ಮನೋರಂಜನೆ

ವಿಜಯ್ ಹಝಾರೆ ಟ್ರೋಫಿ : ಭಾವ್ನೆ 81, ಅಗರವಾಲ್ 70: ನಾಲ್ಕನೆ ಜಯ ದಾಖಲಿಸಿದ ಕರ್ನಾಟಕ

Pinterest LinkedIn Tumblr

MAYANK

ಹೈದರಾಬಾದ್, ನ.11: ಕರ್ನಾಟಕ ತಂಡ ಇನ್ನೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಲ್ಲಿ ನಡೆದ ದಕ್ಷಿಣ ವಲಯ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಐದು ವಿಕೆಟ್‌ಗಳ ಜಯ ಗಳಿಸಿದೆ.
ಗೆಲುವಿಗೆ 296 ರನ್‌ಗಳ ಕಠಿಣ ಸವಾಲನ್ನು ಪಡೆದ ಕರ್ನಾಟಕ ತಂಡ 48 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 300 ರನ್ ಗಳಿಸಿ, ಟೂರ್ನಿಯಲ್ಲಿ ಸತತ ನಾಲ್ಕನೆ ಜಯ ದಾಖಲಿಸಿತು.
ಶಿಶಿರ ಭಾವ್ನೆೆ (81), ಮಾಯಾಂಕ್ ಅಗರವಾಲ್ (70) ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರಂಭಿಕ ದಾಂಡಿಗ ಮಾಯಾಂಕ್ ಅಗರವಾಲ್ (68 ಎಸೆತಗಳಲ್ಲಿ 70 ರನ್) ಮತ್ತು ಕೆಎಲ್ ರಾಹುಲ್ (58 ಎಸೆತಗಳಲ್ಲಿ 53 ರನ್) ಮೊದಲ ವಿಕೆಟ್‌ಗೆ 112 ರನ್‌ಗಳ ಜೊತೆಯಾಟ ನೀಡಿದರು.
ಅಗರವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 9 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಕರ್ನಾಟಕ ಮೊದಲ ವಿಕೆಟ್‌ಗೆ 18.4 ಓವರ್‌ಗಳಲ್ಲಿ 112 ರನ್ ತಲುಪಿದ್ದಾಗ ರಾಹುಲ್ ವಿಕೆಟ್ ಕಳೆದುಕೊಂಡಿತು. ಅಗರವಾಲ್ ನಿರ್ಗಮಿಸಿದ ಬಳಿಕ ಕ್ರೀಸ್‌ಗೆ ಆಗಮಿಸಿದ ಶಿಶಿರ್ ಭಾವನೆ (76 ಎಸೆತಗಳಲ್ಲಿ 81) ಮತ್ತು ಮನೀಷ್ ಪಾಂಡೆ( 56) ಮೂರನೆ ವಿಕೆಟ್‌ಗೆ 84 ಎಸೆತಗಳಲ್ಲಿ 93 ರನ್ ಸೇರಿಸಿದರು.
ಇದಕ್ಕೂ ಮೊದಲು ಹೈದರಾಬಾದ್ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 295 ರನ್ ಮಾಡಿತ್ತು. ತನ್ಮಯ್ ಅಗರವಾಲ್ 136 ರನ್(123 ಎ, 13ಬೌ, 4ಸಿ), ಹನುಮ ವಿಹಾರಿ (101 ಎಸೆತಗಳಲ್ಲಿ 82 ರನ್), ಆಶೀಶ್ ರೆಡ್ಡಿ 35 ಎಸೆತಗಳಲ್ಲಿ 51 ರನ್ ಸೇರಿಸಿದರು.
35ಕೆ್ಕ ಆಲೌಟಾದ ರಾಜಸಾ್ಥನ
ನಾಗ್ಪುರ, ನ.11: ರಾಜಸ್ಥಾನ ತಂಡ ಇಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ 35 ರನ್‌ಗಳಿಗೆ ಆಲೌಟಾಗಿದ್ದು, ರೈಲ್ವೇಸ್ 9 ವಿಕೆಟ್‌ಗಳ ಜಯ ಗಳಿಸಿದೆ.
