ಮನೋರಂಜನೆ

ಫೋರ್ಬ್ಸ್ ಶ್ರೀಮಂತ ಅಥ್ಲೀಟ್ ಪಟ್ಟಿ: ಐದನೆ ಸ್ಥಾನದಲ್ಲಿ ಧೋನಿ

Pinterest LinkedIn Tumblr

dhoni_

ಹೊಸದಿಲ್ಲಿ, ಅ.9: ಫೋರ್ಬ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಐದನೆ ಸ್ಥಾನಕ್ಕೆ ಏರಿದ್ದಾರೆ. ಪಟ್ಟಿಯಲ್ಲಿ ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಅಗ್ರ ಸ್ಥಾನದಲ್ಲಿದ್ದಾರೆ. ಗಾಲ್ಫರ್ ಟೈಗರ್‌ವುಡ್ ಹಾಗೂ ಟೆನಿಸ್ ಸ್ಟಾರ್‌ಗಳಾದ ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2014ರಲ್ಲಿ 20 ಮಿಲಿಯನ್ ಡಾಲರ್ ಬ್ರಾಂಡ್ ವೌಲ್ಯವನ್ನು ಹೊಂದಿರುವ ಧೋನಿ ಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದ್ದಾರೆ.

ಧೋನಿ ಕಳೆದ ವರ್ಷ 20 ಮಿಲಿಯನ್ ಡಾಲರ್ ಬ್ರಾಂಡ್ ವೌಲ್ಯ ಹೊಂದಿದ್ದರು. ಈ ವರ್ಷ 37 ಮಿಲಿಯನ್ ಡಾಲರ್ ಬ್ರಾಂಡ್ ವೌಲ್ಯ ಹೊಂದಿರುವ ಜೇಮ್ಸ್ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದಾರೆ. 2007ರ ನಂತರ ಇದೇ ಮೊದಲ ಬಾರಿ ವೌಲ್ಯಯುತ ಅಥ್ಲೀಟ್‌ಗಳ ಬ್ರಾಂಡ್ ಪಟ್ಟಿಯಲ್ಲಿ ಟೈಗರ್ ವುಡ್ಸ್ ಬದಲಿಗೆ ಜೇಮ್ಸ್ ಸ್ಥಾನ ಪಡೆದಿದ್ದಾರೆ. 36 ಮಿಲಿಯನ್ ಡಾಲರ್ ಬ್ರಾಂಡ್ ವ್ಯಾಲ್ಯೂ ಹೊಂದಿರುವ ವುಡ್ಸ್ ಎರಡನೆ ಸ್ಥಾನದಲ್ಲಿದ್ದಾರೆ. ಸ್ವಿಸ್ ಟೆನಿಸ್ ಸ್ಟಾರ್ ರೋಜರ್ ಫೆಡರರ್(32 ಮಿಲಿಯನ್ ಡಾಲರ್) ಮೂರನೆ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಜಮೈಕಾದ ಓಟಗಾರ ಉಸೇನ್ ಬೋಲ್ಟ್ಟ್(6), ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ(7), ಅರ್ಜೆಂಟೀನದ ವೃತ್ತಿಪರ ಫುಟ್ಬಾಲ್ ಪಟು ಲಿಯೊನೆಲ್ ಮೆಸ್ಸಿ(9) ಹಾಗೂ ನಡಾಲ್ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

Write A Comment