ಕರ್ನಾಟಕ

ಮಂಡ್ಯ: ಬಾಲಕನಿಂದ ಬಾಲಕಿಯ ಅತ್ಯಾಚಾರ; ಬಂಧನ

Pinterest LinkedIn Tumblr

rape3232

ಮಂಡ್ಯ, ಸೆ.17: ಎಂಟು ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಬಾಲಕನೋರ್ವ ಅತ್ಯಾಚಾರ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ 10ನೆ ತರಗತಿ ಓದುತ್ತಿರುವ ಜಗದೀಶ್ (15) ಎಂಬ ಬಾಲಕನೇ ಈ ಕೃತ್ಯವೆಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಸಂಜೆ ಎಂದಿನಂತೆ ಬಾಲಕಿ ಮನೆಗೆ ಟಿವಿ ನೋಡಲು ಹೋಗಿದ್ದಾಗ ಜಗಲಿಯ ಮೇಲೆ ಕುಳಿತಿದ್ದ ಬಾಲಕಿಯನ್ನು ಕೊಠಡಿಗೆ ಎಳೆದೊಯ್ದು ಈತ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂದು ಎನ್ನಲಾಗಿದೆ.

ಬಾಲಕಿಯ ತಂದೆ ಈ ಸಂಬಂಧ ದೂರು ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ಬಾಲಕನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಬಾಲಕನನ್ನು ಬಂಧಿಸಿದ್ದೇವೆ. ತನಿಖೆ ನಡೆಸುತ್ತಿದ್ದೇವೆ ಎಂದು ಅರಕೆರೆ ಪಿಎಸ್ಸೈ ವನರಾಜು ತಿಳಿಸಿದ್ದಾರೆ.

Write A Comment