ಮನೋರಂಜನೆ

ತಾಯಾಗಲಿದ್ದಾಳಂತೆ ಸಮೀರಾ ರೆಡ್ಡಿ

Pinterest LinkedIn Tumblr

Sameera-reddy

ಬಾಲಿವುಡ್ ಅಂಗಳದಿಂದ ಶುಭ ಸಮಾಚಾರವೊಂದು ಬಂದಿದೆ. ಈ ಸುದ್ದಿ ಬಾಲಿವುಡ್‍ನ ಬೀದಿ ಬೀದಿಗಳಲ್ಲಿ ಸಂತಸ ಹೊಮ್ಮಿಸಿದೆಯಂತೆ. ಅದೇನು ಅಂಥಾ ಖುಷಿ ಸುದ್ದಿ ಏನೂ ಅಂತೀರಾ… ನಿಮ್ಮ ಕುತೂಹಲವೂ ಸಹಜವೇ ಬಿಡಿ. ಇರಲಿ, ಈಗ ಸುದ್ದಿ ಏನಂದ್ರೆ, ಸಮೀರಾ ರೆಡ್ಡಿ… ಅಂದ್ರೆ ಗೊತ್ತಲ್ಲ..? ಬಾಲಿವುಡ್‍ನ ಹಾಟ್ ಬೆಡಗಿ. ಹೌದು… ಅದೇ ಸೌಮ್… ಅವಳೀಗ ತನ್ನ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾಳಂತೆ.

ಅಂದ್ರೆ… ಸಮೀರಾರೆಡ್ಡಿ ತಾಯಿಯಾಗಲಿದ್ದಾಳೆ ಎಂದರ್ಥ. ಅಂದಹಾಗೇ ಹೇಳೋದೇ ಮರ್ತಿದ್ದೆ. ಈ ವರ್ಷದ ಆದಿಯಲ್ಲಿ ನಟಿ ಸಮೀರಾ ಮದುವೆಯಾಗಿದ್ದಳು. ಉದ್ಯಮಿ ಪತಿಯ ಹೆಸರು ಅಕ್ಷಯ್ ವಾರ್ಡೆ ಅಂತೆ. ಅಕ್ಷಯ್ ಬೈಕ್ ಕಂಪೆನಿ ನಡೆಸುತ್ತಿದ್ದಾನೆ. ಈ ಉದ್ಯಮಿ ಮತ್ತು ನಟಿ ದಂಪತಿ ಇದೀಗ ತಮ್ಮ ಮೊದಲ ಮಗುವಿನ ಆಗಮನವನ್ನು ನಿರೀಕ್ಷಿಸುತ್ತ ಅಡಿಗಡಿಗೂ ಪುಳಕಿತಗೊಳ್ಳುತ್ತಿದ್ದಾರಂತೆ, ರೋಮಾಂಚನಗೊಳ್ಳುತ್ತಿದ್ದಾರಂತೆ.

ಆ ಥ್ರಿಲ್ ಎಂಥದ್ದು ಅಂತ ಹೇಳಲು ಸಾಧ್ಯವಿಲ್ಲ.

ಅದನ್ನು ಅನುಭವಿಸಿಯೇ ನೋಡಬೇಕು ಎಂಬುದು ಈ ದಂಪತಿಯ ಅಭಿಪ್ರಾಯವಂತೆ. ಯಾವುದೇನೇ ಆಗಿರಲಿ, ನಟಿ ಸಮೀರಾ ರೆಡ್ಡಿ ತಾಯಿಯಾಗುವುದು ಗ್ಯಾರಂಟಿ. ಹಾಗೇ ಅಕ್ಷಯ್ ತಂದೆಯಾಗುವುದೂ ಕೂಡ. ಅಂತೂ ಮಕ್ಕಳ ದಿನಾಚರಣೆಗೆ ಒಳ್ಳೆ ಸುದ್ದಿ..!

Write A Comment