ಮನೋರಂಜನೆ

ಟೋಕಿಯೊ ಓಪನ್: ಸಾನಿಯಾ-ಕಾರಾ ಜೋಡಿಗೆ ಮಹಿಳಾ ಡಬಲ್ಸ್ ಪ್ರಶಸ್ತಿ

Pinterest LinkedIn Tumblr

Sania Mirza

ಟೋಕಿಯೊ, ಸೆ.20: ಪ್ರಸ್ತುತ ಋತುವಿನಲ್ಲಿ ಶ್ರೇಷ್ಠ ಫಾರ್ಮನ್ನು ಕಾಯ್ದುಕೊಂಡಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರು ಝಿಂಬಾಬ್ವೆಯ ಜೊತೆಗಾರ್ತಿ ಕಾರಾ ಬ್ಲಾಕ್ ಅವರೊಂದಿಗೆ ಇಂದು ಡಬ್ಲೂಟಿಎ ಟೋಕಿಯೊ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಂದು ಇಲ್ಲಿ 1 ಗಂಟೆ, 15 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್‌ನ ಫೈನಲ್ ಪಂದ್ಯದಲ್ಲಿ ಸಾನಿಯಾ ಹಾಗೂ ಕಾರಾ ಅವರು ಸ್ಪೇನ್‌ನ ಗಾರ್ಬೈನ್ ಮುಗುರಝ ಹಾಗೂ ಕಾರ್ಲ ಸುಯರೆಝ್ ನವಾರೊ ಅವರನ್ನು 6-2, 7-5 ಸೆಟ್‌ಗಳಿಂದ ಮಣಿಸಿದ್ದಾರೆ. ಈ ಗೆಲುವಿನೊಂದಿಗೆ ಸಾನಿಯಾ ಹಾಗೂ ಕಾರಾ 1 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಟೋಕಿಯೊ ಓಪನ್ ಪ್ರಶಸ್ತಿಯನ್ನು ತಮ್ಮಿಂದಿಗೆ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಸಾನಿಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಇಲ್ಲಿಂದ ಸೀದಾ ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸಲಿದ್ದಾರೆ. ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಅನುಪಸ್ಥಿತಿಯಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಡಿವಿಜ್ ಶರಣ್ ಅಥವಾ ಸಾಕೇತ್ ಮಿನೈನಿ ಅವರೊಂದಿಗೆ ಆಡಲಿದ್ದಾರೆ.

Write A Comment