ಕರಾವಳಿ

‘ಇನ್‌ಸ್ಪಾಯರ್ ಅವಾರ್ಡ್ -4’: ಅಶ್ವಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Pinterest LinkedIn Tumblr

ash1

ಮಂಗಳೂರು, ಸೆ.25: ಕೇಂದ್ರ ಶಿಕ್ಷಣ ಇಲಾಖೆ ನಡೆಸುವ ವಿಜ್ಞಾನ ಮಾದರಿಗಳ ‘ಇನ್‌ಸ್ಪಾಯರ್ ಅವಾರ್ಡ್-4’ರಲ್ಲಿ ಕಣಿಯೂರು ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ಅಶ್ವಿನಿ ಕೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಮಂಗಳೂರಿನ ಸರಿಪಲ್ಲ ನಿವಾಸಿಗಳಾದ ಶ್ರೀಮುರಾರಿ ಕಡಂಬಳಿತ್ತಾಯ ಹಾಗೂ ಅರುಣಾ ದಂಪತಿಯ ಪುತ್ರಿಯಾಗಿರುವ ಈಕೆ ಪ್ರಸ್ತುತ ಮಂಗಳೂರಿನ ಕುಲಶೇಖರದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ 9ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಮಂಡಿಸಿದ ‘ವಾಟರ್ ಟ್ಯಾಂಕ್‌ನ ಕೆಳಮುಖ ಚಲನೆಯ ನೀರಿನ ಪೈಪಿನಿಂದ ದೊರೆಯುವ ಚಲನಶಕ್ತಿಯಿಂದ ವಿದ್ಯುತ್ ಉತ್ಪತ್ತಿ’ ಎಂಬ ಮಾದರಿಯು ಹಾಸನದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಗೊಂಡು ಅಕ್ಟೋಬರ್ 6ರಿಂದ 8ರವರೆಗೆ ದೆಹಲಿಯಲ್ಲಿ ನಡೆೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.

Write A Comment