ಗೆಲ್ಲಲು 36 ರನ್ ಮಾಡಬೇಕಿದ್ದ ರೈಲ್ವೇಸ್ ತಂಡ ಅಸದ್ ಪಠಾಣ್(20), ಕೌಶಿಕ್ (ಔಟಾಗದೆ 1) ಮತ್ತು ಮಜುಂದಾರ್(ಔಟಾಗದೆ 35) ನೆರವಿನಲ್ಲಿ 5.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 39 ರನ್ ಗಳಿಸಿತು.
ರೈಲ್ವೇಸ್‌ನ ಅನುರೀತ್ ಸಿಂಗ್ ಮತ್ತು ಅಮಿತ್ ಮಿಶ್ರಾ ದಾಳಿಗೆ ಸಿಲುಕಿ ರಾಜಸ್ಥಾನ ತಂಡ ಬೇಗನೆ ಇನಿಂಗ್ಸ್ ಮುಗಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡದ ಐದು ಮಂದಿ ದಾಂಡಿಗರು ಖಾತೆ ತೆರೆಯದೆ ಸೊನ್ನೆ ಸುತ್ತಿದರು. ಅನುರೀತ್ ಸಿಂಗ್(5-16) ಮತ್ತು ಅಮಿತ್ ಮಿಶ್ರಾ(5-18) ದಾಳಿಗೆ ಸಿಲುಕಿ ರಾಜಸ್ಥಾನ ತಂಡ ಕಡಿಮೆ ಮೊತ್ತಕ್ಕೆ ಆಲೌಟಾಯಿತು. 0,0, 0, 0, 4, 13, 4, 0, 1, 6 ಹಾಗೂ 4 ಇದು ರಾಜಸ್ಥಾನ ತಂಡದ 11 ಮಂದಿ ಆಟಗಾರರು ಗಳಿಸಿದ ಸ್ಕೋರ್. ಇತರೆ 3 ರನ್ ಸೇರಿದ ಕಾರಣದಿಂದಾಗಿ ಸ್ಕೋರ್ 35ಕ್ಕೆ ತಲುಪಲು ಸಾಧ್ಯವಾಯಿತು. ತಂಡಕ್ಕೆ ಚೊಚ್ಚಲ ಪ್ರವೇಶ ಪಡೆದ ಅರ್ಜಿತ್ ಗುಪ್ತಾ ಔಟಾಗದೆ 13 ರನ್(45ಎ, 2ಬೌ) ಮಾತ್ರ ಎರಡಂಕೆಯ ಕೊಡುಗೆ ನೀಡಿದರು. ಎಸ್‌ಜಿ ಗೆಲ್ಲೋಟ್(6), ಪಂಕಜ್ ಸಿಂಗ್(4), ಯಾಗ್ನೀಕ್(4) ಇವರ ನೆರವಿನಲ್ಲಿ ತಂಡದ ಸ್ಕೋರ್ 15.3ಕ್ಕೆ ಓವರ್‌ನಲ್ಲಿ 35ಕ್ಕೆ ತಲುಪಲು ಸಾಧ್ಯವಾಯಿತು.
ಅನುರೀತ್ ಸಿಂಗ್ ಅವರ ಮೊದಲ ಓವರ್‌ನ ಮೂರನೆ ಎಸೆತದಲ್ಲಿ ಆರಂಭಿಕ ದಾಂಡಿಗ ಸುವಾಲ್ಕ (0) ವಿಕೆಟ್ ಕಳೆದುಕೊಂಡಿತು. ಬಳಿಕ ರಾಬಿನ್ ಬಿಸ್ತ್(0), ಪುನೀತ್ ಯಾದವ್(0), ಪ್ರಣಯ್ ಶರ್ಮ(0) ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಅಶೋಕ್ ಶರ್ಮ (4) ಮೊದಲ ಬೌಂಡರಿ ಬಾರಿಸಿ ಸ್ಕೋರ್‌ನ್ನು 3.2 ಓವರ್‌ಗಳಲ್ಲಿ 7ಕ್ಕೆ ಏರಿಸಿ ಔಟಾದರು. ವಿಕೆಟ್ ಕೀಪರ್ ಯಾಗ್ನೀಕ್(4) ಅವರು ಬೌಂಡರಿ ಬಾರಿಸಿ ಸ್ಕೋರ್‌ನ್ನು 12ಕ್ಕೆ ತಲುಪಿಸಿ ಅನುರೀತ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಚಾಹರ್(0) ಬಂದ ದಾರಿಯಲ್ಲೆ ಪೆವಿಲಿಯನ್ ಸೇರಿದರು.
ರೈಲ್ವೇಸ್ ತಂಡ 5.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 39 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ವಿಜಯ್ ಹಝಾರೆ ಟ್ರೋಫಿಯಲ್ಲಿ 1999-2000ನೆ ಸಾಲಿನಲ್ಲಿ ಮುಂಬೈ ವಿರುದ್ಧ ಸೌರಾಷ್ಟ್ರ ತಂಡ 34 ರನ್‌ಗಳಿಗೆ ಆಲೌಟಾಗಿತ್ತು. ಇದು ಹಿಂದಿನ ಕನಿಷ್ಠ ಸ್ಕೋರ್ ಅಗಿದೆ.

-http://vbnewsonline.com

Write A Comment