ಮನೋರಂಜನೆ

ಮುಂಬೈ ಕ್ರಿಕೆಟಿಗ ರತ್ನಾಕರ್‌ಗೆ ಹೃದಯಾಘಾತದಿಂದ ಸಾವು

Pinterest LinkedIn Tumblr

Ratnakar-More

ಮುಂಬೈ, ಡಿ.10: ಟಾಟಾ ಪವರ್ ಟ್ರಾಂಬೆ ಸ್ಟೇಶನ್ ಕ್ರಿಕೆಟಿಗ ರತ್ನಾಕರ ಮೋರೆ ಅವರು ಮುಂಬೈ ಓವಲ್ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಅಂತರ್-ವಲಯ ಪಂದ್ಯದಲ್ಲಿ ಆಡುತ್ತಿದ್ದ ಮೋರೆಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಬಾಂಬೆ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಅವರು ಅಲ್ಲಿ ಕೊನೆಯುಸಿರೆಳೆದರು. 29ರ ಹರೆಯದ ಮೋರೆ ಆಜಾದ್ ಮೈದಾನ ಪೊಲೀಸ್ ಸ್ಟೇಶನ್‌ನಲ್ಲಿ ಕಾನ್‌ಸ್ಟೇಬಲ್ ಆಗಿರುವ ಪತ್ನಿಯನ್ನು ಅಗಲಿದ್ದಾರೆ.

‘‘ನಾವು ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದೇವೆ. ಮೋರೆ ಪತ್ನಿ ಆಜಾದ್ ಮೈದಾನ ಪೊಲೀಸ್ ಸ್ಟೇಶನ್‌ನಲ್ಲಿ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಏಳು ತಿಂಗಳ ಗರ್ಭೀಣಿಯಾಗಿದ್ದಾರೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಂತರ್ ವಲಯ ಕ್ರಿಕೆಟ್ ಟೂರ್ನಮೆಂಟನ್ನು ಟಾಟಾ ಪವರ್ ಕಂಪೆನಿ ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಈ ಟೂರ್ನಿಗೆ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಮಾನ್ಯತೆ ನೀಡಿದೆ.

ಕಳೆದ ತಿಂಗಳು ಆಸ್ಟ್ರೇಲಿಯದ ಫಿಲಿಪ್ ಹ್ಯೂಸ್ ಬೌನ್ಸರ್ ಎಸೆತ ತಾಗಿ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಇಸ್ರೇಲ್‌ನ ಮಾಜಿ ಕ್ರಿಕೆಟಿಗ ಹಾಗೂ ಮುಂಬೈ ಮೂಲದ ಅಂಪೈರ್ ಹಿಲ್ಲೆಲ್ ಆಸ್ಕರ್ ಕ್ರಿಕೆಟ್ ಪಂದ್ಯವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ತಲೆಗೆ ಚೆಂಡು ಬಡಿದು ದಾರುಣ ಸಾವನ್ನಪ್ಪಿದ್ದರು. ಇದೀಗ ರತ್ನಾಕರ್ ಮೋರೆ ಅಕಾಲಿಕ ಮರಣವನ್ನಪ್ಪಿದ್ದಾರೆ.

Write A Comment