ಕರ್ನಾಟಕ

ಮೈಸೂರು: ಅದ್ದೂರಿ ಜಂಬೂಸವಾರಿ; ಧಾರ್ಮಿಕತೆ , ಸಾಂಸ್ಕೃ ತಿಕತೆಯ ಸಮ್ಮಿಲನ

Pinterest LinkedIn Tumblr

Dasara223

ವಿಶ್ವವಿಖ್ಯಾತ 404ನೆ ದಸರೆಗೆ ತೆರೆ ಮೈಸೂರು, ಅ.4: ವಿಜಯನಗರ ಸಾಮ್ರಾಜ್ಯದಿಂದ ಬಳುವಳಿಯಾಗಿ ಬಂದ ಧಾರ್ಮಿಕತೆ ಹಾಗೂ ಸಾಂಸ್ಕೃತಿಕತೆಯ ಸಮ್ಮಿಲನ ವಿಜಯದಶಮಿ ಮೆರವ ಣಿಗೆ ಅತ್ಯಂತ ವಿಜೃಂಭಣೆ ಹಾಗೂ ಶಿಸ್ತಿನಿಂದ ಜರಗಿತು. ಲಕ್ಷಾಂತರ ಮಂದಿ ಪ್ರವಾಸಿಗರು ಸಾಂಸ್ಕೃತಿಕನಗರಿ ಮೈಸೂರಿನ ಗತವೈಭವವನ್ನು ಕಣ್ತುಂಬಿಕೊಂಡ ರು. ಆ ಮೂಲಕ ವಿಶ್ವ ವಿಖ್ಯಾತ 404ನೆ ದಸರಗೆ ತೆರೆ ಎಳೆಯಲಾಯಿತು.

750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ, ಮೂವತ್ತು ಜಿಲ್ಲೆಗೆ ವೈವಿಧ್ಯಮಯ ಸ್ತಬ್ಧ ಚಿತ್ರ ಗಳು, ಒಂದಕ್ಕಿಂತ ಒಂದು ಮಿಗಿಲಾಗಿದ್ದ ಜಾನಪದ ಕಲಾ ಮೇಳ, ಅಶ್ವದಳ, ಆರಕ್ಷಕ ದಳಗಳ ಶಿಸ್ತಿನ ಹೆಜ್ಜೆ ಜನರ ಮೆಚ್ಚಿಗೆ ಗಳಿಸಿತು. ಈ ಬಾರಿ ಯಾವುದೇ ಗೊಂ ದಲ, ಗೋಜಲಿಗೆ ಎಡೆ ಮಾಡಿಕೊಡದೆ, ಮೆರವಣಿಗೆಗೆ ಶಿಸ್ತಿನ ಸ್ಪರ್ಶ ನೀಡಿದ್ದು, ವಿಶೇಷವಾಗಿತ್ತು.

ಶನಿವಾರ ಮಧ್ಯಾಹ್ನ 1.05ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮ ಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಂದಿಧ್ವಜ ಕುಣಿತಕ್ಕೆ ಹೆಜ್ಜೆ ಹಾಕಿದರು. ಅನಂತರ ಮಧ್ಯಾಹ್ನ 3:20ಕ್ಕೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ನಾಡದೇವಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾ ರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ವಿ.ಶ್ರೀನಿವಾಸ ಪ್ರಸಾದ್, ಎಚ್.ಸಿ.ಮಹಾದೇವಪ್ಪ, ಎಚ್.ಎಸ್.ಮಹಾದೇವಪ್ರಸಾದ್, ಜಿಲ್ಲಾಧಿಕಾರಿ ಸಿ.ಶಿಖಾ, ಮೇಯರ್ ರಾಜೇಶ್ವರಿ, ಪ್ರಾದೇಶಿಕ ಆಯುಕ್ತೆ ರಷ್ಮಿ, ಶಾಸಕರಾದ ಎಂ.ಕೆ.ಸೋಮಶೇಖರ್, ತನ್ವೀರ್ ಸೇಠ್, ಪೊಲೀಸ್ ಆಯುಕ್ತ ಡಾ.ಸಲೀಂ ಮತ್ತಿತರರಿದ್ದರು.

Dasara22

ಅರಮನೆ ಮುಂಭಾಗ 15ಅಡಿ ಎತ್ತರದಲ್ಲಿ ನಿರ್ಮಿ ಸಲಾಗಿದ್ದ ವಿಶೇಷ ವೇದಿಕೆಗೆ ಮುಖ್ಯ ಅತಿಥಿಗಳು ಆಗಮಿಸುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಳಗಿತು. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆ, ಅಂಬಾರಿಯೊಳಗೆ ಪ್ರತಿಷ್ಠಾಪಿಸಲಾಗಿದ್ದ ನಾಡದೇವಿಯ ಮೂರ್ತಿಗೆ ಪುಷ್ಪಾರ್ಚನೆ ನಡೆಯುತಿದ್ದಂತೆಯೇ 21 ಕುಶಾಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸ ಲಾಯಿತು. ಅಂಬಾರಿ ಹೊತ್ತ ಅರ್ಜುನನಿಗೆ ಆನೆಗಳಾದ ಮೇರಿ, ವರಲಕ್ಷಿ್ಮೀ ಸಾಥ್ ನೀಡಿದವು.

