ಮನೋರಂಜನೆ

ಝಿಂಬಾಬ್ವೆ ವಿರುದ್ದ ಏಕದಿನ ಸರಣಿ: ಕ್ಲೀನ್‌ಸ್ವೀಪ್ ಸಾಧಿಸಿದ ಬಾಂಗ್ಲಾದೇಶ

Pinterest LinkedIn Tumblr

bangadesh-1ಢಾಕಾ, ಡಿ.1: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ತಾಜುಲ್ ಇಸ್ಲಾಮ್ ಸಾಹಸದ ನೆರವಿನಿಂದ ಬಾಂಗ್ಲಾದೇಶ ತಂಡ ಝಿಂಬಾಬ್ವೆ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 5-0 ಕ್ಲೀನ್ ಸ್ವೀಪ್ ಸಾಧಿಸಿದೆ. ಬಾಂಗ್ಲಾದೇಶ ಏಕದಿನ ಪಂದ್ಯದಲ್ಲಿ ಎರಡನೆ ಬಾರಿ ಈ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ತಂಡ ತಾಜುಲ್ ಇಸ್ಲಾಮ್ ಬೌಲಿಂಗ್‌ಗೆ ತತ್ತರಿಸಿ 30 ಓವರ್‌ಗಳಲ್ಲಿ ಕೇವಲ 128 ರನ್‌ಗೆ ಆಲೌಟಾಯಿತು. ಹ್ಯಾಮಿಲ್ಟನ್ ಮಸಕಜ(52) ಅಗ್ರ ಸ್ಕೋರರ್ ಎನಿಸಿಕೊಂಡರು.

ಸಿಬಾಂಡ(37) ಮಾತ್ರ ಎರಡಂಕೆಯನ್ನು ದಾಟಿದರು. ಈ ಇಬ್ಬರು ಎರಡನೆ ವಿಕೆಟ್‌ಗೆ 79 ರನ್ ಸೇರಿಸಿದ್ದರು. ಬಾಂಗ್ಲಾದ ಪರವಾಗಿ ಇಸ್ಲಾಮ್(4-11) ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಾಕಿಬ್ ಅಲ್ ಹಸನ್(3-30) ಹಾಗೂ ಜುಬೈರ್ ಹುಸೈನ್(2-41) ಐದು ವಿಕೆಟ್‌ಗಳನ್ನು ಹಂಚಿಕೊಂಡರು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಬಾಂಗ್ಲಾದೇಶ ತಂಡ ಮಹಮುದುಲ್ಲಾ(ಅಜೇಯ 51) ಅರ್ಧಶತಕದ ನೆರವಿನಿಂದ 24.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಜಯಭೇರಿ ಬಾರಿಸಿತು.

ಸಂಕ್ಷಿಪ್ತ ಸ್ಕೋರ್
ಝಿಂಬಾಬ್ವೆ: 30 ಓವರ್‌ಗಳಲ್ಲಿ 128 ರನ್‌ಗೆ ಆಲೌಟ್
(ಹ್ಯಾಮಿಲ್ಟನ್ ಮಸಕಜ 52, ಸಿಬಾಂಡ 37, ತಾಜುಲ್ ಇಸ್ಲಾಮ್ 4-11, ಶಾಕಿಬ್ ಅಲ್ ಹಸನ್ 3-30, ಜುಬೈರ್ ಹುಸೇನ್ 2-41)
ಬಾಂಗ್ಲಾದೇಶ: 24.3 ಓವರ್‌ಗಳಲ್ಲಿ 130/5
(ಮಹಮುದುಲ್ಲಾ ಅಜೇಯ 51, ಸೌಮ್ಯ ಸರ್ಕಾರ್ 20, ಸಬ್ಬೀರ್ ರಹ್ಮಾನ್ ಅಜೇಯ 13, ಚಟಾರ 3-44, ಪನ್ಯಂಗರ 2-49)
ಪಂದ್ಯಶ್ರೇಷ್ಠ: ತೈಜುಲ್ ಇಸ್ಲಾಮ್
ಸರಣಿ ಶ್ರೇಷ್ಠ: ಮುಶ್ಫಿಕುರ್ರಹೀಂ.

Write A Comment