ಮನೋರಂಜನೆ

ಏಷ್ಯನ್ ಗೇಮ್ಸ್‌ಗೆ ತೆರೆ: ಭಾರತಕ್ಕೆ 8ನೆ ಸ್ಥಾನ, ಚೀನಾ ನಂ.1

Pinterest LinkedIn Tumblr

asi

ಇಂಚೋನ್, ಅ.4: ಹದಿನೇಳನೆ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ಶನಿವಾರ ಇಲ್ಲಿ ವರ್ಣರಂಜಿತ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ತೆರೆ ಬಿದ್ದಿದೆ. ಭಾರತ 8ನೆ ಸ್ಥಾನದೊಂದಿಗೆ ಗೇಮ್ಸ್‌ನ ಅಭಿಯಾನ ಕೊನೆಗೊಳಿಸಿದ್ದು, ಕಳೆದ ಆವೃತ್ತಿಯ ಗೇಮ್ಸ್‌ಗೆ ಹೋಲಿಸಿದರೆ ಈ ಬಾರಿ ಎರಡು ಸ್ಥಾನ ಕಳೆದುಕೊಂಡಿದೆ.

ಭಾರತ 11 ಚಿನ್ನ, 10 ಬೆಳ್ಳಿ ಹಾಗೂ 36 ಕಂಚಿನ ಪದಕಗಳ ಸಹಿತ ಒಟ್ಟು 57 ಪದಕಗಳನ್ನು ಜಯಿಸಿದೆ. 2010ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 14 ಚಿನ್ನ, 17 ಬೆಳ್ಳಿ ಹಾಗೂ 34 ಕಂಚು ಸಹಿತ ಒಟ್ಟು 65 ಪದಕಗಳನ್ನು ಜಯಿಸಿ ಆರನೆ ಸ್ಥಾನ ಪಡೆದಿತ್ತು. ನಿರೀಕ್ಷೆಯಂತೆಯೇ ಚೀನಾ ದೇಶ ಒಟ್ಟು 342 ಪದಕಗಳನ್ನು ಜಯಿಸುವ ಮೂಲಕ ಅಂಕಪಟ್ಟಿ ಯಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದೆ. ಚೀನಾ ಸತತ 9ನೆ ವರ್ಷ ನಂ.1 ಸ್ಥಾನ ಪಡೆದು ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಚೀನಾದ ಅಥ್ಲೀ ಟ್‌ಗಳು 151 ಚಿನ್ನ, 108 ಬೆಳ್ಳಿ ಹಾಗೂ 83 ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ಆತಿಥೇಯ ದಕ್ಷಿಣ ಕೊರಿಯಾ 234 ಪದಕಗಳೊಂದಿಗೆ ಎರಡನೆ ಸ್ಥಾನ ಪಡೆದಿದೆ. ಕೊರಿಯಾದ ಅಥ್ಲೀಟ್‌ಗಳು 79 ಚಿನ್ನ, 71 ಬೆಳ್ಳಿ ಹಾಗೂ 77 ಕಂಚಿನ ಪದಕವನ್ನು ಜಯಿಸಿದ್ದಾರೆ. 200 ಪದಕಗಳನ್ನು (47 ಚಿನ್ನ, 76 ಬೆಳ್ಳಿ ಹಾಗೂ 77 ಕಂಚು) ಜಯಿಸುವ ಮೂಲಕ ಜಪಾನ್ ಮೂರನೆ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ ಏಷ್ಯಾಡ್ ಪ್ರಮುಖ ಸ್ಟೇಡಿಯಂನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷ ಶೇಖ್ ಅಹ್ಮದ್ ಫಹದ್ ಅಲ್-ಸಬಾ ಅಧಿಕೃತ ವಾಗಿ ಗೇಮ್ಸ್‌ಗೆ ಮುಕ್ತಾಯ ಘೋಷಿಸಿದರು.

ಶುಕ್ರವಾರ ಭಾರತ ಪುರುಷರ ಹಾಗೂ ಮಹಿಳೆಯ ವಿಭಾಗದ ಕಬಡ್ಡಿಯಲ್ಲಿ ಚಿನ್ನದ ಪದ ಕಗಳನ್ನು ಗೆದ್ದುಕೊಂಡಿತ್ತು. ಆದರೆ, ಕೊನೆಯ ದಿನವಾದ ಶನಿವಾರ ಭಾರತ ಯಾವುದೇ ಸ್ಪರ್ಧೆ ಯಲ್ಲಿ ಭಾಗವಹಿಸಲಿಲ್ಲ. 45 ದೇಶಗಳ 9,500 ಅಥ್ಲೀಟ್‌ಗಳು 15 ದಿನಗಳ ಕಾಲ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಪ್ರತಿ ಭೆಯನ್ನು ಅನಾವರಣಗೊಳಿಸಿದ್ದು, 14 ವಿಶ್ವ ದಾಖಲೆಗಳು ನಿರ್ಮಿಸಲ್ಪಟ್ಟಿದ್ದರೆ, 40 ಏಷ್ಯಾ ದಾಖಲೆಗಳು ಪತನಗೊಂಡವು. 18ನೆ ಆವೃತ್ತಿಯ ಏಷ್ಯನ್ ಗೇಮ್ಸ್ ಇಂಡೋ ನೇಷ್ಯದ ರಾಜಧಾನಿ ಜಕಾರ್ತದಲ್ಲಿ ನಡೆಯಲಿದೆ.

Write A Comment