ಮನೋರಂಜನೆ

ವಲೆನ್ಸಿಯಾ ವಿರುದ್ಧ ಬಾರ್ಸಿಲೋನಕ್ಕೆ ಜಯ: ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಮೆಸ್ಸಿಯತ್ತ ಬಾಟಲಿ ಎಸೆದ ಪ್ರೇಕ್ಷಕ

Pinterest LinkedIn Tumblr

messiಮ್ಯಾಡ್ರಿಡ್, ಡಿ.1: ವಲೆನ್ಸಿಯಾ ವಿರುದ್ಧದ ಲಾ ಲಿಗ ಪಂದ್ಯದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿಯತ್ತ ಪ್ರೇಕ್ಷಕನೋರ್ವ ನೀರಿನ ಬಾಟಲಿ ಎಸೆದ ಘಟನೆ ರವಿವಾರ ಇಲ್ಲಿ ನಡೆದಿದೆ.

ರವಿವಾರ ಇಲ್ಲಿ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಸೆರ್ಜಿಯೊ ಬಸ್ಕ್ವೆಟ್ಸ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಬಾರ್ಸಿಲೋನ ತಂಡ ವಲೆನ್ಸಿಯಾ ತಂಡವನ್ನು 1-0 ಅಂತರದಿಂದ ಮಣಿಸಿತ್ತು.

ಕಳೆದ ವಾರಾಂತ್ಯದಲ್ಲಿ ಲೀಗ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲೆ ಬರೆದಿದ್ದ ಮೆಸ್ಸಿ ಸಹ ಆಟಗಾರರೊಂದಿಗೆ ವಲೆನ್ಸಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಸಂಭ್ರಮದಲ್ಲಿದ್ದಾಗ ಪ್ರೇಕ್ಷಕರ ಗುಂಪಿನಿಂದ ಬಾಟಲಿಯೊಂದು ತೂರಿ ಬಂದು ಮೆಸ್ಸಿಯ ತಲೆಗೆ ಬಡಿಯಿತು. ತಕ್ಷಣವೇ ಕ್ಲಬ್ ಫಿಜಿಯೋ ಮೆಸ್ಸಿಯನ್ನು ಉಪಚರಿಸಿದರು.

ಆದರೆ, ಬಾಟಲಿ ಹೊಡೆತದಿಂದ ಮೆಸ್ಸಿಗೆ ಹೆಚ್ಚೇನೂ ಗಾಯವಾಗಿರಲಿಲ್ಲ. ಬಾಟಲಿ ಹೊಡೆದ ವ್ಯಕ್ತಿಯ ಗುರುತು ಪತ್ತೆಯಾದರೆ ಆತನನ್ನು ಸೆರೆ ಹಿಡಿದು ಸ್ಟೇಡಿಯಂಗೆ ಬರದಂತೆ ಆಜೀವ ನಿಷೇಧ ಹೇರಲಾಗುವುದು ಎಂದು ವಲೆನ್ಸಿಯಾ ಹೇಳಿದೆ. ಬಾರ್ಸಿಲೋನ ವಿರುದ್ಧದ ಪಂದ್ಯದ ವೇಳೆ ನಡೆದ ಅಹಿತಕರ ಘಟನೆಯ ಬಗ್ಗೆ ವಲೆನ್ಸಿಯಾ ಎಫ್‌ಸಿ ಕ್ಷಮೆಯಾಚಿಸುತ್ತದೆ. ಲಿಯೊನೆಲ್ ಮೆಸ್ಸಿಯತ್ತ ನೀರಿನ ಬಾಟಲಿಯನ್ನು ಎಸೆದಿರುವುದು ಅಕ್ಷಮ್ಯ ಅಪರಾಧ ಎಂದು ವಲೆನ್ಸಿಯಾ ಕ್ಲಬ್ ಹೇಳಿದೆ.

Write A Comment