ಮನೋರಂಜನೆ

ಕಿಂಗ್ಸ್ ಇಲೆವೆನ್‌ಗೆ ಜಯ: ಮ್ಯಾಕ್ಸ್‌ವೆಲ್, ಬೈಲಿ, ಪೆರೆರಾ ಸಾಹಸ

Pinterest LinkedIn Tumblr

Maxwell

ಮೊಹಾಲಿ, ಸೆ.18: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20ಯ ಎರಡನೆ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ಗಳಿಸಿದೆ.

ಗೆಲ್ಲಲು 145 ರನ್‌ಗಳ ಸವಾಲನ್ನು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 17.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 146 ರನ್ ಸೇರಿಸಿ ಮೊದಲ ಗೆಲುವು ದಾಖಲಿಸಿತು. ಆರಂಭದಲ್ಲಿ 4 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡರೂ, ಮ್ಯಾಕ್ಸ್‌ವೆಲ್ ಮತ್ತು ತಿಸ್ಸರಾ ಪೆರೆರಾ ನೆರವಿನಲ್ಲಿ ಚೇತರಿಸಿಕೊಂಡಿತು.

ಆರನೆ ವಿಕೆಟ್‌ಗೆ ನಾಯಕ ಜಾರ್ಜ್ ಬೈಲಿ ಮತ್ತು ಪೆರೆರಾ ಮುರಿಯದ ಜೊತೆಯಾಟದಲ್ಲಿ 6.5 ಓವರ್‌ಗಳಲ್ಲಿ 10.09 ಸರಾಸರಿಯಂತೆ 69 ರನ್ ಜಮೆ ಮಾಡಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಜಾರ್ಜ್ ಬೈಲಿ ಔಟಾಗದೆ 34 ರನ್(27ಎ, 5ಬೌ) ಮತ್ತು ಪೆರೆರಾ ಔಟಾಗದೆ 35ರನ್(20ಎ, 4ಬೌ, 1ಸಿ) ಸೇರಿಸಿದರು.
ಬೊಲಿಂಗರ್ ಅವರು ಮೊದಲ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್(0) ಅವರಿಗೆ ಖಾತೆ ತೆರೆಯಲು ಅವಕಾಶ ನೀಡದೆ ಪೆವಿಲಿಯನ್ ಹಾದಿ ತೋರಿಸಿದ್ದರು. ವೃದ್ಧಿಮಾನ್ ಸಹಾ(11) ಮತ್ತು ಡೇವಿಡ್ ಮಿಲ್ಲರ್(0) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಬೊಲಿಂಗರ್ 3.5ನೆ ಓವರ್‌ನಲ್ಲಿ ಅಪಾಯಕಾರಿ ದಾಂಡಿಗ ಮಿಲ್ಲರ್‌ಗೆ ಖಾತೆ ತೆರೆಯಲು ಬಿಡಲಿಲ್ಲ. ವೋರಾ (18) ಎರಡಂಕೆಯ ಕೊಡುಗೆ ನೀಡಿದರು. ಐದನೆ ವಿಕೆಟ್‌ಗೆ ಮ್ಯಾಕ್ಸ್‌ವೆಲ್ ಮತ್ತು ಜಾರ್ಜ್ ಬೈಲಿ 26 ರನ್‌ಗಳನ್ನು ಸೇರಿಸಿದರು. ಮ್ಯಾಕ್ಸ್‌ವೆಲ್ 43 ರನ್(25ಎ, 4ಬೌ, 2ಸಿ) ಗಳಿಸಿ ನಿರ್ಗಮಿಸಿದ್ದರು.

ಚಾಂಪಿಯನ್ಸ್ ಲೀಗ್ ಟ್ವೆಂಟಿ -20 ಟೂರ್ನಿಯ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 144 ರನ್ ಸಂಪಾದಿಸಿತ್ತು.ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೊಬರ್ಟ್ ಹರಿಕೇನ್ಸ್ ತಂಡ ಆರಂಭಿಕ ದಾಂಡಿಗ ಬಿಆರ್ ಡಂಕ್(26), ನಾಯಕ ಟಿಡಿ ಪೈನೆ(11), ಎಸಿ ಬಿಲ್ಝಾರ್ಡ್ (27), ಶುಐಬ್ ಮಲಿಕ್(14), ಟಿಆರ್ ಬಿರ್ಟ್ (28), ಜೆಡಬ್ಲು ವೆಲ್ಸ್ (28) ಮತ್ತು ಗುಲ್ಬೀಸ್(6) ನೆರವಿನಲ್ಲಿ ಸ್ಪರ್ಧಾತ್ಮಕ ಸವಾಲನ್ನು ಸೇರಿಸಿತ್ತು.

ಸಂಕ್ಷಿಪ್ತ ಸ್ಕೋರ್
ಹೊಬರ್ಟ್: 20 ಓವರ್‌ಗಳಲ್ಲಿ 144/4
(ಡಂಕ್ 26, ಬ್ಲಿಝಾರ್ಡ್ 27, ಬಿರ್ಟ್ 28, ವೆಲ್ಸ್ 28, ತಿಸರ ಪೆರೇರಾ 2-17).
ಕಿಂಗ್ಸ್ ಇಲೆವೆನ್ ಪಂಜಾಬ್17.4 ಓವರ್‌ಗಳಲ್ಲಿ 146/5
(ಮ್ಯಾಕ್ಸ್‌ವೆಲ್ 43, ಜಾರ್ಜ್ ಬೈಲಿ ಅಜೇಯ 34, ತಿಸಾರ ಪೆರೇರಾ ಅಜೇಯ 35, ಬೊಲ್ಲಿಂಗೆರ್ 3-30).

Write A Comment