ಈ ನಡುವೆ, ವಿವಿಧ ರಾಜ್ಯಗಳ ಜಾನಪದ ಕಲಾ ಮೇಳಗಳು ಮೊದಲುಗೊಂಡು ಮೆರವಣಿಗೆ ಆರಂ ಭಗೊಂಡಿತು. ಅಸ್ಸಾಂ, ಬಂಗಾಳ, ಕೇರಳಾ ರಾಜ್ಯದ ಜನಪದ ಕಲಾ ಮೇಳೆದ ಹಿಂದೆಯೇ ಸ್ತಬ್ಧಚಿತ್ರಗಳು ಸೇರ್ಪಡೆಗೊಂಡಿತು. ರಾಜ್ಯದ 30ಜಿಲ್ಲೆ, 13 ಇಲಾಖೆ, ದಸರಾ ಸಮಿತಿಯ 2 ಸ್ತಬ್ಧಚಿತ್ರ ಸೇರಿದಂತೆ 4 ಸ್ತಬ್ಧಚಿತ್ರ, ಸಾರೋಟ್ ಸಂಗೀತ ಗಾಡಿ ಒಂದರ ಹಿಂದೆ ಸಾಗಿದವು. ಅರಮನೆ ಬಲರಾಮ ದ್ವಾರದ ಮೂಲಕ ನಗರದ ರಾಜ ಬೀದಿ ಪ್ರವೇಶಿಸಿದ ಮೆರವಣಿಗೆ ಚಾಮರಾಜ ವೃತ್ತ ಬಳಸಿ, ಕೆ.ಆರ್.ವೃತ್ತ ಸುತ್ತಿ, ಸಯ್ಯಿಜಿರಾವ್ ರಸ್ತೆಯ ಮೂಲಕ ಕೆ.ಆರ್.ಆಸ್ಪತ್ರೆ ವೃತ್ತದಿಂದ 4.7ಕಿ.ಮೀ ದೂರವನ್ನು ಕ್ರಮಿಸಿ ಬನ್ನಿಮಂಟಪದಲ್ಲಿ ಉತ್ಸವ ಅಂತ್ಯಗೊಂಡಿತು.

ವ್ಯಾಪಕ ಬಂದೋಬಸ್ತ್
ಈ ಬಾರಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಒಂದಿಷ್ಟು ಶಿಸ್ತು ಕಂಡುಬಂದಿತು. ಕೇವಲ ಪಾಸ್ ಇದ್ದವರಿಗೆ ಮಾತ್ರ ಅರಮನೆ ಒಳಗೆ ಪ್ರವೇಶವಿತ್ತು. ಹೆಚ್ಚುವರಿ ಪಾಸ್‌ಗಳೂ ಸಹ ಇರಲಿಲ್ಲ. ಇದರಿಂದ ಅರಮನೆ ಆವರಣದಲ್ಲಿ ಜನಸ್ತೋಮವಿರಲಿಲ್ಲ. ಅಲ್ಲದೆ, ಮೆರವಣಿಗೆ ಸಾಗುವ ಹಾದಿಯಲ್ಲಿ ಜನಜಂಗುಳಿಗೆ ಅವಕಾಶ ನೀಡಿರಲಿಲ್ಲ. ದಸರಾ ಭದ್ರತೆಗೆ 7,500 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಆಯುಕ್ತ ಡಾ.ಸಲೀಂ ನೇತೃತ್ವದಲ್ಲಿ ಡಿಸಿಪಿಗಳು, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು, ನಗರದ ಶಸಸ್ತ್ರ ಮೀಸಲು ಪಡೆ ಹೊರ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳು, ಹೋಂ ಗಾರ್ಡ್ ಕರ್ತವ್ಯ ನಿರ್ವಹಿಸಿದರು. ಅರಮನೆ ಆವರಣದಲ್ಲಿ ಮೆರವಣಿಗೆ ಸಾಗುವ ಹಾದಿಯಲ್ಲಿ 10 ಮೀಟರ್‌ಗೆ ಒಬ್ಬರಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಿಂದ ಜಾನಪದ ಕಲಾ ಮೇಳ, ಸ್ತಬ್ಧಚಿತ್ರಗಳು ಯಾವುದೇ ಅಡೆತಡೆ ಇಲ್ಲದೆ ಸಾಗಿದವು. ಆದರೆ, ಚಿನ್ನದ ಅಂಬಾರಿ ಹೊತ್ತ ಅರ್ಜುನನ ಆಗಮನವಾದಾಗ ರಾಜಕೀಯ ಪುಡಾರಿಗಳು ಆನೆಯ ಸುತ್ತ ನೆರೆದು ನೋಡುಗರಿಗೆ ಕಿರಿಕಿರಿ ಉಂಟು ಮಾಡಿದ ಘಟನೆಯೂ ನಡೆಯಿತು.

