ಮುಂಬೈ

ಶೀನಾ ಬೊರಾ ಹತ್ಯೆ ಕೇಸಿನ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಮುಂಬೈಯ ಬೈಕುಲ್ಲಾ ಜೈಲಿನ 38 ಮಂದಿ ಕೈದಿಗಳಿಗೆ ಕೊರೋನಾ

Pinterest LinkedIn Tumblr

ಮುಂಬೈ: ಶೀನಾ ಬೊರಾ ಹತ್ಯೆ ಕೇಸಿನ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಮುಂಬೈಯ ಬೈಕುಲ್ಲಾ ಜೈಲಿನ 38 ಮಂದಿ ಕೈದಿಗಳಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಜೈಲಿನ ಸಿಬ್ಬಂದಿ ದೃಢಪಡಿಸಿದ್ದಾರೆ.

ಹಣಕಾಸಿನ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದು 2012ರಲ್ಲಿ ಪತಿ ಪೀಟರ್ ಮುಖರ್ಜಿ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಸೇರಿದಂತೆ ಶೀನಾ ಬೊರಾರನ್ನು ಹತ್ಯೆ ಮಾಡಿರುವ ಆರೋಪವನ್ನು ಇಂದ್ರಾಣಿ ಮುಖರ್ಜಿ ಎದುರಿಸುತ್ತಿದ್ದಾರೆ. ಈ ಕೊಲೆ ಕೇಸು ಬೆಳಕಿಗೆ ಬಂದಿದ್ದು 2015ರಲ್ಲಿ.

ಈ ಹಿಂದೆ ಮಹಾರಾಷ್ಟ್ರದ ಪನ್ವೇಲ್ ನಲ್ಲಿರುವ ಪರಮ್ ಶಾಂತಿಧಾಮ ವೃದ್ಧಾಶ್ರಮದಲ್ಲಿರುವ 58 ಮಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು.

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 58 ಸಾವಿರದ 924 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ 52 ಸಾವಿರದ 412 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು 351 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 38 ಲಕ್ಷದ 98 ಸಾವಿರದ 262ಕ್ಕೆ ತಲುಪಿದ್ದರೆ ಸಾವಿನ ಸಂಖ್ಯೆ 60 ಸಾವಿರದ 824ಕ್ಕೆ ಏರಿಕೆಯಾಗಿದೆ. ಈ ಮಧ್ಯೆ, ಭಾರತದಲ್ಲಿ 3 ಲಕ್ಷ ಹೊಸ ಕೊರೋನಾ ಸೋಂಕು ಪತ್ತೆಯಾಗಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಕೊರೋನಾ ಸೋಂಕು ಭಾರತಕ್ಕೆ ಕಾಲಿಟ್ಟ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಸೋಂಕು ತಗುಲಿದವರು ಮತ್ತು ಮೃತಪಟ್ಟವರ ಸಂಖ್ಯೆ ಇದೇ ಮೊದಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ವರದಿ ಪ್ರಕಾರ, ಒಟ್ಟು 2 ಲಕ್ಷದ 95 ಸಾವಿರದ 041 ಕೋವಿಡ್ ಪ್ರಕರಣಗಳಿದ್ದು, 2 ಸಾವಿರದ 023 ಸಾವುಗಳು ಸಂಭವಿಸಿದೆ. ಒಟ್ಟು ಸೋಂಕಿತರ ಸಂಖ್ಯೆ ಇದುವರೆಗೆ ದೇಶದಲ್ಲಿ 1 ಕೋಟಿಯ 56 ಲಕ್ಷದ 16 ಸಾವಿರದ 130 ಆಗಿದ್ದು 21 ಲಕ್ಷದ 57 ಸಾವಿರದ 538 ಸಕ್ರಿಯ ಕೇಸುಗಳಿವೆ.

Comments are closed.