
ಇಂಚೋನ್, ಸೆ.25: ಇಲ್ಲಿ ನಡೆಯುತ್ತಿರುವ ಹದಿನೇಳನೆಯ ಏಷ್ಯನ್ ಗೇಮ್ಸ್‌ನ ಆರನೆ ದಿನ ರೋವಿಂಗ್‌ನಲ್ಲಿ ಎರಡು ಮತ್ತು ಶೂಟಿಂಗ್‌ನಲ್ಲಿ 1 ಕಂಚು ದೊರೆತಿದೆ. ಇದರೊಂದಿಗೆ ಭಾರತ ಪಡೆದಿರುವ ಪದಕಗಳ ಸಂಖ್ಯೆಯನ್ನು 15ಕ್ಕೆ ಏರಿಸಿದೆ.
ರೋವಿಂಗ್‌ನ ಪುರುಷರ ಸಿಂಗಲ್ಸ್‌ನ ಸ್ಕಲ್ಸ್‌ನಲ್ಲಿ ಸ್ವರಣ್ ಸಿಂಗ್ ಮತ್ತು ರೋವಿಂಗ್‌ನ ಪುರುಷರ ತಂಡ ಕಂಚು ಪಡೆಯಿತು. ಶೂಟಿಂಗ್‌ನ ಮಹಿಳೆಯರ ಡಬಲ್ ಟ್ರಾಪ್ ಇವೆಂಟ್‌ನಲ್ಲಿ ಶಗುನ್ ಚೌಧರಿ, ಶ್ರೇಯಸಿ ಸಿಂಗ್ ಮತ್ತು ವರ್ಷಾ ವರ್ಮನ್ ಕಂಚು ಜಯಿಸಿದರು.
ಬುಧವಾರ ರೋವಿಂಗ್‌ನ ಲೈಟ್‌ವೇಟ್ ಸಿಂಗಲ್ ಸ್ಕಲ್ಸ್‌ನ 200 ಮೀಟರ್ ರೇಸ್‌ನಲ್ಲಿ 22ರ ಹರೆಯದ ರೋವರ್ ದುಶ್ಯಿಂತ್ ದುಶ್ಯಂತ್ 7 ನಿಮಿಷ ಮತ್ತು 26.57 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೆ ಸ್ಥಾನದೊಂದಿಗೆ ಕಂಚು ಪಡೆದ್ದರು. ಇಂದು ರೋವರ್‌ಗಳು ಮತ್ತೆ ಎರಡು ಪದಕಗಳನ್ನು ಜಮೆ ಮಾಡಿದರು.
ಚುಂಗ್ಜು ತಾಂಗಯಮ್ ಸರೋವರದಲ್ಲಿ ನಡೆದ ರೋವಿಂಗ್‌ನ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಂಜಾಬ್ ಮೂಲದ 24ರ ಹರೆಯದ ಮಾಜಿ ವಾಲಿಬಾಲ್ ಆಟಗಾರ ಸ್ವರಣ್ ಸಿಂಗ್ 2000 ಮೀಟರ್ ದೂರವನ್ನು 7 ನಿಮಿಷ 10.65 ಸೆಕೆಂಡ್‌ಗಳಲ್ಲಿ ತಲುಪಿ ಕಂಚು ಪಡೆದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರು ಇದೇ ವಿಭಾಗದ ಸ್ಪರ್ಧೆಯಲ್ಲಿ 7 ನಿಮಿಷ 26.66 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಇದಕ್ಕಿಂತ ಉತ್ತಮ ಪ್ರದರ್ಶನ ನೀಡಿದ ಸ್ವರಣ್ ಕಂಚು ತನ್ನದಾಗಿಸಿಕೊಂಡರು.
ಸಿಖ್ ರೆಜಿಮೆಂಟ್‌ನ ನಾಯ್ಕ ಸುಬೇದಾರ್ ಸ್ವರಣ್ ಸಿಂಗ್ ಚೀನಾದಲ್ಲಿ 2013ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 7 ನಿಮಿಷ 31.88 ಸೆಕೆಂಡ್‌ಗಳಲ್ಲಿ ನಿಗದಿತ ದೂರ ತಲುಪಿ ಚಿನ್ನ ಪಡೆದಿದ್ದರು.