ಸಮಾನತೆಯ ಸಮಾಜ ನಿರ್ಮಾಣವಾಗಲಿ: ಸಿಎಂ

ಮೈಸೂರು, ಅ.4: ಸಮಾಜದಲ್ಲಿ ಶಾಂತಿ, ಸಾಮ ರಸ್ಯ, ಸಮಾನತೆ ಸ್ಥಾಪಿತವಾಗಲಿ ಎಂದು ದಸರಾ ವಿಜಯದಶಮಿ ಮೆರವಣಿಗೆಯನ್ನು ಉದ್ಘಾಟಿಸಿ ಸಂದೇಶ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರೂ ಒಳಗೊಂಡ ಸಮಾಜತೆಯ ಸಮಾಜ ನಿರ್ಮಾಣವಾಗಬೇಕೆಂದು ಕರೆ ನೀಡಿದ್ದಾರೆ.

‘ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷಣೆ’ ಎಂಬ ಮೂಲ ಸಂದೇಶ ಸಾರುವ ದಸರೆ ಸಮಾಜದ ಎಲ್ಲಾ ಕೆಡುಕನ್ನು ತೊಡೆದು ಹಾಕಿ ಶಾಂತಿ, ನೆಮ್ಮದಿ, ಸಾಮರಸ್ಯ ತರಲಿ. ಜನತೆಗೆ ಸಂತೋಷ, ಸಮೃದ್ಧಿ ತರಲಿ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ವಾಸಿಸುವಂತಾಗಲಿ ಎಂದು ಹಾರೈಸಿದರು. ಕಳೆದ 9 ದಿನಗಳ ನವರಾತ್ರಿ ಆಚರಣೆ ಯಶಸ್ವಿಯಾಗಿದೆ. ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿದೆ. ಯುವ ದಸರಾ, ಮಹಿಳಾ ದಸರಾ, ಗ್ರಾಮೀಣ ದಸರಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಹರ್ಷಪಟ್ಟಿದ್ದಾರೆ. ಈಗ ವಿಜಯದಶಮಿ ಮೆರವಣಿಗೆಯೂ ಯಶಸ್ವಿ ಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಜನವೋ ಜನ…
ದಸರೆ ಅಂದರೆ ಹಾಗೆ. ಜನವೋ ಜನ. ಜನಪ್ರಿ ಯತೆಗೆ ಸಾಕ್ಷಿ. ವಿಜಯದಶಮಿಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ವಿದೇಶಗಳಿಂದ ಜನ ಸಾಗರವೇ ಹರಿದುಬಂದಿತು. ಸುಮಾರು 3ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಂಬೂಸವಾರಿ ಮೆರವಣಿಗೆಯಲ್ಲಿ ವೀಕ್ಷಿಸಿದರು. ಅರಮನೆಯಲ್ಲಿ ಆವರಣ ತುಂಬಿ ತುಳುಕುತ್ತಿತ್ತು. ವಿವಿಐಪಿ, ವಿಐಪಿ, ಆಹ್ವಾನಿತರು ವಿಶೇಷ ಪಾಸ್‌ಗಳ ಮೂಲಕ ಬೆಳಗ್ಗೆ 10ಗಂಟೆಯಿಂದಲೇ ಅರಮನೆಗೆ ಆಗಮಿಸಿ ತಮ್ಮ ಖುರ್ಚಿಗಳನ್ನು ಖಾತ್ರಿ ಪಡಿಸಿಕೊಂಡರು. ಚಾಮರಾಜವೃತ್ತ, ಟೌನ್‌ಹಾಲ್, ಕರ್ಜನ್ ಪಾರ್ಕ್, ಕೆ.ಆರ್.ವೃತ್ತ, ಸಯ್ಯಿಜಿರಾವ್ ರಸ್ತೆ, ಬನ್ನಿಮಂಟಪ ರಸ್ತೆಯ ಇಕ್ಕೆಲೆಗಳಲ್ಲಿ ಜನರು ನೆರೆದಿ ದ್ದರು. ಎತ್ತರದ ಕಟ್ಟಡ, ಮರ, ಜಾಹೀರಾತು ಫಲಕಗಳನ್ನು ಏರಿ ಕುಳಿತ ಜನರು ಬಿಸಿಲನ್ನೂ ಲೆಕ್ಕಿಸದೆ ಜಂಬೂಸವಾರಿ ವೀಕ್ಷಿಸಿದರು. ಬೆಳಗ್ಗಿ ನಿಂದಲೇ ಜನರು ಆಗಮಿಸಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಜಮಾಯಿಸಿದ್ದರಿಂದ ನಗರದ ಹೃದಯ ಭಾಗದ ರಸ್ತೆ ಸಂಚಾರ ಸ್ತಬ್ಧಗೊಂಡಿತ್ತು.

Write A Comment