ರಾಷ್ಟ್ರೀಯ

ಸ್ವಪ್ರತಿಷ್ಠೆ ಬಿಟ್ಟು ಕೊಟ್ಟು ಮೈತ್ರಿ ಸಾಧ್ಯವಿಲ್ಲ: ಶಾ

Pinterest LinkedIn Tumblr

amit-shah---uddhav

ಕೋಲ್ಹಾಪುರ, ಸೆ.18: ಬಿಜೆಪಿ ಮತ್ತು ಶಿವಸೇನೆ ನಡುವಣ ಸೀಟು ಹಂಚಿಕೆಯ ಬಿಕ್ಕಟ್ಟಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕೆಂದು ಶಿವಸೇನೆಗೆ ಕರೆ ನೀಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸ್ವಪ್ರತಿಷ್ಠೆಯ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದಿದ್ದಾರೆ.

‘ಮಹಾಯುತಿ’ (ಮಹಾಮೈತ್ರಿ) ಪ್ರಬಲವಾಗಿ ನಿಲ್ಲಬೇಕು. ಮುಂಬರುವ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವನ್ನು ಪದಚ್ಯುತಗೊಳಿಸಬೇಕು ಎಂದು ಅವರು ಹೇಳಿದ್ದಾರೆ.

‘ಸ್ನೇಹಿತರೇ, ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆಯಾಗಲಿದೆ’ ಎಂದು ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಮೈತ್ರಿ ವಿಚಾರವನ್ನು ಆದಷ್ಟು ಶೀಘ್ರದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ರಾಜ್ಯದ ನಾಯಕರಿಗೆ ಹೇಳಿದ್ದೇನೆ. ತಮ್ಮ ಕಡೆಯಿಂದ ಪ್ರಯತ್ನಗಳು ಮುಂದುವರಿದಿವೆ. ಆದರೆ ಶಿವಸೇನೆಯಿಂದ ಪ್ರತಿಕ್ರಿಯೆ ಲಭಿಸುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ.

ಈ ಸಂದರ್ಭದಲ್ಲಿ ನಾನು ಎರಡೂ ಪಕ್ಷಗಳಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಬಿಜೆಪಿ ಎರಡು ಹೆಜ್ಜೆ ಮುಂದಿಟ್ಟಿದೆ. ಇತರರೂ (ಶಿವಸೇನೆ) ಎರಡು ಹೆಜ್ಜೆ ಮುಂದಿಟ್ಟು ಮೈತ್ರಿ ಪ್ರಶ್ನೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಆದರೆ ಬಿಜೆಪಿ ಕಾರ್ಯಕರ್ತರು ಸ್ವಪ್ರತಿಷ್ಠೆಯೊಂದಿಗೆ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ. ಸ್ವಪ್ರತಿಷ್ಠೆ ಬಿಟ್ಟು ನಿರ್ಣಯ ಸಾಧ್ಯವಿಲ್ಲ ಎಂದು ಅವರು ನುಡಿದರು.

Write A Comment