ರೋವಿಂಗ್‌ನ ಮೆನ್ಸ್ 8 ಫೈನಲ್ ತಂಡ ಕಂಚು ಪಡೆಯುವ ಮೂಲಕ ಭಾರತ ರೋವಿಂಗ್‌ನಲ್ಲಿ ಪದಕಗಳ ಸಂಖ್ಯೆಯನ್ನು 3ಕ್ಕೆ ಏರಿಸಿದೆ. ಕಪಿಲ್ ಶರ್ಮ, ರಂಜಿತ್ ಸಿಂಗ್, ಬಜ್‌ರಂಗ್‌ಲಾಲ್ ಠಾಕೂರ್, ಪಿಯು ರಾಬಿನ್, ಕೆ.ಸವಾನ್ ಕುಮಾರ್, ಮುಹಮ್ಮದ್ ಅಝಾದ್, ಮಣಿಂದರ್ ಸಿಂಗ್, ದೇವೆಂದರ್ ಸಿಂಗ್ ಮತ್ತು ಮುಹಮ್ಮದ್ ಅಹ್ಮದ್ ತಂಡ ಕಂಚು ಪಡೆಯಿತು.
ಶೂಟಿಂಗ್‌ನಲ್ಲಿ ಮತ್ತೆ ಪದಕ ಏಷ್ಯನ್ ಗೇಮ್ಸ್‌ನ ಐದನೆ ದಿನ ಶೂಟರ್‌ಗಳು ಪದಕದ ಬರ ಎದುರಿಸಿದ್ದರು. ಆದರೆ ಇಂದು ಶೂಟರ್‌ಗಳು ನಿರಾಸೆಗೊಳ್ಳಲಿಲ್ಲ. ಮಹಿಳೆಯರ ಡಬಲ್ ಟ್ರಾಪ್ ಇವೆಂಟ್‌ನಲ್ಲಿ ಶಗುನ್ ಚೌದರಿ, ಶ್ರೇಯಸಿ ಸಿಂಗ್ ಮತ್ತು ವರ್ಷಾ ವರ್ಮನ್ ಕಂಚು ಜಯಿಸಿದರು.
ಶಗುನ್, ಶ್ರೇಯಸಿ ಮತ್ತು ವರ್ಷಾ ಒಟ್ಟು 279 ಸ್ಕೋರ್ ದಾಖಲಿಸಿ ಮೂರನೆ ಸ್ಥಾನದೊಂದಿಗೆ ಕಂಚು ಪಡೆದರು. ಇವರನ್ನು ಹೊರತುಪಡಿಸಿದರೆ ಇತರ ಶೂಟರ್‌ಗಳಿಂದ ಗಮನಾರ್ಹ ಪ್ರದರ್ಶನ ಕಂಡು ಬರಲಿಲ್ಲ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಪಡದಿದ್ದ ಗಗನ್ ನಾರಂಗ್ 50 ಮೀಟರ್ ರೈಫಲ್ ಪ್ರೋನೆ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕಳಪೆ ಪ್ರದರ್ಶನ ನೀಡಿದರು. 52 ಶೂಟರ್‌ಗಳು ಸ್ಪರ್ಧಿಸಿದ್ದರು. ಈ ಪೈಕಿ ಗಗನ್‌ಗೆ 29ನೆ ಸ್ಥಾನ ಸಿಕ್ಕಿತು.
ಜೈದೀಪ್ ಕರ್ಮಾಕರ್ 10ನೆ, ಹರೀಮ್ ಸಿಂಗ್ 29ನೆ ಸ್ಥಾನ ಪಡೆದರು.
ವೇಟ್ ಲಿಫ್ಟರ್‌ಗಳ ಫ್ಲಾಪ್ ಶೋ: ಭಾರತದ ವೇಟ್ ಲಿಫ್ಟರ್‌ಗಳು ಇಂದು ಕಳಪೆ ಪ್ರದರ್ಶನ ನೀಡಿದರು. 85 ಕೆ.ಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ 7ನೆ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ಬಾಕ್ಸಿಂಗ್‌ನ ಲೈಟ್‌ವೆಲ್ಟರ್ (64 ಕೆ.ಜಿ )ವಿಭಾಗದ ಸ್ಪರ್ಧೆಯಲ್ಲಿ ಮನೋಜ್ ಕುಮಾರ್ ಸೋತಿದ್ದಾರೆ.