ಮನೋರಂಜನೆ

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ವೆಂಗ್‌ಸರ್ಕಾರ್‌ಗೆ ಬಿಸಿಸಿಐ ಪ್ರಶಸ್ತಿ

Pinterest LinkedIn Tumblr

ವೆ

ಮುಂಬೈ(ಪಿಟಿಐ): ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ದಿಲೀಪ್‌ ವೆಂಗಸರ್ಕಾರ್‌ (58) ಅವರಿಗೆ ಜೀವಮಾನ ಸಾಧನೆಗಾಗಿ ‘ಬಿಸಿಸಿಐ’ ನೀಡುವ ಪ್ರತಿಷ್ಠಿತ ‘ಕರ್ನಲ್‌ ಸಿ.ಕೆ. ನಾಯ್ಡು ಪ್ರಶಸ್ತಿ’ ಲಭಿಸಿದೆ.

ಕ್ರಿಕೆಟ್‌ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಸನ್ಮಾನ ಪತ್ರ, ಹಾಗೂ 25 ಲಕ್ಷದ ನಗದು ಪುರಸ್ಕಾರವನ್ನು ಪ್ರಶಸ್ತಿ ಒಳಗೊಂಡಿದೆ. ನವೆಂಬರ್‌ 21ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿದ್ದ  ವೆಂಗ್‌ಸರ್ಕಾರ್‌, 1976ರಲ್ಲಿ  ಇರಾನಿ ಕಪ್‌ ಮೂಲಕ  ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1991ರವರೆಗೆ ಅವರು ಭಾರತಕ್ಕಾಗಿ ಆಡಿದ್ದರು.1983ರಲ್ಲಿ ವಿಶ್ವಕಪ್‌, 1985ರಲ್ಲಿ ವಿಶ್ವ ಚಾಂಪಿಯನ್‌ ಪಡೆದ ಭಾರತ ಕ್ರಿಕೆಟ್‌ ತಂಡದಲ್ಲಿ ಇವರು ಇದ್ದರು ಎನ್ನುವುದು ಗಮನೀಯ ಅಂಶ.

ಹಿರಿಯ ಪತ್ರಕರ್ತ ಶೇಖರ್ ಗುಪ್ತಾ, ಬಿಸಿಸಿಐನ ಪ್ರಭಾರ ಅಧ್ಯಕ್ಷ ಶಿವ್‌ಲಾಲ್‌ ಯಾದವ್‌, ಕಾರ್ಯದರ್ಶಿ ಸಂಜಯ್‌ ಪಟೇಲ್ ಅವರನ್ನೊಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗಾಗಿ ವೆಂಗ್‌ಸರ್ಕಾರ್‌ ಅವರ ಹೆಸರನ್ನು ಅಂತಿಮಗೊಳಿಸಿದೆ.

Write A Comment