ಮನೋರಂಜನೆ

ನೈಟ್ ರೈಡರ್ಸ್‌ ಗೆಲುವಿನ ರೆಡ್: ಚಾಂಪಿಯನ್ಸ್ ಲೀಗ್: ರಸ್ಸೆಲ್-ಡೋಶಾಟ್ ಸ್ಫೋಟಕ ಬ್ಯಾಟಿಂಗ್

Pinterest LinkedIn Tumblr

Andre-Russel

ಹೈದರಾಬಾದ್, ಸೆ.17: ಚಾಂಪಿಯನ್ಸ್ ಲೀಗ್ ಟ್ವೆಂಟಿ -20 ಟೂರ್ನಿಯ ಮೊದಲ ಪಂದ್ಯದಲ್ಲಿ ಇಂದು ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3ವಿಕೆಟ್‌ಗಳ ಗೆಲುವು ಸಾಧಿಸಿದೆ.

ಗೆಲುವಿಗೆ 158 ರನ್ ಮಾಡಬೇಕಿದ್ದ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿ ಗೆಲುವಿನ ದಡ ತಲುಪಿತು. ಆಂಡ್ರೆ ರಸ್ಸೆಲ್ 58 ರನ್(25ಎ, 4ಬೌ, 5ಸಿ) ಮತ್ತು ರ್ಯಾನ್ ಟನ್ ಡೊಶಾಟ್ ಔಟಾಗದೆ 51 ರನ್(41ಎ, 3ಬೌ, 2ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಶೀಶ್ ನೆಹ್ರಾ (4-21) ದಾಳಿಗೆ ಸಿಲುಕಿ 51ಕ್ಕೆ 5 ವಿಕೆ ಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೋಲ್ಕತಾ ತಂಡ ವನ್ನು ರಸ್ಸೆಲ್ ಮತ್ತು ಡೊಶಾಟ್ 6ನೆ ವಿಕೆಟ್‌ಗೆ 7.3 ಓವರ್‌ಗಳಲ್ಲಿ 10.66 ಸರಾಸರಿಯಂತೆ 80 ರನ್ ಸೇರಿಸಿ ಚೆನ್ನೈ ತಂಡದ ಗೆಲುವಿನ ಪ್ರಯತ್ನವನ್ನು ವಿಫಲಗೊಳಿಸಿದರು.

ಧೋನಿ -ಬ್ರಾವೊ ನೆರವು: ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಐದನೆ ವಿಕೆಟ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಡ್ವೇಯ್ನ್ ಬ್ರಾವೊ ಮುರಿಯದ ಜೊತೆ ಯಾಟದಲ್ಲಿ 71ರನ್‌ಗಳ ಕಾಣಿಕೆ ನೀಡಿ ತಂಡದ ಸ್ಕೋರ್‌ನ್ನು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 157ಕ್ಕೆ ತಲುಪಿಸಲು ನೆರವಾದರು.

ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಆರಂಭಿಕ ದಾಂಡಿಗರಾದ ಡ್ವೇಯ್ನಾ ಸ್ಮಿತ್ (20) ಮತ್ತು ಬ್ರೆಂಡನ್ ಮೆಕಲಂ (22), ಸುರೇಶ್ ರೈನಾ (28), ಎಫ್‌ಡು ಪ್ಲೆಸಿಸ್ (14) ಎರಡಂಕೆಯ ಸ್ಕೋರ್ ದಾಖಲಿಸಿ ತಂಡದ ಸ್ಕೋರನ್ನು 12.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 86ಕ್ಕೆ ಏರಿಸಿದ್ದರು.

ಬಳಿಕ ಬ್ಯಾಟಿಂಗನ್ನು ಮುಂದುವರಿಸಿದ ನಾಯಕ ಧೋನಿ ಮತ್ತು ಬ್ರಾವೋ 7.3 ಓವರ್‌ಗಳಲ್ಲಿ 9.46 ಸರಾಸರಿಯಂತೆ 71 ರನ್ ಜಮೆ ಮಾಡಿದರು.

ಪಿಯೂಷ್ ಚಾವ್ಲಾ (2-26), ಸುನಿಲ್ ನರೇನ್ (1-9) ಮತ್ತು ಯೂಸುಫ್ ಪಠಾಣ್(1-16) ಚೆನ್ನೈ ತಂಡ ದೊಡ್ಡ ಮೊತ್ತದ ಸ್ಕೋರ್ ದಾಖಲಿಸದಂತೆ ತಡೆದರು. ನರೇನ್ 4 ಓವರ್‌ಗಳಲ್ಲಿ ಕೇವಲ 9 ರನ್ ಬಿಟ್ಟು ಕೊಟ್ಟಿದ್ದರು. ತಲಾ 4 ಓವರ್‌ಗಳನ್ನು ಎಸೆದ ಪ್ಯಾಟ್ ಕುಮಿನ್ಸ್(0-49) ಮತ್ತು ಉಮೇಶ್ ಯಾದವ್(0-43) , ಒಂದು ಓವರ್ ಎಸೆದ ರಸ್ಸೆಲ್(0-12) ಕೈ ಸುಟ್ಟುಕೊಂಡರು.

Write A Comment