ಕನ್ನಡ ವಾರ್ತೆಗಳು

ಡಾ.ರಾಜಕುಮಾರ್ ಪ್ರತಿಮೆಗೆ ‘ಸೋ ಕಾಲ್ಡ್’ ಅಭಿಮಾನಿಗಳೇ ಕೊಳ್ಳಿ ಇಟ್ಟರು| ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಲ್ಲದ ನೆಪ | ಐವರ ಬಂಧನ

Pinterest LinkedIn Tumblr

ಬೆಂಗಳೂರು: ಡಾ. ರಾಜಕುಮಾರ್ ಸೇವಾಸಮಿತಿ ರಚಿಸಿಕೊಂಡು ತಾವು ಅವರ ಅಭಿಮಾನಿಗಳು ಎಂದು ಫೋಸು ಕೊಟ್ಟಿದ್ದ ಈ ಕೆಲವು ಕಿಡಿಗೇಡಿ ಅಭಿಮಾನಿಗಳಿಂದಲೇ ಡಾ. ರಾಜ್ ಪ್ರತಿಮೆಗೆ ಬೆಂಕಿ ಬಿದ್ದಿದೆ ಎಂಬ ಆಘಾತಕಾರಿ ಕೇಳಿ ಸುದ್ದಿ ಸಮಸ್ತ ಅಭಿಮಾನಿಗಳೂ ದಂಗಗಿದ್ದಾರೆ.

RAJ
ಮೊನ್ನೆ ಬುಧವಾರ ತಡರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿ ‘ಸಿಪಾಯಿ ರಾಮು’ ಗೆಟಪ್ ನಲ್ಲಿರುವ ವರನಟ ಡಾ. ರಾಜಕುಮಾರ್ ಪ್ರತಿಮೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಗುರುವಾರ ಬೆಳಿಗ್ಗೆ ವರದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಜರಾಜೇಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಂಡ ಪೊಲಿಸರು ‘ಸೋ ಕಾಲ್ಡ್’ ಅಭಿಮಾನಿಗಳಾದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುತ್ತುರಾಜ್, ಪ್ರದೀಪ್, ಚೇತನರಾಜ್, ರವಿಕಿರಣ ಮತ್ತು ಮಂಜುನಾಥ ಎನ್ನುವ ದುರುಳರೇ ಬಂಧಿತ ಆರೋಪಿಗಳಾಗಿದ್ದಾರೆ.
ಈ ಐವರು ಆರೋಪಿಗಳು ಡಾ. ರಾಜಕುಮಾರ್ ಸೇವಾ ಸಮಿತಿಯ ಸದಸ್ಯರಾಗಿದ್ದು ರಾಜಕುಮಾರ್ ಅಭಿಮಾನಿಗಳೆಂದು ಹೇಳಿಕೊಂಡು ತಿರುಗುತ್ತಿದ್ದರು ಎನ್ನಲಾಗಿದೆ.

crime

ಕಾರಣ ಏನು?: ಸಿಪಾಯಿರಾಮು ಗೆಟಪ್ಪಿನಲ್ಲಿರುವ ಡಾ. ರಾಜಕುಮಾರ್ ಪ್ರತಿಮೆಯನ್ನು ಅಭಿಮಾನಿಯೊಬ್ಬರು ನಿರ್ಮಿಸಿ ಕಳೆದ ೫ಕ್ಕೂ ಹೆಚ್ಚು ವರ್ಷಗಳಿಂದ ತಮ್ಮ ಮನೆಯಲ್ಲಿಟ್ಟು ಪೂಜಿಸುತ್ತಿದ್ದರು. ಅವರೇ ಈ ರಾಜರಾಜೇಶ್ವರಿ ನಗರದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸಲು ಸರ್ವ ಸಿದ್ಧತೆಯನ್ನು ಮಡಿಕೊಂಡಿದ್ದರು. ಇದಕ್ಕಾಗಿ ಒಂದು ಸಮಿತಿಯೂ ರಚಿತವಾಗಿತ್ತು. ಈ ಫಟಿಂಗರು ಈ ಸಮಿತಿಯಲ್ಲಿ ಸದಯ್ಸರಾಗಿದ್ದರು. ಮುಂದಿನ ವಾರ ಅಂದರೇ ನ.೨೩ ರಂದು ವಿಜ್ರಂಭಣೆಯಿಂದ ಈ ಪ್ರತಿಮೆ ಲೋಕಾರ್ಪಣೆಗೊಳ್ಲಲಿತ್ತು. ಆದರೇ ಈ ಅಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ಡಾ. ರಾಜ್ ಅಭಿಮಾನಿಗಳನ್ನು ಕಡೆಗಣಿಸಿ ಕೇವಲ ಸಮಿತಿ ಅಧ್ಯಕ್ಷ ಶ್ರೀನಿವಾಸ ಎನ್ನುವರರ ಹೆಸರು ಮತ್ತು ಭಾವಚಿತ್ರ ಹಾಕಲಾಗಿದೆ, ತಮ್ಮ ಭಾವಚಿತ್ರ ಮತ್ತು ಹೆಸರು ನಮೂದಿಸಿಲ್ಲ ಎನ್ನುವ ಕಾರಣಕ್ಕೆ ಈ ಘಟನೆ ನಡೆದಿದೆ.

ಬುಧವಾರ ತಡರಾತ್ರಿ ೨.೩೦ ಕ್ಕೆ ಇವರೆಲ್ಲರೂ ಪ್ರತಿಮೆ ಬಳಿ ಬಂದು ಪೆಟ್ರೋಲ್ ಸುರಿದು ಪ್ರತಿಮೆಗೆ ಬೆಂಕಿಯನ್ನಿಟ್ಟಿದ್ದಾರೆ. ಬಳಿಕ ಅಲ್ಲಿಂದ ಕಾಲ್ಕಿತ್ತ ಇವರು ಘಟನೆ ಖಂಡಿಸಿ ಬೆಳಿಗ್ಗೆನಿಂದ ನಡೆದ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದರು ಎನ್ನಲಾಗಿದೆ.

ಪೊಲೀಸರು ಈ ಬಗ್ಗೆ ತೀವ್ರ ಕಾರ್ಯಾಚರಣೆ ನಡೆಸಿ ಈ ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆನ್ನಲಾಗಿದ್ದು, ಇವರೆಲ್ಲರೂ ಆಟೋ ಚಾಲಕರು ಎನ್ನಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಹಾಗೂ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಬೆಂಗಳೂರಿನಲ್ಲಿ ಸುದ್ಧಿಗೋಷ್ಟಿ ಕರೆದು ಬಂಧಿತ ಐವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಗಳೆಂಬ ಹೆಸರಿನಲ್ಲಿ ತಮ್ಮ ವೈಯಕಿಕ ವಾಂಛೆ, ಪ್ರಚಾರದ ಆಸೆ ತೀರಿಲ್ಲವೆಂದು ಡಾ.ರಾಜಕುಮಾರ್ ಅವರ ಪ್ರತಿಮೆಗೆ ಕೊಳ್ಳಿ ಇಟ್ಟು ವಿರೂಪಗೊಳಿಸಿದ್ದು ಮಾತ್ರ ಖಂಡನೀಯ ಎಂಬ ಮತು ಎಲ್ಲೆಡೆ ಕೇಳಿಬರುತ್ತಿದೆ.

Write A Comment