ಮನೋರಂಜನೆ

ಟೆನಿಸ್: ಭಾಂಬ್ರಿ, ಸನಂ , ರೈನಾ ಪ್ರೀ ಕ್ವಾರ್ಟರ್‌ಗೆ

Pinterest LinkedIn Tumblr

Anki

ಇಂಚೋನ್, ಸೆ.25: ಭಾರತದ ಟೆನಿಸ್ ತಾರೆಯರಾದ ಯೂಕಿ ಭಾಂಬ್ರಿ, ಸನಂ ಸಿಂಗ್ ಮತ್ತು ಅಂಕಿತಾ ರೈನಾ ಏಷ್ಯನ್ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ಸುಲಭದ ಜಯ ಗಳಿಸಿ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಭಾರತದ ಮೂವರು ಆಟಗಾರರು ನೇರ ಸೆಟ್‌ಗಳಿಂದ ಜಯ ಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದರು.

ಯೂಕಿ ಭಾಂಬ್ರಿ ಕೇವಲ 54 ನಿಮಿಷಗಳ ಹಣಾಹಣಿಯಲ್ಲಿ ಜಾಬೊರ್ ಮುಹಮ್ಮದ್ ಅಲ್ ಮುತಾವಾ ವಿರುದ್ಧ 6-1, 6-0 ಅಂತರದಲ್ಲಿ ಜಯ ಸಾಧಿಸಿದರು. ಸನಂ ಕುವೈಟ್‌ನ ಎಎಚ್ ಅಲ್ಸಾಟ್ಟಿ ಅಬ್ದುಲ್ ಹಮೀದ್ ವಿರುದ್ಧ 6-1, 6-2 ಸೆಟ್‌ಗಳಿಂದ ಗೆಲುವಿನ ನಗೆ ಬೀರಿದರು.

ಅಂಕಿತಾ ರೈನಾ ಮಂಗೋಲಿಯಾದ ಗೊಟಾವ್ ದುಲ್ಗುಂಜಾರ್ಗಲ್‌ರನ್ನು 6-0, 6-0 ನೇರ ಸೆಟ್‌ಗಳಿಂದ ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಜಯ: ಪುರುಷರ ಡಬಲ್ಸ್‌ನ ಪ್ರಥಮ ಸುತ್ತಿನ ಪಂದ್ಯದಲ್ಲಿ ಸಾಕೇತ್ ಮೇನೇನಿ ಮತ್ತು ಸನಂ ಸಿಂಗ್ ಜಯ ಗಳಿಸಿ ಎರಡನೆ ಸುತ್ತು ತಲುಪಿದ್ದಾರೆ. ಮಹಿಳೆಯರ ಡಬಲ್ಸ್‌ನ ಎರಡನೆ ಸುತ್ತಿನಲ್ಲಿ ರಿಶಿಕಾ ಸುಂಕರಾ ಮತ್ತು ಶ್ವೇತಾ ರಾಣಾ ಸೋತಿದ್ದಾರೆ. ಮಿಶ್ರ ಡಬಲ್ಸ್‌ನ ಎರಡನೆ ಸುತ್ತಿನಲ್ಲಿ ಅಂಕಿತಾ ರೈನಾ ಮತ್ತು ದಿವಿಜ್ ಶರಣ್ ಗೆಲುವು ಸಾಧಿಸಿದ್ದಾರೆ.

Write A Comment