ಕನ್ನಡ ವಾರ್ತೆಗಳು

ಪುಸ್ತಕ ಒದುವ ಕೌಶಲ್ಯ ಬೆಳೆಸುವ ಕಾರ್ಯಗಾರಕ್ಕೆ ಚಾಲನೆ.

Pinterest LinkedIn Tumblr

libry_innogratimn_mudsedde

ಮಂಗಳೂರು,ಡಿ.11: ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ದ.ಕ. ಜಿಲ್ಲೆಯ 1 ರಿಂದ 10ನೇ ತರಗತಿಯ ಶಾಲಾ ಮಕ್ಕಳಲ್ಲಿ ಪುಸ್ತಕ ಓದುವ ಕೌಶಲ್ಯವನ್ನು ಬೆಳೆಸುವ ಕಾರ್ಯಗಾರಕ್ಕೆ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮೂಡುಶೆಡ್ಡೆ ಇಲ್ಲಿ ಚಾಲನೆ ನೀಡಲಾಯಿತು.

ದ.ಕ.ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ, ಮಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ತುಳಸಿ ಮದ್ದಿನೇನಿಯವರು ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಕ್ಕಳು ಪ್ರತಿನಿತ್ಯ ಓದುವುದು, ಆಟವಾಡುವುದು, ಹಾಗೂ ಇತರೆ ಉತ್ತಮ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅದಕ್ಕಾಗಿ ಗ್ರಂಥಾಲಯದಿಂದ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಲಾಗುವುದು. ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಉತ್ತಮ ಓದುಗರಿಗೆ ಗೊಲ್ಡನ್ ಸ್ಟಾರ್ ಹಾಗೂ ಸಿಲ್ವರ್ ಸ್ಟಾರ್ ಗಳನ್ನು ನೀಡಿ ಗೌರವಿಸಲಾಗುವುದು ಎಂದು ಮಕ್ಕಳನ್ನು ಹುರಿದುಂಬಿಸಿದರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರಾವಳಿ ಲೇಖಕರ ಸಂಘದ ಸದಸ್ಯೆಯಾದ ಶ್ರೀಮತಿ ರೋಹಿಣಿ ಬಿ.ಎಂ. ರವರು ಕಥೆ ಹೇಳುವ ರೀತಿ ಹಾಗೂ ಓದುವ ಹವ್ಯಾಸ ಬೆಳೆಸುವ ಅನೇಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಶ್ರೀಯುತ ವೆಂಕಟೇಶ ಸಿ.ಜೆ. ಮತ್ತು ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಜಗದೀಶ್ ರವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರಾದ ಶ್ರೀ ಸುಬ್ರಾಯ ಪೈ. ಎನ್. ಇವರು ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿಯಾದ ಶ್ರೀಮತಿ ಸರೋಜಿನಿ ಟಿ. ಇವರು ವಂದಿಸಿದರೆ, ಶ್ರೀಮತಿ ಐ. ವಿ. ಸಿಲ್ವಿಯಾ ಸ್ವಿಕೇರಾ ಕಾರ್ಯಕ್ರಮ ನಿರ್ವಹಿಸಿದರು.

Write A Comment