ರಾಷ್ಟ್ರೀಯ

ನಕಲಿ ಎನ್‌ಕೌಂಟರ್ ಭೇದಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಕೈಬಿಟ್ಟ ಗುಜರಾತ್ ಸರಕಾರ; ನಕಲಿ ಎನ್‌ಕೌಂಟರ್‌ನ ಅರೋಪಿ ಪೊಲೀಸ್ ಅಧಿಕಾರಿಗಳು ಉನ್ನತ ಹುದ್ದೆಗಳಿಗೆ ನೇಮಕ!!

Pinterest LinkedIn Tumblr

Stooges-Dec16.qxp

ಅಹ್ಮದಾಬಾದ್: ಕ್ರಮವಾಗಿ ಸೊಹ್ರಾಬುದ್ದೀನ್ ಶೇಖ್ ಹಾಗೂ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಗಳ ತನಿಖೆ ನಡೆಸಿದ ಇಬ್ಬರು ಐಪಿಎಸ್ ಅಧಿಕಾರಿಗಳಾದ ರಜನೀಶ್ ರಾಯ್ ಹಾಗೂ ಸತೀಶ್ ವರ್ಮಾ ಅವರನ್ನು ಕೊನೆಗೂ ಗುಜರಾತ್ ಸರಕಾರವು ತನ್ನ ಸೇವೆಯಿಂದ ಕೈಬಿಟ್ಟಿದೆ.

ಇದಕ್ಕೆ ವ್ಯತಿರಿಕ್ತವಾಗಿ ಈ ನಕಲಿ ಎನ್‌ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿ ಸಿಬಿಐನಿಂದ ಕ್ರಿಮಿನಲ್ ಆರೋಪಗಳನ್ನು ಎದುರಿಸು ತ್ತಿರುವ ಇನ್ನಿಬ್ಬರು ಐಪಿಎಸ್ ಅಧಿಕಾರಿಗಳಾದ ಜಿ.ಎಲ್.ಸಿಂಘಾಲ್ ಹಾಗೂ ಅಭಯ್ ಚೂಡಾಸಮಾ, ಜಾಮೀನಿನ ಮೇಲೆ ಬಿಡುಗಡೆ ಗೊಂಡ ಬಳಿಕ ಗುಜರಾತ್ ಸರಕಾರವು ಅವರನ್ನು ಅದೇ ಹುದ್ದೆಗಳಲ್ಲಿ ಮರುಸ್ಥಾಪಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತ ಗಳಿಸಿ, ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕವೇ ಈ ವಿದ್ಯಮಾನಗಳು ಸಂಭವಿಸಿವೆ.

2014ರ ಆಗಸ್ಟ್ 14ರಂದು ರಾತ್ರಿ ಗುಜರಾತ್ ಸರಕಾರ ಅಧಿಸೂಚನೆಯೊಂದನ್ನು ಪ್ರಕಟಿಸಿ, ಜಿ.ಎಲ್.ಸಿಂಘಾಲ್ ಅವರನ್ನು ರಾಜ್ಯ ಮೀಸಲು ಪೊಲೀಸ್ ಪಡೆಯ ಗ್ರೂಪ್ ಕಮಾಂಡೆಂಟ್ ಆಗಿಹಾಗೂ ಅಭಯ್ ಚೂಡಾಸ್ಮ ಅವರನ್ನು ಡಿಜಿಪಿಕಾರ್ಯಾಲ ಯದ ಪೊಲೀಸ್ ಅಧೀಕ್ಷಕರನ್ನಾಗಿ ನೇಮಿಸಿತು.

