ಮನೋರಂಜನೆ

ಚಾಂಪಿಯನ್ಸ್ ಲೀಗ್: ಮ್ಯಾಡ್ರಿಡ್ ಹೊಸ ಮೈಲುಗಲ್ಲು

Pinterest LinkedIn Tumblr

ronaldo-2

ಮ್ಯಾಡ್ರಿಡ್, ಡಿ.10: ಹಾಲಿ ಚಾಂಪಿಯನ್ ರಿಯಲ್ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲಿ ಸತತ ಎರಡನೆ ಬಾರಿ ಎಲ್ಲ ಗ್ರೂಪ್ ಪಂದ್ಯಗಳನ್ನು ಜಯಿಸಿದ ಮೊದಲ ಕ್ಲಬ್ ಎಂಬ ಕೀರ್ತಿಗೆ ಪಾತ್ರವಾಗಿದೆ.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಬಲ್ಗೇರಿಯದ ಲುಡೊಗೊರೆಟ್ಸ್ ತಂಡವನ್ನು 4-0 ಅಂತರದಿಂದ ಮಣಿಸಿ ಈ ಸಾಧನೆ ಮಾಡಿದೆ. ಮ್ಯಾಡ್ರಿಡ್ ಪರ ರೊನಾಲ್ಡೊ (21ನೆ ನಿ.), ಗಾರೆತ್ ಬಾಲೆ (38ನೆ ನಿ.), ಅಲ್ವಾರೊ ಅರ್ಬೆಲೊ(80ನೆ ನಿ.) ಹಾಗೂ ಅಲ್ವಾರೊ ಮೆಡ್ರಾನ್(88ನೆ ನಿ.) ತಲಾ ಒಂದು ಗೋಲು ಬಾರಿಸಿದರು. ರೊನಾಲ್ಡೊ ಚಾಂಪಿಯನ್ಸ್ ಲೀಗ್‌ನಲ್ಲಿ 72ನೆ ಗೋಲು ಬಾರಿಸಿದರು.

ಲಿಯೊನೆಲ್ ಮೆಸ್ಸಿ (74) ದಾಖಲೆ ಮುರಿಯಲು ಇನ್ನು 2 ಗೋಲಿನ ಅಗತ್ಯವಿದೆ. 10 ಬಾರಿಯ ಚಾಂಪಿಯನ್ ಮ್ಯಾಡ್ರಿಡ್ 2011-12 ಋತುವಿನಲ್ಲಿ ಎಲ್ಲ ಲೀಗ್ ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿತ್ತು ಎಂದು ಯುಇಎಫ್‌ಎ ಹೇಳಿದೆ. ಇದೀಗ ಮ್ಯಾಡ್ರಿಡ್ ತಂಡ ಸತತ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ 2005-2006ರ ನಡುವೆ ಬಾರ್ಸಿಲೋನ ದಾಖಲಿಸಿದ್ದ 18 ಪಂದ್ಯಗಳ ದಾಖಲೆಯನ್ನು ಮ್ಯಾಡ್ರಿಡ್ ಈಗಾಗಲೆ ಸರಿಗಟ್ಟಿದೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ ಬ್ರೆಝಿಲ್‌ನ ಕೊರಿಟಿಬಾ ತಂಡ 2011ರ ಫೆಬ್ರವರಿ-ಮೇ ನಡುವೆ ಸತತ 24 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

ರಿಯಲ್ ಮ್ಯಾಡ್ರಿಡ್ ತಂಡ ಲಾ ಲಿಗ(11), ಚಾಂಪಿಯನ್ಸ್ ಲೀಗ್(6) ಹಾಗೂ ಕಿಂಗ್ಸ್ ಕಪ್(2) ಸಹಿತ ಒಟ್ಟು ಸತತ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

Write A Comment