ಕರ್ನಾಟಕ

ಸಿಸಿಬಿ ಪೊಲೀಸರ ಕಾರ್ಯಾಚರಣೆ 32 ಕೋಟಿ ರೂ.ವೌಲ್ಯದ ಚೋಳರ ಕಾಲದ ವಿಗ್ರಹಗಳ ವಶ

Pinterest LinkedIn Tumblr

pvec5octcrime idol

ಬೆಂಗಳೂರು, ಅ.4: ಚೋಳರ ಕಾಲದ ವಿಗ್ರಹಗಳನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಮೂವರು ದುಷ್ಕರ್ಮಿ ಗಳನ್ನು ಬಂಧಿಸಿ 32 ಕೋಟಿ ರೂ. ವೌಲ್ಯದ ವಿಗ್ರಹಗಳನ್ನು ವಶಪಡಿಸಿ ಕೊಂಡಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳನ್ನು ಬೆಳಗಾವಿ ಮೂಲದ ಸುಧೀರ್, ಪುಂಡಲೀಕ್ ಮತ್ತು ಮಹಾರಾಷ್ಟ್ರದ ಚಂದ್ರಾಪುರದ ರವಿಶರ್ಮ ಎಂದು ಗುರುತಿಸಲಾಗಿದೆ.

ಚೋಳರ ಕಾಲದ ವಿಗ್ರಹಗಳನ್ನು ಎಲ್ಲಿಂದಲೋ ಕದ್ದು, ಬೆಂಗಳೂರಿನ ಧನ್ವಂ ತರಿ ಆಯುರ್ವೇದ ಆಸ್ಪತ್ರೆ ಎದುರು ಕಾರಿನಲ್ಲಿಟ್ಟುಕೊಂಡು ಮಾರಲು ಈ ಆರೋಪಿಗಳು ಯತ್ನಿಸುತ್ತಿದ್ದರು. ಸಿಸಿಬಿ ತಂಡ ಗ್ರಾಹಕರಂತೆ ತೆರಳಿ ವಿಗ್ರಹಗಳ ಖರೀದಿ ನೆಪದಲ್ಲಿ ಆರೋಪಿಗಳ ಚಲನವಲನ ಗಮನಿಸಿ ತಕ್ಷಣ ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ವಿಗ್ರಹಗಳು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೂರು ವಿಗ್ರಹಗಳ ವೌಲ್ಯ ಒಟ್ಟು 32 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ವಿಗ್ರಹಗಳನ್ನು ಕಳ್ಳತನ ಮಾಡಿ ದೇಶದ ವಿವಿಧ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರಲ್ಲದೆ ವಿದೇಶಗಳಲ್ಲೂ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಈ ಮೊಕದ್ದಮೆಯನ್ನು ದಾಖಲಿಸಿ ಕೊಂಡಿರುವ ಉಪ್ಪಾರಪೇಟೆ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Write A Comment