ಕರಾವಳಿ

ವಿಜ್ಞಾನ ಮಾದರಿಗಳ ಇನ್‌ಸ್ಪಾಯರ್ ಅವಾರ್ಡ್ ಗೆ ಕಣಿಯೂರು ವಿದ್ಯಾರ್ಥಿನಿ ಅಶ್ವಿನಿ.ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

Pinterest LinkedIn Tumblr

ಬಂಟ್ವಾಳ: ಕೇಂದ್ರ ಶಿಕ್ಷಣ ಇಲಾಖೆ ನಡೆಸುವ ವಿಜ್ಞಾನ ಮಾದರಿಗಳ ಇನ್‌ಸ್ಪಾಯರ್ ಅವಾರ್ಡ್ 4 ರಲ್ಲಿ ಬಂಟ್ವಾಳ ತಾಲೂಕಿನ ಕಣಿಯೂರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಿಂದ ಪ್ರತಿನಿಧಿಸಿದ ವಿದ್ಯಾರ್ಥಿನಿ ಅಶ್ವಿನಿ.ಕೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಬಂಟ್ವಾಳ ಕ್ಷೇತ್ರ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮಂಗಳೂರು ಸರಿಪಳ್ಳ ನಿವಾಸಿ ಮುರಾರಿ ಕಡಂಬಳಿತ್ತಾಯ,ಅರುಣಾ ದಂಪತಿ ಪುತ್ರಿಯಾಗಿರುವ ಈಕೆ ಮಂಗಳೂರಿನ ಕುಲಶೇಖರದ ಸೇಕ್ರೆಡ್ ಹಾರ್ಟ್ ಫ್ರೌಡ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಮಂಡಿಸಿದ ‘ವಾಟರ್‌ಟ್ಯಾಂಕ್‌ನ ಕೆಳಮುಖ ಚಲನೆಯ ನೀರಿನ ಪೈಪಿನಿಂದ ದೊರೆಯುವ ಚಲನ ಶಕ್ತಿಯಿಂದ ವಿದ್ಯುತ್ ಉತ್ಪತ್ತಿ’ ಎಂಬ ಮಾದರಿಯು ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದು, ಅಕ್ಟೋಬರ್ 6 ರಿಂದ 8 ರ ವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

Write A Comment