ಮನೋರಂಜನೆ

ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ತಾಜುಲ್ ಇಸ್ಲಾಮ್: ಏಕದಿನ ಇತಿಹಾಸದಲ್ಲಿ ಮೊತ್ತ ಮೊದಲ ಸಾಧನೆ

Pinterest LinkedIn Tumblr

bangaldehsಢಾಕಾ, ಡಿ.1: ಝಿಂಬಾಬ್ವೆ ವಿರುದ್ಧ ಸೋಮವಾರ ಇಲ್ಲಿ ನಡೆದ ಐದನೆ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ಸ್ಪಿನ್ನರ್ ತಾಜುಲ್ ಇಸ್ಲಾಮ್ ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದರು. ಇಸ್ಲಾಮ್ ಏಕದಿನ ಕ್ರಿಕೆಟ್ ಚರಿತ್ರೆಯಲ್ಲಿ ಪಾದಾರ್ಪಣೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಮೊತ್ತ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.

22ರ ಹರೆಯದ ಎಡಗೈ ಸ್ಪಿನ್ನರ್ ಇಸ್ಲಾಮ್ 27ನೆ ಓವರ್‌ನ ಕೊನೆಯ ಎಸೆತದಲ್ಲಿ ತನಿಶೆ ಪನ್ಯಂಗರ ವಿಕೆಟ್ ಪಡೆದರು. 29ನೆ ಓವರ್‌ನ ಸತತ ಎರಡು ಎಸೆತಗಳಲ್ಲಿ ಜಾನ್ ನಿಯುಬುರನ್ನು ಎಲ್ಬಿಡಬ್ಲೂ ಬಲೆಗೆ ಬೀಳಿಸಿದರೆ, ಟೆಂಡೈ ಚಟರ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ಶೇರ್-ಇ-ಬಾಂಗ್ಲಾ ಸ್ಟೇಡಿಯಂನಲ್ಲಿ 7 ಓವರ್‌ಗಳಲ್ಲಿ 11 ರನ್‌ಗೆ 4 ವಿಕೆಟ್‌ಗಳನ್ನು ಪಡೆದ ಇಸ್ಲಾಮ್ ಬಾಂಗ್ಲಾದೇಶ ತಂಡ ಝಿಂಬಾಬ್ವೆಯನ್ನು ಕೇವಲ 128 ರನ್‌ಗೆ ಆಲೌಟ್ ಮಾಡಲು ಕಾರಣರಾದರು. ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಸ್ಲಾಮ್ ಹ್ಯಾಟ್ರಕ್ ವಿಕೆಟ್ ಪಡೆದ ಬಾಂಗ್ಲಾದೇಶದ ನಾಲ್ಕನೆ ಹಾಗೂ ವಿಶ್ವದ 45ನೆ ಬೌಲರ್ ಎನಿಸಿಕೊಂಡರು.

ಚೊಚ್ಚಲ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊತ್ತ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರುಬೆಲ್ ಹುಸೈನ್ ಬದಲಿಗನಾಗಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದ ತಾಜುಲ್ ಅವರು ಶಹಾದತ್ ಹುಸೈನ್, ಅಬ್ದುರ್ರಹ್ಮಾನ್ ಹಾಗೂ ರುಬೆಲ್ ಹುಸೈನ್ ನಂತರ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬಾಂಗ್ಲಾದೇಶದ ನಾಲ್ಕನೆ ಬೌಲರ್ ಎನಿಸಿಕೊಂಡರು. ಐದು ಟೆಸ್ಟ್ ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದ ಇಸ್ಲಾಮ್ ಏಕದಿನ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.

Write A Comment