ಮನೋರಂಜನೆ

ವಿಶ್ವ ಚೆಸ್ ಟೂರ್ನಿ: ಆನಂದ್‌ಗೆ ಜಯ

Pinterest LinkedIn Tumblr

ananda

ಸೋಚಿ, ನ.11: ಇಂದು ಇಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಮೂರನೆ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರು ಹಾಲಿ ಚಾಂಪಿಯನ್ ನಾರ್ವೆಯ ಮ್ಯಾಗ್ನೆಸ್ ಕಾರ್ಲ್‌ಸನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಎರಡನೆ ಪಂದ್ಯದಲ್ಲಿ ಸೋತಿದ್ದ ಆನಂದ್‌ಗೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಆ ನಿಟ್ಟಿಯಲ್ಲಿ ಇಂದು ಯಶಸ್ವಿಯಾದ ಆನಂದ್ ತನ್ನೆಲ್ಲಾ ಪ್ರಯತ್ನದಿಂದ ಕಾರ್ಲ್‌ಸನ್‌ಗೆ ಸೋಲುಣಿಸಿದರು. ಇದೀಗ 12 ಗೇಮ್‌ಗಳ ಪಂದ್ಯದಲ್ಲಿ ತಲಾ ಒಂದರಲ್ಲಿ ಗೆಲುವು, ಮತ್ತೊಂದರಲ್ಲಿ ಡ್ರಾ ಸಾಧಿಸಿರುವ ಆನಂದ್ ಹಾಗೂ ಕಾರ್ಲ್‌ಸನ್ 1.5-1.5 ಅಂಕವನ್ನು ಸಂಪಾದಿಸಿದ್ದಾರೆ.

Write A Comment