ಅಂತರಾಷ್ಟ್ರೀಯ

ಬಾಲಕ ಹಸಿವೆಯಿಂದ ಸಾಯುವಂತೆ ಮಾಡಿದ ಮಹಿಳೆಗೆ ಮರಣ ದಂಡನೆ ಜಾರಿ

Pinterest LinkedIn Tumblr

Hang

ವಾಶಿಂಗ್ಟನ್, ಸೆ. 18: 2004ರಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬನನ್ನು ಹಸಿವೆಯಿಂದ ಸಾಯುವಂತೆ ಮಾಡಿದ ಮಹಿಳೆಯೊಬ್ಬಳಿಗೆ ಟೆಕ್ಸಾಸ್ ರಾಜ್ಯ ಕಾರಾಗೃಹದಲ್ಲಿ ಮರಣ ದಂಡನೆ ಜಾರಿಗೊಳಿಸಲಾಗಿದೆ.

38 ವರ್ಷದ ಲೀಸಾ ಆ್ಯನ್ ಕೋಲ್‌ಮನ್‌ಗೆ ಹಂಟ್ಸ್‌ವಿಲ್‌ನಲ್ಲಿರುವ ರಾಜ್ಯದ ಮರಣ ಕೋಣೆಯಲ್ಲಿ ಮಾರಕ ಚುಚ್ಚುಮದ್ದು ನೀಡಲಾಯಿತು ಎಂದು ಅಧಿಕಾರಿಗಳು ಹೇಳಿದರು. ಅಮೆರಿಕದಲ್ಲಿ ಈ ವರ್ಷ ಮರಣ ದಂಡನೆ ಜಾರಿಗೊಂಡ ಎರಡನೆ ಮಹಿಳೆ ಕೋಲ್‌ಮನ್.

2004ರ ಜುಲೈಯಲ್ಲಿ ಪೊಲೀಸರು ಕೋಲ್‌ಮನ್ ಮನೆಗೆ ದಾಳಿ ನಡೆಸಿದಾಗ ಡ್ಯಾಂವೊಂಟೇ ವಿಲಿಯಮ್ಸ್ ಎಂಬ ಬಾಲಕ ಮೃತಪಟ್ಟಿರುವುದು ಪತ್ತೆಯಾಯಿತು. ಬಾಲಕನ ಕಿವಿ ಮುರುಟಿಹೋಗಿತ್ತು, ಕೈಗಳು ಬಾತುಕೊಂಡಿದ್ದವು. ಮಣಿಕಟ್ಟು ಮತ್ತು ಹಿಮ್ಮಡಿಗಳಲ್ಲಿ ತಂತಿಗಳಿಂದ ಕಟ್ಟಿ ಹಾಕಿದ ಗುರುತುಗಳಿದ್ದವು.ಕೋಲ್‌ಮನ್‌ಳ ದೀರ್ಘ ಕಾಲದ ಗೆಳತಿ ಮಾರ್ಸೆಲಾ ವಿಲಿಯಮ್ಸ್‌ರ ಮಗ ಡ್ಯಾವೊಂಟೇ ವಿಲಿಯಮ್ಸ್ ಅಪೌಷ್ಟಿಕತೆ ಮತ್ತು ನ್ಯುಮೋನಿಯದಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯಿತು. ಪ್ರಕರಣದಲ್ಲಿ ಮಾರ್ಸೆಲಾ ವಿಲಿಯಮ್ಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Write A Comment