ಮನೋರಂಜನೆ

ದುಬೈಗೆ ಮರಳಿದ ಐಸಿಸಿ ವಿಶ್ವಕಪ್ ಟ್ರೋಫಿ

Pinterest LinkedIn Tumblr

UAE222

ದುಬೈ, ಅ.9: ಇಲ್ಲಿನ ಐಸಿಸಿ ಪ್ರಧಾನ ಕಚೇರಿಯಿಂದ ಜು.3 ರಂದು ವಿಶ್ವ ಪರ್ಯಟನೆ ಆರಂಭಿಸಿದ್ದ ಐಸಿಸಿ ವಿಶ್ವಕಪ್ 2015ರ ಟ್ರೋಫಿ ಇಂದು ದುಬೈಗೆ ಮರಳಿದೆ. ವಿಶ್ವಕಪ್ ಟ್ರೋಫಿಯು ಈ ತನಕ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಇಂಗ್ಲೆಂಡ್, ಸ್ಕಾಟ್ಲೆಂಡ್, ಐರ್ಲೆಂಡ್, ವೇಲ್ಸ್, ದಕ್ಷಿಣ ಆಫ್ರಿಕ, ಝಿಂಬಾಬ್ವೆ, ಹಾಗೂ ಪಪುವಾ ನ್ಯೂ ಗುನಿಯಾ ದೇಶಕ್ಕೆ ಭೇಟಿ ನೀಡಿತ್ತು.

ವಿಶ್ವಕಪ್ ಟ್ರೋಫಿ ಇಲ್ಲಿಂದ ವೆಸ್ಟ್‌ಇಂಡೀಸ್‌ಗೆ ತೆರಳಲಿದೆ. ಯುಎಇ ಕ್ರಿಕೆಟ್ ಕೋಚ್ ಹಾಗೂ 1992ರ ಪಾಕಿಸ್ತಾನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಅಖಿಬ್ ಜಾವೆದ್ ಇಲ್ಲಿನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ವಿಶ್ವಕಪ್ ಟ್ರೋಫಿಯನ್ನು ಬರಮಾಡಿಕೊಂಡರು. ‘‘ಪ್ರತಿಯೋರ್ವ ಕ್ರಿಕೆಟಿಗರ ಹೃದಯದಲ್ಲಿ ಈ ಟ್ರೋಫಿ ವಿಶೇಷ ಸ್ಥಾನ ಪಡೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೊಂದು ಅತ್ಯಂತ ಶ್ರೇಷ್ಠ ಪ್ರಶಸ್ತಿ. ಯುಎಇ ಕ್ರಿಕೆಟ್ ತಂಡ 1996ರ ನಂತರ ಮೊದಲ ಬಾರಿ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡಲಿದೆ. ನಾವು ಅಭಿಮಾನಿಗಳಿಗೆ ಹೆಮ್ಮೆಯಾಗುವಂತೆ ಪ್ರದರ್ಶನ ನೀಡಲಿದ್ದೇವೆ’’ ಎಂದು ಜಾವೆದ್ ಹೇಳಿದ್ದಾರೆ.

ಯುಎಇ ತಂಡ ಇತ್ತೀಚೆಗಷ್ಟೇ ಆಸ್ಟ್ರೇಲಿಯ ಪ್ರವಾಸದಿಂದ ಮರಳಿದೆ. ಐಸಿಸಿ ಉನ್ನತ ಪ್ರದರ್ಶನ ಕಾರ್ಯಕ್ರಮದನ್ವಯ ಯುಎಇ ತಂಡ ಇತರ ಅಸೋಸಿಯೇಟೆಡ್ ತಂಡಗಳಾದ ಅಫ್ಘಾನಿಸ್ತಾನ, ಐರ್ಲೆಂಡ್, ಸ್ಕಾಟ್ಲೆಂಡ್ ತಂಡದೊಂದಿಗೆ ವಿಶ್ವಕಪ್ ಆತಿಥ್ಯವನ್ನು ವಹಿಸಿಕೊಂಡಿರುವ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿತ್ತು. ವಿಶ್ವದ ಅತ್ಯಂತ ದೊಡ್ಡ ಕ್ರೀಡಾ ಹಬ್ಬ ವಿಶ್ವಕಪ್ ಫೆ.14 ರಂದು ಕ್ರೈಸ್ಟ್‌ಚರ್ಚ್ ಹಾಗೂ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದ್ದು, ಮಾ.29 ರಂದು ಮೆಲ್ಬೋರ್ನ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Write A Comment