನೆ

ಮೂರಲ್ಲ 350 ಹುಡುಗೀರ ಜೊತೆ ಓಡಾಡಿದ್ದೇನೆ: ಸಚಿವ ಅಂಬರೀಷ್

Pinterest LinkedIn Tumblr

Ambarish pm-Ap 11_2014-008

ಬೆಳಗಾವಿ: ನಾನು ಮೂರಲ್ಲ, 350 ಹುಡುಗಿಯರ ಜೊತೆ ಓಡಾಡಿದ್ದೇನೆ ಎಂದು ವಸತಿ ಸಚಿವ ಅಂಬರೀಷ್ ಹೇಳಿದ್ದಾರೆ.

ಕನ್ನಡ ಸೌಧದಲ್ಲಿ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್‍ಗೆ ಪತ್ರ ಬರೆದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪತ್ರ ಬರೆದಿದ್ದಾರಾ, ಬರೆಯಲಿ ಬಿಡಿ ಸಂತೋಷ. ಅಂತಹ ಕೆಟ್ಟ ಕೆಲಸ ನಾನು ಮಾಡಿಲ್ಲ ಎಂದರು.

ನಾನು ಖಾಸಗಿ ಜೀವನದಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಸದನದಲ್ಲಿ ನಾನು ಅಶ್ಲೀಲ ನೋಡಿಲ್ಲ. ನಾನು ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದೇನೆ, ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದೇನೆ. ನನ್ನಿಂದ ಯಾರಿಗೂ ತೊಂದರೆಯಾಗಿಲ್ಲ. 3 ಅಲ್ಲ 350 ಜತೆ ಹುಡುಗಿಯರ ಜತೆ ಓಡಾಡಿದ್ದೇನೆ ಎಂದರು.

ಹೌದು ಮೊಬೈಲ್ ನೋಡಿದ್ದೇನೆ: ಶಾಸಕ ಮಲ್ಲಿಕಾರ್ಜುನ್ ಜತೆ ಕುಳಿತು ಮೊಬೈಲ್ ನೋಡಿದ್ದು ನಿಜ, ಆದರೆ ಅಂತಹದ್ದೇನು ನಾವು ನೋಡುತ್ತಿರಲಿಲ್ಲ ಎಂದು ವಸತಿ ಸಚಿವ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಮೆಸೇಜ್ ತೋರಿಸುವ ಪ್ರಯತ್ನ ಮಾಡಿದ್ರು. ಅದು ಬಿಟ್ಟು ಈ ವಯಸ್ಸಿನಲ್ಲಿ ನೋಡಕ್ಕೆ ಏನಿದೆ ಎಂದು ಮಂಡ್ಯ ಸ್ಟೈಲ್‍ನಲ್ಲಿ ಹೇಳಿದರು.

Write A Comment