ಅಂತರಾಷ್ಟ್ರೀಯ

ಸಂಸದನನ್ನು ಎತ್ತಿ ಕಸದ ತೊಟ್ಟಿಗೆ ಹಾಕಿದರು!

Pinterest LinkedIn Tumblr

bin

ಕೀವ್, ಸೆ. 17: ಕಸ ಹಾಕುವ ತೊಟ್ಟಿಯಲ್ಲಿ ಸಂಸದನನ್ನೇ ಹಾಕಿದರೆ ಹೇಗೆ? ಯುಕ್ರೇನ್‌ನಲ್ಲಿ ಅಂಥದೇ ಘಟನೆ ನಡೆದಿದೆ.

ಯುಕ್ರೇನ್ ಸಂಸತ್ತು ಅಂಗೀಕರಿಸಿದ ಮಸೂದೆಯೊಂದರ ಬೆಂಬಲಕ್ಕಾಗಿ ಬಂದಿದ್ದ ಸಂಘಟನೆಯೊಂದರ ಕಾರ್ಯಕರ್ತರು ಸಂಸದ ವಿಟಾಲಿಯ್ ಝುರವ್‌ಸ್ಕಿಯ್‌ರನ್ನು ಅನಾಮತ್ತಾಗಿ ಎತ್ತಿ ಕಸದ ತೊಟ್ಟಿಗೆ ಬಿಸಾಡಿದ್ದಾರೆ. ಹಾಗೂ ಬಳಿಕ ತೊಟ್ಟಿಗೆ ಕಸ ಮತ್ತು ಟಯರ್‌ಗಳನ್ನು ಸುರಿದಿದ್ದಾರೆ.

ವಿಪರ್ಯಾಸವೆಂದರೆ, ಕಾರ್ಯಕರ್ತರು ಯಾವ ಮಸೂದೆಯನ್ನು ಬೆಂಬಲಿಸಲು ಬಂದಿದ್ದರೋ ಆ ಮಸೂದೆಯ ಕರಡು ನಿರ್ಮಾಣದಲ್ಲಿ ಇದೇ ಸಂಸದ ತೊಡಗಿಕೊಂಡಿದ್ದರು. ಮುಂದಿನ ಚುನಾವಣೆಯಲ್ಲಿ ತನ್ನ ವಿರುದ್ಧ ಸ್ಪರ್ಧಿಸ ಬಯಸಿರುವ ಎದುರಾಳಿಗಳ ಕೃತ್ಯ ಇದಾಗಿದೆ ಎಂದು ಸಂಸದ ಹೇಳಿದ್ದಾರೆ.

‘‘ಝಿಟೊಮಿರ್ ವಲಯದಲ್ಲಿ ನನ್ನ ವಿರುದ್ಧ ಸ್ಪರ್ಧಿಸಲು ಬಯಸಿರುವ ಎದುರಾಳಿಗಳು ನಡೆಸಿರುವ ಕೃತ್ಯ ಇದಾಗಿದೆ. ಅವರು ಈ ರೀತಿಯಲ್ಲಿ ನನ್ನನ್ನು ನಡೆಸಿಕೊಳ್ಳುತ್ತಾರೆಂದು ಭಾವಿಸಿರಲಿಲ್ಲ’’ ಎಂದು ಝುರವ್‌ಸ್ಕಿಯ್ ಹೇಳಿದ್ದಾರೆ.

Write A Comment