ಇದರ ಬೆನ್ನಲ್ಲೇ 2014ರ ಆಗಸ್ಟ್ 29ರಂದು ಕೇಂದ್ರ ಸರಕಾರದ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯು ಆದೇಶವೊಂದನ್ನು ಜಾರಿಗೊಳಿಸಿ, ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ಮೋದಿ ನೇತೃತ್ವದ ಗುಜರಾತ್ ಸರಕಾರವನ್ನು ಎದುರು ಹಾಕಿಕೊಂಡಿದ್ದ ಐಪಿಎಸ್ ಅಧಿಕಾರಿಗಳಾದ ರಜನೀಶ್ ರಾ ಅವರನ್ನು ಜಾರ್ಖಂಡ್‌ನ ಜಾದೂಗುಡಾದಲ್ಲಿರುವ ಭಾರತೀಯ ಯುರೇನಿ ಯಂ ನಿಗಮ (ಯುಸಿಐಎಲ್)ದ ಮುಖ್ಯ ಜಾಗೃತದಳದ ಅಧಿಕಾ ರಿಯಾಗಿ ಮೂರು ವರ್ಷಗಳ ಅವಧಿಗೆ ನೇಮಿಸಿತು. ಗುಜರಾತ್‌ನ ಇನ್ನೋರ್ವ ಐಪಿಎಸ್ ಅಧಿಕಾರಿ ಸತೀಶ್ ಶರ್ಮಾ ಅವರನ್ನು ಈಶಾನ್ಯ ಭಾರತ ವಿದ್ಯುತ್ ನಿಗಮ ಲಿ. ಸಂಸ್ಥೆಯ ಜಾಗೃತದಳದ ಮುಖ್ಯ ಅಧಿಕಾರಿಯಾಗಿ ನೇಮಿಸಿತು.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯ ಸಂದರ್ಭದಲ್ಲಿ ರಜನೀಶ್ ರಾಯ್ ಅವರು, ಸಿಐಡಿ (ಕ್ರೈಂ ಬ್ರಾಂಚ್) ವಿಭಾಗದ ಮೇಲ್ವಿಚಾರಣಾಧಿಕಾರಿಯಾ ಗಿದ್ದರು. ರಜನೀಶ್ ಅವರು ಈ ಪ್ರಕರಣದ ಆರೋಪಿಗಳಾದ ಐಪಿಎಸ್ ಅಧಿಕಾರಿಗಳಾದ ಡಿ.ಜಿ.ವಂಝಾರ, ರಾಜ್‌ಕುಮಾರ್ ಪಾಂಡ್ಯನ್ ಹಾಗೂ ದಿನೇಶ್ ಎಂ.ಎನ್. ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವಿಚಾರಣೆಯಿಂದಾಗಿ ಇಂತಹದೇ ಇನ್ನು ಕೆಲವು ನಕಲಿ ಎನ್‌ಕೌಂಟರ್‌ಗಳ ನೈಜ ಸಂಗತಿಯು ಬಯಲಿಗೆ ಬಂದಿತು.

ಸತೀಶ್ ವರ್ಮಾ ಅವರು ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ರಹಸ್ಯವನ್ನು ಭೇದಿಸಿದ್ದರು ಹಾಗೂ ಈ ಬಗ್ಗೆ ನಡೆದ ಸಿಬಿಐ ತನಿಖೆಗೂ ನೆರವಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅವರು ಅಮಾನತು ಗೊಂಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಪಿ.ಪಾಂಡೆ, ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರ, ಜಿ.ಎಲ್.ಸಿಂಘಾಲ್ ಹಾಗೂ ಗುಪ್ತಚರದಳ (ಐಬಿ)ದ ಇತರ ನಾಲ್ವರು ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದರು. ಕಳೆದ ವರ್ಷ ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಈ ಅಧಿಕಾರಿಗಳಿಬ್ಬರೂ ಕೇಂದ್ರ ಸರಕಾರದ ಕರ್ತವ್ಯದಲ್ಲಿ ತಮ್ಮನ್ನು ನಿಯೋಜಿಸುವಂತೆ ಅವರಿಗೆ ಮನವಿ ಮಾಡಿದ್ದರು. ಆದರೆ, ಗುಜರಾತ್ ಸರಕಾರ ಇವರ ಅರ್ಜಿಗಳನ್ನು ವಿಲೇವಾರಿ ಮಾಡಿರಲಿಲ್ಲ ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಅರ್ಜಿಗಳಿಗೆ ತನ್ನ ಸಮ್ಮತಿ ನೀಡಿತು.

ಕೇಂದ್ರ ಸರಕಾರದ ಕರ್ತವ್ಯಕ್ಕೆ ಅವಕಾಶ ಕೋರಿ ತಾವು ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥಗೊಳಿಸಲು ಗುಜರಾತ್ ಸರಕಾರದ ದೀರ್ಘ ಸಮಯವನ್ನು ತೆಗೆದುಕೊಂಡಿದ್ದಕ್ಕಾಗಿ ಈ ಅಧಿಕಾರಿಗಳಿಬ್ಬರು ಇದೀಗ ದಿಲ್ಲಿಯಲ್ಲಿರುವ ಕೇಂದ್ರ ಆಡಳಿತಾತ್ಮಕ ಟ್ರಿಬ್ಯೂನಲ್ (ಸಿಎಟಿ)ನ ಮೊರೆ ಹೋಗಿದ್ದಾರೆ ಹಾಗೂ ಕೇಂದ್ರ ಸರಕಾರದ ಕರ್ತವ್ಯದಲ್ಲಿ ತಮ್ಮನ್ನು ತುಂಬಾ ತಡವಾಗಿ ನಿಯೋಜಿಸಿರುವುದನ್ನು ಅವರು ಪ್ರಶ್ನಿಸಿದ್ದರು. ಕೇಂದ್ರ ಸರಕಾರವು ಸೇಡಿನ ಭಾವನೆಯಿಂದ ತಮ್ಮನ್ನು ಇತರೆ ಹುದ್ದೆಗಳಿಗೆ ನಿಯೋಜಿ ಸಿದ್ದು, ತಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆಯೆಂದು ಅವರು ದೂರಿನಲ್ಲಿ ಆಪಾದಿಸಿದ್ದರು.

Write A Comment